More

    ಹರಾಜಿನಲ್ಲಿ ಖರೀದಿಸಿದ ಆಟಗಾರರ ಬಗ್ಗೆ ಅಸಮಾಧಾನ; ಸನ್‌ರೈಸರ್ಸ್‌ಗೆ ಕಾಟಿಚ್ ರಾಜೀನಾಮೆ!

    ನವದೆಹಲಿ: ಐಪಿಎಲ್ ಮೆಗಾ ಹರಾಜಿನಲ್ಲಿ ಕೆಲ ಆಟಗಾರರನ್ನು ಅನಗತ್ಯವಾಗಿ ದೊಡ್ಡ ಮೊತ್ತದ ಬಿಡ್ ಸಲ್ಲಿಸಿ ಸನ್‌ರೈಸರ್ಸ್‌ ತಂಡಕ್ಕೆ ಸೇರಿಸಿಕೊಂಡ ಬಗ್ಗೆ ಸಹಾಯಕ ಕೋಚ್ ಸೈಮನ್ ಕಾಟಿಚ್ ಅಸಮಾಧಾನಗೊಂಡಿದ್ದು, ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊರನಡೆದಿದ್ದಾರೆ.

    ಹರಾಜಿನಲ್ಲಿ ಸನ್‌ರೈಸರ್ಸ್‌ ತಂಡ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ (₹10.75 ಕೋಟಿ), ವಾಷಿಂಗ್ಟನ್ ಸುಂದರ್ (₹8.75 ಕೋಟಿ), ರಾಹುಲ್ ತ್ರಿಪಾಠಿ (₹8.50 ಕೋಟಿ), ರೊಮಾರಿಯೊ ಶೆರ್ಡ್ (₹7.75 ಕೋಟಿ) ಮತ್ತು ಅಭಿಷೇಕ್ ಶರ್ಮ (₹6.5 ಕೋಟಿ) ಮೇಲೆ ಹೆಚ್ಚಿನ ಹೂಡಿಕೆ ಮಾಡಿತ್ತು. ಆದರೆ ಈ ಆಟಗಾರರಿಗೆ ಇಷ್ಟೊಂದು ದೊಡ್ಡ ಮೊತ್ತದ ಬಿಡ್ ಸಲ್ಲಿಸುವ ಅಗತ್ಯವಿರಲಿಲ್ಲ. ಪೂರನ್ ಇದುವರೆಗೆ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂಥ ನಿರ್ವಹಣೆ ತೋರಿಲ್ಲ. ಇನ್ನು ಅಭಿಷೇಕ್ ಶರ್ಮ ಕಳೆದ 4 ವರ್ಷಗಳಿಂದ ಸನ್‌ರೈಸರ್ಸ್‌ ತಂಡದಲ್ಲೇ ಇದ್ದರೂ, ಪಂದ್ಯ ಗೆಲ್ಲಿಸುವಂಥ ನಿರ್ವಹಣೆ ತೋರಿರಲಿಲ್ಲ. ಹೀಗಾಗಿ ತಂಡದ ಆಯ್ಕೆ ಬಗ್ಗೆ ಕಾಟಿಚ್‌ಗೆ ಸಮಾಧಾನವಿರಲಿಲ್ಲ. ಅವರ ರಾಜೀನಾಮೆಯನ್ನ ಸ್ವೀಕರಿಸಿರುವ ಸನ್‌ರೈಸರ್ಸ್‌ ಮ್ಯಾನೇಜ್‌ಮೆಂಟ್, ಆಸ್ಟ್ರೇಲಿಯಾದ ಮತ್ತೋರ್ವ ಮಾಜಿ ಆಟಗಾರ ಸೈಮನ್ ಹೆಲ್ಮೊಟ್ ಅವರನ್ನು ಹೊಸ ಸಹಾಯಕ ಕೋಚ್ ಆಗಿ ನೇಮಿಸಿದೆ.

    ಕಳೆದ ವಾರಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಾಟಿಚ್ ಜತೆಗೆ ಮುಖ್ಯ ಕೋಚ್ ಟಾಮ್ ಮೂಡಿ, ಮೆಂಟರ್‌ಗಳಾದ ಮುತ್ತಯ್ಯ ಮುರಳೀಧರನ್, ಬ್ರಿಯಾನ್ ಲಾರಾ ಮತ್ತು ತಂಡದ ಸಿಒಒ ಕಾವ್ಯ ಮಾರನ್ ಭಾಗವಹಿಸಿದ್ದರು. ಇದಲ್ಲದೆ, ಆ್ಘನ್ ಸ್ಪಿನ್ನರ್ ರಶೀದ್ ಖಾನ್ ಮನವೊಲಿಸಿ ರಿಟೇನ್ ಮಾಡಿಕೊಳ್ಳದ ಮತ್ತು ಮೊಣಕೈ ಗಾಯದ ಸಮಸ್ಯೆ ಹೊಂದಿರುವ ನಡುವೆಯೂ ಕೇನ್ ವಿಲಿಯಮ್ಸನ್‌ರನ್ನು ರಿಟೇನ್ ಮಾಡಿಕೊಂಡ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿದ್ದವು. ಜತೆಗೆ ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ ಮತ್ತು ಆಲ್ರೌಂಡರ್ ಅಬ್ದುಲ್ ಸಮದ್‌ರನ್ನು ತಲಾ 4 ಕೋಟಿ ರೂ. ಮೊತ್ತಕ್ಕೆ ರಿಟೇನ್ ಮಾಡಿಕೊಂಡಿದ್ದು ಕೂಡ ಅಚ್ಚರಿಗೆ ಕಾರಣವಾಗಿತ್ತು

    ಈ ಬಾರಿ ಬದಲಾವಣೆ ಇಲ್ಲವೇ ಇಲ್ಲ… ಮದುವೆ ವಿಚಾರದಲ್ಲಿ ಆರ್‌ಸಿಬಿಗೆ ಶಾಕ್ ನೀಡಿದ ಮ್ಯಾಕ್ಸ್‌ವೆಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts