More

    ಸಿಲ್ವರ್​ ಜ್ಯೂಬಿಲಿ ಆಫ್​ ಸಿಲ್ವರ್​ ಜ್ಯೂಬಿಲಿ … ಪುಟ್ನಂಜ ಚಿತ್ರವನ್ನು ನೆನಪಿಸಿಕೊಂಡ ರವಿಚಂದ್ರನ್​

    ಸಾಮಾನ್ಯವಾಗಿ ಒಂದು ಚಿತ್ರ ಬಿಡುಗಡೆಯಾಗಿ ಅಷ್ಟು ವರ್ಷ ಆಯ್ತು, ಇಷ್ಟು ವರ್ಷ ಆಯ್ತು ಎಂದು ನಟ-ನಟಿಯರು ನೆನಪಿಸಿಕೊಳ್ಳುವುದುಂಟು. ಆ ಚಿತ್ರದ ನೆನಪಿನ ಬುತ್ತಿಯನ್ನು ಅಭಿಮಾನಿಗಳ ಜತೆಗೆ ಹಂಚಿಕೊಳ್ಳುವುದುಂಟು. ಇತ್ತೀಚೆಗೆ ನಟಿ ಮಾಲಾಶ್ರೀ ಸಹ ‘ಪ್ರೇಮ ಖೈದಿ’ ಎಂಬ ತಮ್ಮ ತೆಲುಗು ಚಿತ್ರ 30 ವರ್ಷ ಪೂರೈಸಿದ್ದನ್ನು ಸೋಷಿಯಲ್​ ಮೀಡಿಯಾದಲ್ಲಿ ನೆನಪಿಸಿಕೊಂಡಿದ್ದರು.

    ಇದನ್ನೂ ಓದಿ: ಕರಣ್​ ಯಾರನ್ನೂ ಹಾಳು ಮಾಡೋಕೆ ಸಾಧ್ಯ ಇಲ್ಲ … ಹಾಗಂತ ಅನುರಾಗ್​ ಹೇಳಿದ್ದು ಯಾಕೆ?

    ಈಗ ನಟ-ನಿರ್ದೇಶಕ ರವಿಚಂದ್ರನ್​ ಅವರು ‘ಪುಟ್ನಂಜ’ ಚಿತ್ರ 25 ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ, ಇಲ್ಲಿ ಅವರು ಚಿತ್ರ 25 ವರ್ಷ ಪೂರೈಸಿದ್ದರ ಸಂತೋಷವನ್ನಷ್ಟೇ ಅಲ್ಲ, ಚಿತ್ರ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಸಿಲ್ವರ್​ ಜ್ಯೂಬಿಲಿ ಆಗಿ, 25 ವರ್ಷಗಳಾಗಿದ್ದು, ‘ಸಿಲ್ವರ್​ ಜ್ಯೂಬಿಲಿ ಆಫ್​ ಸಿಲ್ವರ್​ ಜ್ಯೂಬಿಲಿ …’ ಎಂದು ಸಂತೋಷ ಹಂಚಿಕೊಂಡಿದ್ದಾರೆ.

    ‘ಪುಟ್ನಂಜ’ ಚಿತ್ರವು 1995ರ ಆರಂಭದಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದಷ್ಟೇ ಅಲ್ಲ, ಹಂಸಲೇಖ ಅವರ ಹಾಡುಗಳು, ಪುಟ್ಮಲ್ಲಿ ಪಾತ್ರದಲ್ಲಿ ಉಮಾಶ್ರೀ ಅವರ ಅಭಿನಯ ಈಗಲೂ ಜನಪ್ರಿಯವಾಗಿವೆ. ಈ ಚಿತ್ರವು ರವಿಚಂದ್ರನ್​ ಅವರಿಗೆ ದೊಡ್ಡ ಯಶಸ್ಸು ಕೊಟ್ಟು, ಇನ್ನಷ್ಟು ಚಿತ್ರಗಳನ್ನು ಮಾಡುವುದಕ್ಕೆ ಪ್ರೇರೇಪಿಸಿದ್ದು ಸುಳ್ಳಲ್ಲ.

    ಇದನ್ನೂ ಓದಿ: ಚಿರಂಜೀವಿ ಮೀಸೆ ಯಾಕೆ ಬೋಳಿಸಿಕೊಂಡರು ಎಂದು ಕೊನೆಗೂ ಗೊತ್ತಾಯ್ತು …

    ಅಂದಹಾಗೆ, ‘ಪುಟ್ನಂಜ’ ಚಿತ್ರವು ‘ಪಟ್ಟಿಕ್ಕಾದ ಪಟ್ಟಣಮ್ಮ’ ಎಂಬ ತಮಿಳು ಚಿತ್ರದ ರೀಮೇಕ್​ ಆಗಿದ್ದು, ಮೂಲ ಚಿತ್ರದಲ್ಲಿ ಶಿವಾಜಿ ಗಣೇಶನ್​, ಜಯಲಲಿತಾ ಮುಂತಾದವರು ನಟಿಸಿದ್ದರು. ಇನ್ನು ಕನ್ನಡ ಅವತರಣಿಕೆಯಲ್ಲಿ ರವಿಚಂದ್ರನ್​, ಮೀನಾ, ಉಮಾಶ್ರೀ, ಲೋಕೇಶ್​ ಸೇರಿದಂತೆ ಪ್ರತಿಭಾವಂತರ ದಂಡೇ ಇತ್ತು. ರವಿಚಂದ್ರನ್​ ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಷ್ಟೇ ಅಲ್ಲ, ಈ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿದ್ದರು.

    ಅರುಂಧತಿ ಹಿಂದಿ ರಿಮೇಕ್​ನಲ್ಲಿ ದೀಪಿಕಾ ಪಡುಕೋಣೆ ನಾಯಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts