More

    ಕೇಳಿದ್ದು 50 ರೂ. ಕೊಟ್ಟಿದ್ದು 10 ರೂ. ; ಪ್ರೋತ್ಸಾಹಧನ ಕಡಿತ ಮಾಡಿದ್ದಕ್ಕೆ ರೇಷ್ಮೆ ಬೆಳೆಗಾರರ ಬೇಸರ

    ರಾಮನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಜಿಲ್ಲೆಯ ಮಟ್ಟಿಗೆ ಆಶಾದಾಯಕವಾಗಿಲ್ಲ. ಇದರ ಜತೆಗೆ ಸರ್ಕಾರವೇ ನೀಡುತ್ತಿದ್ದ ಪ್ರೋತ್ಸಾಹಧನ ಕಡಿತಗೊಳಿಸಿರುವುದು ಬೆಳೆಗಾರರ ಬೇಸರಕ್ಕೆ ಕಾರಣವಾಗಿದೆ.

    ಸದಾ ಬೆಲೆ ಕುಸಿತದ ನೋವಿನಲ್ಲಿಯೇ ಮಾರುಕಟ್ಟೆಯಿಂದ ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದ ಬೆಳೆಗಾರರು ಹಿಂದಿನಿಂದಲೂ ಪ್ರೋತ್ಸಾಹಧನಕ್ಕೆ ಆಗ್ರಹಿಸಿ ಹೋರಾಡುತ್ತಲೇ ಇದ್ದರು. ಇದರ ಲವಾಗಿ ಬೆಲೆ ಕುಸಿತ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಿಶ್ರ ತಳಿ ಗೂಡಿಗೆ ಪ್ರತಿ ಕೆಜಿಗೆ 30 ರೂ. ಹಾಗೂ ದ್ವಿತಳಿ ಗೂಡಿಗೆ 50 ರೂ. ನೀಡುವುದಾಗಿ ೋಷಣೆ ಮಾಡಿ, ಬೆಲೆ ಕುಸಿತ ಸಂದರ್ಭದಲ್ಲಿ ಇದನ್ನು ನೀಡಿತ್ತು. ಆದರೆ, ಈ ಬಾರಿ ಬಜೆಟ್‌ನಲ್ಲಿ ಪ್ರತಿ ಟನ್ ದ್ವಿತಳಿ ಗೂಡಿಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡುವುದಾಗಿ ಮುಖ್ಯಮಂತ್ರಿ ೋಷಣೆ ಮಾಡಿದ್ದಾರೆ. ಆದರೆ, ಪ್ರೋತ್ಸಾಹಧನ ಪ್ರತಿ ಕೆಜಿ ಗೂಡಿಗೆ 10 ರೂ.ಗೆ ಇಳಿಕೆ ಮಾಡಿದಂತೆ ಆಗಿದೆ.

    ಪ್ರತಿ ಒಂದು ಸಾವಿರ ಕೆ.ಜಿ. ದ್ವಿತಳಿ (ಬಿಳಿ)ಗೂಡಿಗೆ 10 ಸಾವಿರ ರೂ. ನೀಡುವುದಾಗಿ ಸರ್ಕಾರ ೋಷಣೆ ಮಾಡಿದೆ. ಇದರ ಮೂಲ ಉದ್ದೇಶ ದ್ವಿತಳಿ ರೇಷ್ಮೆ ಗೂಡಿನ ಉತ್ಪಾದನೆಯನ್ನು ಪ್ರೋತ್ಸಾಹಿಸುವುದೇ ಆಗಿದೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸರ್ಕಾರ ಈ ಹಿಂದೆ ತಾನೇ ಕೊಡುತ್ತಿದ್ದ 50 ರೂ. ಪ್ರೋತ್ಸಾಹಧನವನ್ನು 10 ರೂ.ಗೆ ಇಳಿಸಿದ್ದು ಏಕೆ ಎನ್ನುವ ಪ್ರಶ್ನೆ ರೈತರದ್ದು. ಇದರಿಂದ ಸರ್ಕಾರದ ಕೊಡುಗೆ ಪ್ರೋತ್ಸಾಹಧನ ಯಾವುದಕ್ಕೆ ಸಾಲುತ್ತದೆ? ಈ ಪ್ರೋತ್ಸಾಹಧನ ನೀಡುವ ಬದಲು ಸರ್ಕಾರವೇ ಇಟ್ಟುಕೊಳ್ಳಲಿ ಎನ್ನುವುದು ರೈತರ ಆಕ್ರೋಶವಾಗಿದೆ.

    ಮಿಶ್ರತಳಿ ಗೂಡಿನ ಕಥೆ ಏನು?: ಪ್ರಸ್ತುತ ರಾಮನಗರ ರೇಷ್ಮೆಗೂಡು ಮಾರುಕಟ್ಟೆಗೆ 5-6 ಟನ್ ಮಿಶ್ರ ತಳಿ ಗೂಡು ಹಾಗೂ ಸುಮಾರು 20 ಟನ್ ದ್ವಿತಳಿ ಗೂಡು ಮಾರುಕಟ್ಟೆಗೆ ಬರುತ್ತದೆ. ಇದು ಜಿಲ್ಲೆಯಲ್ಲಿ ಮಾತ್ರವಲ್ಲದೆ ಹೊರ ಜಿಲ್ಲೆಗಳು ಹಾಗೂ ರಾಜ್ಯದಿಂದಲೂ ಬರುವ ಗೂಡು ಸೇರಿದೆ. ರಾಮನಗರ ಜಿಲ್ಲೆ ಒಂದರಲ್ಲಿಯೇ ಪ್ರತಿ ವರ್ಷ 1200 ಮೆಟ್ರಿಕ್ ಟನ್ ಬಿಳಿಗೂಡು ಉತ್ಪಾದನೆ ಆಗುತ್ತದೆ. ಆದರೆ ಸರ್ಕಾರ ದ್ವಿತಳಿ ಗೂಡಿಗೆ ಮಾತ್ರ ಪ್ರತಿ ಕೆಜಿಗೆ 10 ರೂ. ಪ್ರೋತ್ಸಾಹಧನ ನೀಡುತ್ತೇನೆ ಎಂದು ೋಷಣೆ ಮಾಡಿದೆಯಾದರೂ ಮಿಶ್ರ ತಳಿ ಗೂಡಿಗೆ ಪ್ರೋತ್ಸಾಹಧನ ನೀಡುವ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಇದೂಸಹ ಮಿಶ್ರ ತಳಿ ಗೂಡು ಬೆಳೆಯುವ ರೈತರ ಬೇಸರಕ್ಕೂ ಕಾರಣ ಆಗಿದೆ.

    ಕೇಳಿದ್ದು 50 ಕೊಟ್ಟಿದ್ದು 10: ರಾಜ್ಯ ಸರ್ಕಾರ ಬಜೆಟ್ ಸಿದ್ಧಪಡಿಸುವ ಮುನ್ನಾ ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ನಡೆಸಿ ಬೇಡಿಕೆಗಳ ಪಟ್ಟಿ ಪಡೆದಿತ್ತು. ಈ ವೇಳೆ ಪ್ರತಿ ಕೆಜಿಗೆ ದ್ವಿತಳಿ ಗೂಡಿಗೆ 50 ರೂ. ಹಾಗೂ ಮಿಶ್ರ ತಳಿಗೆ 30 ರೂ. ಪ್ರೋತ್ಸಾಹಧನ ನೀಡುವಂತೆ ಬೆಳೆಗಾರರು ಆಗ್ರಹಿಸಿದ್ದರು. ಆದರೆ ಇಲಾಖೆಯಿಂದ ಪ್ರತಿ ಕೆ.ಜಿ. ದ್ವಿತಳಿ ಗೂಡಿಗೆ 20 ರೂ. ಪ್ರೋತ್ಸಾಹಧನ ನೀಡುವಂತೆ ಪ್ರಸ್ತಾವನೆಯೂ ಹೋಗಿತ್ತು. ಆದರೆ ಅಂತಿಮವಾಗಿ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು 10 ರೂ. ೋಷಣೆ ಮಾಡಿದ್ದಾರೆ.

    ಸದ್ಯಕ್ಕೆ ಬೇಕಿಲ್ಲ: ಸದ್ಯಕ್ಕೆ ರೇಷ್ಮೆಗೆ ಉತ್ತಮ ಬೆಲೆ ದೊರೆಯುತ್ತಿದೆ. ಈಗ ಸರ್ಕಾರ ನೀಡುವ ಪ್ರೋತ್ಸಾಹಧನದ ನಿರೀಕ್ಷೆಯಲ್ಲಿ ರೈತರು ಇಲ್ಲ. ಆದರೆ ಬಹುತೇಕ ಸಮಯದಲ್ಲಿ ರೇಷ್ಮೆ ಬೆಲೆ ಪಾತಾಳಕ್ಕೆ ಕುಸಿದು 100 ರೂ.ಗಳಿಗೂ ಕೇಳುವವರೇ ಇಲ್ಲದಂತೆ ಆಗಿತ್ತು. ಇಂತಹ ಸಂದರ್ಭದಲ್ಲಿ ಸರ್ಕಾರದ ನೆರವು ಅಗತ್ಯವಿದೆ. ಆದರೂ ಪ್ರೋತ್ಸಾಹಧನ ಪಡೆಯುವ ಸಲುವಾಗಿ ಹೋರಾಟದ ಹಾದಿ ಹಿಡಿಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಇದೀಗ ಸರ್ಕಾರ ೋಷಣೆ ಮಾಡಿರುವ ಪ್ರೋತ್ಸಾಹಧನ ಯಾವುದಕ್ಕೂ ಸಾಲದು ಎನ್ನುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ಸರ್ಕಾರ ನಮ್ಮ ಬಳಿ ಮಾತನಾಡಿದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರೋತ್ಸಾಹಧನ ನೀಡುವುದಾಗಿ ಹೇಳಿತ್ತು. ಆದರೆ ಈಗ ಪ್ರತಿ ಕೆಜಿಗೆ ಕೇವಲ 10 ರೂ. ನೀಡುತ್ತೇನೆ ಎಂದು ಹೇಳಿರುವುದು ನಿಜಕ್ಕೂ ನಿರಾಸೆ ಮೂಡಿಸಿದೆ. ಮಿಶ್ರ ತಳಿ ಬಗ್ಗೆ ಏನೂ ಹೇಳಲಿಲ್ಲ, ಈ ರೈತರ ಕಥೆ ಏನು? ಸರ್ಕಾರ ಕೂಡಲೇ ಗೊಂದಲ ನಿವಾರಿಸಬೇಕು. ಪ್ರತಿ ಕೆಜಿಗೆ ದ್ವಿತಳಿ ಗೂಡಿಗೆ 50 ರೂ. ಹಾಗೂ ಮಿಶ್ರ ತಳಿ ಗೂಡಿಗೆ 30 ರೂ. ಪ್ರೋತ್ಸಾಹಧನ ನೀಡಬೇಕು.
    ಕೆ.ರವಿ, ರೇಷ್ಮೆ ಬೆಳೆಗಾರ

    ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರ ಕಣ್ಣೊರೆಸುವ ತಂತ್ರ ಮಾಡಿದೆ. ಪ್ರತಿ ಟನ್‌ಗೆ 10 ಸಾವಿರ ರೂ. ನೀಡುತ್ತೇನೆ ಎನ್ನುವ ಮೂಲಕ ರೈತರ ದಾರಿ ತಪ್ಪಿಸುತ್ತಿದೆ. ಸರ್ಕಾರಕ್ಕೆ ನಿಜವಾಗಲೂ ರೇಷ್ಮೆ ಬೆಳೆಗಾರರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಡಾ. ಬಸವರಾಜ ಸಮಿತಿ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲಿ.
    ಡಿ.ಕೆ.ಸುರೇಶ್, ಸಂಸದ, ಬೆಂಗಳೂರು ಗ್ರಾಮಾಂತರ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts