More

    ಸಿದ್ಧಗೊಂಡಪ್ಪ ‘ಸಿದ್ಧೇಶ್ವರ ಸ್ವಾಮೀಜಿ’ ಆದದ್ದು ಹೀಗೆ…

    ಬೆಂಗಳೂರು: ತಂದೆ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಖ್ಯಾತ ಚಿತ್ರ ಕಲಾವಿದ ಓಗೆಪ್ಪ ಬಿರಾದಾರ, ತಾಯಿ ಸಂಗಮ್ಮ. ಈ ದಂಪತಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು. ಹಿರಿಯ ಮಗ ಸಿದ್ಧಗೊಂಡಪ್ಪನೇ ಈ ಸಿದ್ಧೇಶ್ವರ ಶ್ರೀಗಳು.

    ಶ್ರೀಗಳು ಬಿಜ್ಜರಗಿ ಗ್ರಾಮದಲ್ಲಿ 4ನೇ ತರಗತಿವರೆಗೆ ಕಲಿತರು. ‘ಬೆಳೆವ ಸಿರಿ ಮೊಳಕೆ’ಯಲ್ಲಿ ಎಂಬಂತೆ ಶ್ರೀಗಳಿಗೆ ಬಾಲ್ಯದಿಂದಲೂ ಚುರುಕುಬುದ್ಧಿ. 1955-56ರಲ್ಲಿ ಮುಲ್ಕಿ (7ನೇ ವರ್ಗ) ಪರೀಕ್ಷೆ ಬರೆಯಲು ವಿಜಯಪುರದ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿಗೆ ಬಂದಾಗ, ಶಾಲೆ ಸಮೀಪವೇ ಇದ್ದ ಶಿವಾನುಭವ ಮಂಟಪದಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು ಹೇಳುತ್ತಿದ್ದ ಅಧ್ಯಾತ್ಮ ಪ್ರವಚನ ಅವರ ಮನಸ್ಸನ್ನು ಸೆಳೆಯಿತು. ಹೀಗೆ ಅನನರ ಸಾಂಗತ್ಯ ಬೆಳೆದಿತ್ತು.

    1957ರಲ್ಲಿ ಮಲ್ಲಿಕಾರ್ಜುನ ಶ್ರೀಗಳು ಚಡಚಣದಲ್ಲಿ ಪ್ರವಚನ ಆರಂಭಿಸಿದಾಗ ಅಲ್ಲಿಗೆ ಬಾಲಕ ಸಿದ್ಧಗೊಂಡಪ್ಪನನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಯೇ ಆತನನ್ನು ಪ್ರೌಢಶಾಲೆಗೆ ಸೇರಿಸಿ ಮುಂದಿನ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟರು. ಚಡಚಣದಲ್ಲಿ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಸಿದ್ದಗೊಂಡಪ್ಪನನ್ನು ಅಧಿಕೃತ ಶಿಷ್ಯನನ್ನಾಗಿ ಸ್ವೀಕರಿಸಿ ‘ಸಿದ್ಧೇಶ್ವರ’ ಎಂದು ನಾಮಕರಣ ಮಾಡಿದರು.

    ನಂತರ ಸಿದ್ಧೇಶ್ವರ ಶ್ರೀಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರ ವಿಷಯದಲ್ಲಿ ಉನ್ನತ ಶ್ರೇಣಿಯಲ್ಲಿ ಎಂ.ಎ., ಸ್ನಾತಕೋತ್ತರ ಪದವಿ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts