More

    ಮರೆಯಾದ ಮಹಾಚೇತನ; ಇದುವೇ ಜ್ಞಾನಯೋಗಿಯ ಪ್ರವಚನ ಸಾರ

    ವಿಜಯಪುರ: ಸಿದ್ಧೇಶ್ವರ ಶ್ರೀಗಳು ತಮ್ಮ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಗಳಂತೆಯೇ ಕರ್ನಾಟಕ, ಮಹಾರಾಷ್ಟ್ರದ ಪ್ರಮುಖ ನಗರಗಳು, ಗ್ರಾಮಗಳಲ್ಲಿ ತಿಂಗಳುಗಟ್ಟಲೇ ಪ್ರವಚನ ನೀಡುತ್ತಿದ್ದರು. ಅವರ ಪ್ರವಚನ ಕೇಳಿದವರು ಅವರಲ್ಲಿ ಅನುರಕ್ತರಾಗಿ ಬಿಡುತ್ತಿದ್ದರು. ಎಲ್ಲೇ ಪ್ರವಚನ ಏರ್ಪಡಿಸಿದರೂ ಅಲ್ಲಿಗೆ ಸುತ್ತಮುತ್ತಲ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರವಚನವನ್ನು ಆಲಿಸುತ್ತಿದ್ದರು. ವಿಶೇಷವೆಂದರೆ ಮುಂಜಾನೆ ನಡೆಯುವ ಒಂದು ಗಂಟೆಯ ಪ್ರವಚನದ ಸಮಯದಲ್ಲಿ ಭಕ್ತರು ತನ್ಮಯತೆಯಿಂದ ಕುಳಿತು ಶ್ರೀಗಳ ಪ್ರವಚನ ಆಲಿಸುತ್ತಿದ್ದರು.

    ಶ್ರೀಗಳದ್ದು ಸೂಜಿಗಲ್ಲಿನಂತಹ ಸೆಳೆತ, ಸರಳ ಭಾಷೆ, ಆದರೂ ಅದ್ಭುತ, ಸುಂದರ ಧಾಟಿ, ಪದ ಪ್ರಯೋಗ, ಸಣ್ಣ ಉಪಮೇಯಗಳ, ಕಥೆಗಳ ಮೂಲಕ ಪ್ರವಚನದಲ್ಲಿಯೇ ಜೀವನದ ಪಾಠವನ್ನು ಸಮ್ಮಿಳಿತಗೊಳಿಸಿ ಸರಳವಾಗಿ ಎಲ್ಲರಿಗೂ ಅರಿವು ಮೂಡಿಸುತ್ತಿದ್ದರು. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತಿದ್ದರು. ಅವರು ಪ್ರತಿ ಜೀವಿಗೂ ಬದುಕುವ ಹಕ್ಕಿದೆ ಎಂಬುದನ್ನು ಮನದಟ್ಟು ಮಾಡುತ್ತಿದ್ದರು.

    ಕಲ್ಲು, ಮಣ್ಣು, ಗಿಡ, ಮರ, ಹೂ, ಹಣ್ಣು, ಪಕ್ಷಿ, ಪ್ರಾಣಿಗಳಲ್ಲಿ ಜೀವ ಚೈತನ್ಯವಿದೆ ಎಂಬುದನ್ನು ವಿವರಿಸುತ್ತಿದ್ದರು. ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ಧೇಶ್ವರ ಸ್ವಾಮೀಜಿಯವರು ಮುಂದುವರಿಸಿಕೊಂಡು ಬರುತ್ತಿದ್ದರೂ ಯಾವ ಸಂಸ್ಥೆಗಳಿಗೂ ಆಶ್ರಮದ ಹೆಸರಾಗಲಿ, ಅವರ ಹೆಸರನ್ನಾಗಲಿ ಬಳಸುತ್ತಿರಲಿಲ್ಲ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ದಾಸವಾಣಿಯಂತೆ ಎಲ್ಲವೂ ಭಗವಂತನದು ಎಂಬ ಭಾವ ಶ್ರೀಗಳದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts