More

    ಸಿದ್ಧರಾಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

    ಮೋರಟಗಿ (ಸಿಂದಗಿ) : ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಸಿದ್ಧರಾಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆ ಚೇರ್‌ಮನ್ ಬಿ.ಐ.ಮಸಳಿ ತಿಳಿಸಿದ್ದಾರೆ.

    ಸಿಂದಗಿ ಪಟ್ಟಣದಲ್ಲಿ ನಡೆದ ವಿವಿಧ ಕ್ರೀಡೆಗಳ ಪೈಕಿ 144 ಮೀ.ಓಟದಲ್ಲಿ ನಾಗಪ್ಪ ಬಂಡಿವಡ್ಡರ ಪ್ರಥಮ, 1500 ಮೀ.ಓಟದಲ್ಲಿ ಮಹೇಶ ತಳವಾರ ಪ್ರಥಮ, ಚಕ್ರ ಎಸೆತದಲ್ಲಿ ದರ್ಶನ್ ಮಠ ಪ್ರಥಮ, ಉದ್ದ ಜಿಗಿತದಲ್ಲಿ ಶಿವುಕುಮಾರ ಬಂಡಿವಡ್ಡರ, ಖೋಖೊದಲ್ಲಿ ಪ್ರಥಮ, 200 ಮೀ.ಓಟದಲ್ಲಿ ರೂಪಾ ಬಿರಾದಾರ ಪ್ರಥಮ, 400 ಮೀ. ಓಟದಲ್ಲಿ ಮೇಘನಾ ಬಿರಾದಾರ ಪ್ರಥಮ, 800 ಮೀ.ಓಟದಲ್ಲಿ ಪ್ರಿಯಾಂಕಾ ಬಳೂರಗಿ ಪ್ರಥಮ, 1500 ಮೀ.ಓಟದಲ್ಲಿ ಸಾನಿಯಾ ಮುಲ್ಲಾ ಪ್ರಥಮ, ಉದ್ದ ಜಿಗಿತದಲ್ಲಿ ಮೇಘ ಬಿರಾದಾರ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಎಂ.ಎಸ್.ಪಾಟೀಲ, ಪ್ರಾಚಾರ್ಯ ಟಿ.ಎನ್.ಲಮಾಣಿ, ಮುಖ್ಯಗುರು ಬಿ.ಎಸ್.ಪಾಟೀಲ, ಸಂಸ್ಥೆ ಆಡಳಿತ ಮಂಡಳಿ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts