More

    ಕ್ರಾಂತಿಕಾರಿ ಸೇನಾನಿ ಸಂಗೊಳ್ಳಿ ರಾಯಣ್ಣ ಆದರ್ಶ ಪಾಲಿಸಿ

    ಮೋರಟಗಿ: ಸ್ವಾತಂತ್ರ್ಯದ ಕ್ರಾಂತಿಯ ಕಿಡಿ ಹಚ್ಚಿದ ಕರ್ನಾಟಕದ ಗಂಡೆದೆಯ ಹೋರಾಟಗಾರ, ಬ್ರಿಟಿಷರ ನಿದ್ದೆಗೆಡಿಸಿದ ಕ್ರಾಂತಿ ಪುರುಷ ರಾಯಣ್ಣಅವರ ದೇಶಭಕ್ತಿ ಕುರಿತು ಮಕ್ಕಳಿಗೆ ತಿಳಿಸಬೇಕು ಎಂದು ತಮ್ಮಣ್ಣಸಾಹು ಬೋನಾಳ ಹೇಳಿದರು.

    ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ಅವರ ಹುತಾತ್ಮ ದಿನ ಹಾಗೂ ಗಣರಾಜ್ಯೋತ್ಸವ ಅವರು ಮಾತನಾಡಿದರು.

    ಪ್ರೀತಿ ವಿಶ್ವಾಸಕ್ಕೆ ಇನ್ನೊಂದು ಹೆಸರೇ ರಾಯಣ್ಣ. ಅವರ ಧೈರ್ಯ, ಶೌರ್ಯ, ಮೆಚ್ಚುವಂಥದ್ದು. ಕಿತ್ತೂರು ರಾಣಿ ಚನ್ನಮ್ಮರ ಬಲಗೈ ಬಂಟನಾಗಿ ಹೆತ್ತ ತಾಯಿಗಿಂತ ಹೆಚ್ಚು ಆರಾಧಿಸಿ ಅವರ ಆಜ್ಞೆಯಂತೆ ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಸೇನಾನಿ ಸಂಗೊಳ್ಳಿ ರಾಯಣ್ಣರ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

    ಶಿವಾನಂದ ಕೆರಿಗೊಂಡ ಮಾತನಾಡಿ, ವಿಶ್ವದಲ್ಲೇ ಶ್ರೇಷ್ಠವಾದ ಸಂವಿಧಾನ ನಮ್ಮದು. ನಾವೆಲ್ಲರೂ ಡಾ.ಬಾಬಾಸಾಹೇಬ್ ಅವರ ಆಶಯದಂತೆ ಸಂವಿಧಾನ ಅಡಿಯಲ್ಲಿ ನಡೆದುಕೊಳ್ಳಬೇಕು. ನಮ್ಮ ದೇಶದ ಕಾನೂನನ್ನು ಗೌರವಿಸಬೇಕು ಎಂದರು.

    ರಾವುತರಾಯ ಪೂಜೇರಿ, ಶಿವಶರಣ ಕೆರಿಗೊಂಡ, ಭೀಮು ನಾಯಕ, ನಿಂಗಣ್ಣ ಪೂಜಾರಿ, ಶಿವಾನಂದ ಕೆರಿಗೊಂಡ, ಹನುಮಂತ ಹೂಗಾರ, ಕನಕಸೇನೆ ಅಧ್ಯಕ್ಷ, ಶಿವಾನಂದ ಕೆರಿಗೊಂಡ, ರಾಯಣ್ಣ ಯುವಸೇನೆ ಅಧ್ಯಕ್ಷ ಮಂಜು ಮಯೂರ, ಸಂತೋಷ ಕೆರಿಗೊಂಡ, ಕೆಂಚು ಪೂಜಾರಿ, ಗುರು ಅಗಸರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts