More

    ಜುಲೈ 3ಕ್ಕೆ ಬಜೆಟ್​ ಅಧಿವೇಶನ ಪ್ರಾರಂಭವಾಗಬಹುದು: ಸಿಎಂ ಸಿದ್ದರಾಮಯ್ಯ

    ದಾವಣಗೆರೆ: ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಹುತೇಕ ಜುಲೈ 3ಕ್ಕೆ ಬಜೆಟ್ ಅಧಿವೇಶನ ಆರಂಭವಾಗಲಿದೆ ಎಂದು ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, “ಜುಲೈ 3ಕ್ಕೆ ಅಧಿವೇಶನ ಪ್ರಾರಂಭವಾದರೆ ಜುಲೈ 7ಕ್ಕೆ ಬಜೆಟ್ ಮಂಡನೆ ನಡೆಯಲಿದೆ” ಎಂದಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯುತ್​ ದರ ಏರಿಕೆ, ಗೋಹತ್ಯೆ ಕಾಯ್ದೆ ತಿದ್ದುಪಡಿ ಮುಂತಾದ ವಿಚಾರಗಳ ಬಗ್ಗೆ ಮಾತನಾಡಿರುವ ಸಿಎಂ, “ವಿದ್ಯುತ್ ದರ ಹೆಚ್ಚಳ ನಾವು ಮಾಡಿಲ್ಲ, ಕೆ.ಇ.ಆರ್.ಸಿ ನವರು ಮಾಡಿದ್ದಾರೆ. ನಾವು ಬರೋ ಮುಂಚನೆ ರೆಗ್ಯುಲೆಟರಿ ಆ್ಯಕ್ಟ್ ಪ್ರಕಾರ ದರ ಪರಿಷ್ಕರಣೆ ಮಾಡಿದ್ದಾರೆ” ಎಂದಿದ್ದಾರೆ.

    ಇದನ್ನೂ ಓದಿ: ನಿಗಮ-ಮಂಡಳಿ ಲೆಕ್ಕಾಚಾರ ಶುರು: ಪ್ರಮುಖರ ಮೇಲೆ ಆಕಾಂಕ್ಷಿಗಳ ಒತ್ತಡ; ಬಜೆಟ್ ಮಂಡನೆ ಬಳಿಕ ನೇಮಕ ಪ್ರಕ್ರಿಯೆ

    ಇನ್ನು ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಪ್ರತಿಕ್ರಿಯಿಸಿ “1964 ರಲ್ಲಿ ಕಾನೂನು ಆಗಿದೆ, ನಂತರ ತಿದ್ದುಪಡಿಗಳಾಗಿವೆ. ಅದನ್ನ ಕ್ಯಾಬಿನೆಟ್​ನಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ತಗೋತಿವಿ. ಮುಂಗಾರು ಬಿತ್ತನೆ ಬಗ್ಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಸಿಇಓ ಜೊತೆ ಮಾತನಾಡಿದ್ದೀನಿ. ಬಿತ್ತನೆಗೆ ಬೀಜ ಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಬೇಕು ಅಂತ ಸೂಚನೆ ಕೊಟ್ಟಿದ್ದೇನೆ” ಎಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts