More

    ಜಾತಿಗಣತಿ ವರದಿ ಸಲ್ಲಿಕೆಯಾಗುವವರೆಗೂ ಊಹೆಗಳ ಮೇಲೆ ಮಾತನಾಡುವುದು ಅರ್ಥಹೀನ : ಸಿದ್ದರಾಮಯ್ಯ

    ಬೆಂಗಳೂರು: ಜಾತಿಗಣತಿಯ ಕುರಿತಾಗಿ ಈಗಾಗಲೇ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಜಾತಿಗಣತಿ ಅಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಅಂತ ಕೆಲವರು ಹೇಳಿದ್ದರು. ಈ ಕುರಿತಾಗಿ ಗೊಂದಲ ಉಂಟಾಗುತ್ತಿದ್ದಂತೆ ಕೆಲವರು ಈ ವರದಿ ಜಾರಿಯಾಗಬೇಕೇ ಅಥವಾ ಬೇಡವೇ? ಎಂಬ ಚರ್ಚೆ ಹುಟ್ಟು ಹಾಕಿದ್ದರು.

    ಎಚ್‌. ಕಾಂತರಾಜು ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015’ ವರದಿಯ (ಜಾತಿ ಗಣತಿ – Caste Census) ಮೂಲ ಅಥವಾ ಹಸ್ತ ಪ್ರತಿ ಲಭ್ಯವಿಲ್ಲ ಎನ್ನುವ ವಿಚಾರ ಜನಸಾಮಾನ್ಯರಲ್ಲಿ ಗೊಂದಲ ಉಂಟು ಮಾಡಿತ್ತು.

    ನಾನು ಕೊಟ್ಟಿರೋ ವರದಿ ನೈಜವಾಗಿದೆ ಮತ್ತು ವೈಜ್ಞಾನಿಕವಾಗಿದೆ ಎಂದು ಜಾತಿಗಣತಿ ಸಿದ್ಧ ಮಾಡಿದ್ದ ಆಯೋಗದ ಅಧ್ಯಕ್ಷ ಕಾಂತರಾಜು ಇಂದು ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸೋಶಿಯಲ್​​ ಮೀಡಿಯಾದಲ್ಲಿ ಟ್ವೀಟ್​​ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ಸಿದ್ದರಾಮಯ್ಯ ಅವರ ಟ್ವೀಟ್​​ನಲ್ಲಿ ಏನಿದೆ?: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಲ್ಲಿಸುವ ಮುನ್ನವೇ ವರದಿ ಜಾರಿಯಾಗಬೇಕೇ ಅಥವಾ ಬೇಡವೇ? ಎಂಬ ಚರ್ಚೆ ಶುರುವಾಗಿದೆ. ವರದಿಯಲ್ಲೇ ಏನಿದೆ ಎಂದು ಅದನ್ನು ಸ್ವೀಕರಿಸಬೇಡಿ ಎನ್ನುವವರಿಗೂ ಗೊತ್ತಿಲ್ಲ. ವರದಿ ಸಲ್ಲಿಕೆಯಾದ ನಂತರ ನೋಡೋಣ. ಈಗಲೇ ಸುಮ್ಮನೆ ಊಹೆಗಳ ಮೇಲೆ ಮಾತನಾಡುವುದು ಅರ್ಥಹೀನ ಎಂದು ಟ್ವೀಟ್​​ ಮಾಡಿದ್ದಾರೆ.

    ಕಾಂತರಾಜು ಮಾತನಾಡಿ, ನಾನು ಕೊಟ್ಟ ವರದಿ ನೈಜವಾಗಿದೆ, ವೈಜ್ಞಾನಿಕವಾಗಿದೆ. ವರದಿ ನೋಡದೇ ವರದಿ ಅವೈಜ್ಞಾನಿಕ ಅನ್ನೋದು ಸರಿಯಲ್ಲ. ಮೂಲ ಪ್ರತಿ ಕಾಣೆಯಾಗಿದೆ ಅನ್ನೋದು ನನಗೆ ಗೊತ್ತಿಲ್ಲ. ನಾನು ವರದಿ ಕೊಟ್ಟಿದ್ದು 2019ರಲ್ಲಿ. ನಾನು ಇದ್ದಾಗ ಮೂಲ ಪ್ರತಿ ಇತ್ತು. ಈಗ ಇಲ್ಲ ಅನ್ನೋದು ನನಗೆ ಗೊತ್ತಿಲ್ಲ. ಈಗ ನಾನು ಹೊರಗೆ ಇದ್ದು ಮಾತಾಡೋದು‌ ಸರಿಯಲ್ಲ. ಇದು ಜಾತಿಗಣತಿ ಅಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಅಂತ ಸ್ಪಷ್ಟಪಡಿಸಿದರು. ನಾನು ವರದಿ ಕೊಟ್ಟಿದ್ದೇನೆ. ಯಾರು ಬೇಕಾದರೂ ಅಭಿಪ್ರಾಯ ಹೇಳಬಹುದು. ರಿಜೆಕ್ಟ್ ಮಾಡಿ ಅಂತ ಹೇಳಬಹುದು. ಆದರೆ ಮೊದಲು ವರದಿ ನೋಡಲಿ, ಆಮೇಲೆ ಯಾರು ಏನು ಬೇಕಾದ್ರು ಹೇಳಲಿ. ವರದಿ ನೋಡದೇ ಸರಿಯಿಲ್ಲ ಅನ್ನೋದು‌ ಸರಿಯಲ್ಲ. 40 ದಿನ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಗಿದೆ. ಜಾತಿ, ಲಿಂಗ, ಧರ್ಮ, ಅಸ್ತಿ-ಪಾಸ್ತಿ ಎಲ್ಲವೂ ಸೇರಿ ‌55 ಪ್ರಶ್ನೆ ಕೇಳಿದ್ದೇವೆ. ಸಮೀಕ್ಷೆಯಾದ ಮೇಲೆ ಕೂಲಂಕಷವಾಗಿ ಅಂಕಿಅಂಶಗಳ ಸಮೇತ ವರದಿ ಸಿದ್ಧ ಮಾಡಲಾಗಿದ ಎಂದಿದ್ದಾರೆ.

    ನಮ್ಮ ವರದಿ ನೈಜವಾಗಿ, ವೈಜ್ಞಾನಿಕವಾಗಿದೆ: ಎಲ್ಲಾ ವದಂತಿಗೆ ತೆರೆ ಎಳೆದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts