More

    ಪುನರ್ಜನ್ಮದ ಮೇಲೆ ನಂಬಿಕೆ ಇಲ್ಲ ಅಂದ್ರು ಸಿದ್ದರಾಮಯ್ಯ: ನಾವು ನಂಬುತ್ತೇವೆ ಎಂದರು ಸ್ಪೀಕರ್

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದ ಕುರಿತು ಬಿಸಿಬಿಸಿ ಚರ್ಚೆ ನಡುವೆಯೇ ವಿರೋಧ ಪಕ್ಷದ ನಾಯಕ ಮತ್ತು ಸ್ಪೀಕರ್ ಮಧ್ಯೆ ಪುನರ್ಜನ್ಮದ ಬಗ್ಗೆ ಕುತೂಹಲಕಾರಿ ಚರ್ಚೆ ನಡೆಯಿತು. 6 ಸಚಿವರು ನ್ಯಾಯಾಲಯದಿಂದ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುದ್ದಿ ಪ್ರಸಾರ, ಮುದ್ರಿಸದಂತೆ ಇಂಜಂಕ್ಷನ್ ಆದೇಶ ತಂದಿರುವುದು ಹಾಗೂ ಮಾಜಿ ಸಚಿವರ ಅಶ್ಲೀಲ ಸಿಡಿ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಯಿತು.

    ವಿಷಯದ ಕುರಿತಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುವಾಗ, ಸಮ್ಮಿಶ್ರ ಸರ್ಕಾರ ಬೀಳಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋದ 17 ಜನರ ಪೈಕಿ 6 ಜನರು ನ್ಯಾಯಾಲಯದಿಂದ ತಡೆಯಾಜ್ಞೆ​ ಆದೇಶ ತಂದಿದ್ದಾರೆ. ಅವರೊಂದಿಗಿದ್ದ ಗೋಪಾಲಯ್ಯ ಯಾಕೆ ನ್ಯಾಯಾಲಯದ ಮೊರೆ ಹೋಗಲಿಲ್ಲ ಎಂದು ಪ್ರಶ್ನಿಸಿದರು. ಆಗ ಎದ್ದುನಿಂತ ಸಚಿವ ಗೋಪಾಲಯ್ಯ, 6 ಸಚಿವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನಾನು ವಿಧಾನಪರಿಷತ್‌ನಲ್ಲಿದ್ದೆ. ಹೀಗಾಗಿ ನಾನು ಅರ್ಜಿ ಸಲ್ಲಿಸಲಾಗಲಿಲ್ಲ. ಮರುದಿನ ನಾನು ಅರ್ಜಿ ಸಲ್ಲಿಸಬೇಕೆಂದಿದ್ದೆ, ಆದರೆ ಅದು ಮಾಡಲಿಲ್ಲ. ನಾವೆಲ್ಲ ಒಟ್ಟಿಗೆ ಇದ್ದೇವೆ. ಯಾವ ರೀತಿಯ ತಪ್ಪು ಕೂಡ ನಮ್ಮಿಂದ ಆಗಿಲ್ಲ ಎಂದರು.

    ಇದನ್ನೂ ಓದಿ: 10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು

    ಅದಕ್ಕೆ ಸಿದ್ದರಾಮಯ್ಯ, ಒಟ್ಟಿಗೆ ಇರೋದು ಬೇಡ ಎಂದು ನಾನೆಲ್ಲಿ ಹೇಳಿದ್ದೇನೆ. ಒಟ್ಟಿಗೆ ಇರಿ, ಮುಂದುವರಿಯಿರಿ, ಮುಂದಿನ ಜನ್ಮದಲ್ಲೂ ಒಟ್ಟಿಗೆ ಇರಿ ಎಂದರು. ನಂತರ ನನಗೆ ಪುನರ್ಜನ್ಮದ ಬಗ್ಗೆ ನಂಬಿಕೆ ಇಲ್ಲ. ನಾನು ಬಸವಾದಿ ಶರಣರ ಮಾತು ನಂಬುತ್ತೇನೆ. ಕುವೆಂಪು ಅವರು ಹೇಳಿದ ಹಾಗೆ, ಹುಟ್ಟುವಾಗ ವಿಶ್ವಮಾನವ, ಸಾಯುವಾಗ ಅಲ್ಪಮಾನವ ಎಂಬ ಮಾತಿನಂತೆ ಬಾಳುವುದು ನನಗೆ ಸಾಧ್ಯವಿಲ್ಲ. ಇಲ್ಲೇ ಸ್ವರ್ಗ, ಇಲ್ಲೇ ನರಕ ಎಂದು ನಂಬಿದವನು ನಾನು. ಎಲ್ಲರೂ ಸಮಾನರು ಎಂಬ ಅಭಿಪ್ರಾಯ ಹೊಂದಿದ್ದೇನೆ ಎಂದು ಹೇಳಿದರು.

    ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಾನು ಪುನರ್ಜನ್ಮದ ಮೇಲೆ ನಂಬಿಕೆ ಇಟ್ಟಿದ್ದೇನೆ. ಈ ಬಗ್ಗೆ ನಾನು-ನೀವು ಒಮ್ಮೆ ಚರ್ಚೆ ಮಾಡಬೇಕಲ್ಲ ಎಂದರು. ಅದಕ್ಕೆ ಸಿದ್ದರಾಮಯ್ಯ, ಅದಕ್ಕೇನಂತೆ ಮಾಡೋಣ ಎಂದು ಹೇಳಿದರು. ಕೂಡಲೆ ಆ ಬಗ್ಗೆ ಮಾತು ಆರಂಭಿಸುತ್ತಾರೆ ಎಂದು ತಿಳಿದ ಸ್ಪೀಕರ್, ಸದನದಲ್ಲಿ ಚರ್ಚೆ ಮಾಡುವುದು ಬೇಡ. ನನ್ನ ಕಚೇರಿಯಲ್ಲಿ ಈ ಬಗ್ಗೆ ಚರ್ಚಿಸೋಣ ಎಂದರು. ಆಯ್ತು ಸಮಯ ನಿಗದಿ ಮಾಡಿ. ನಿಮ್ಮ ಕಚೇರಿಗೇ ಬರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿ ಚರ್ಚೆ ಅಂತಿಮಗೊಳಿಸಿದರು.

    ಬಟ್ಟೆ ಹಾಕೋದು-ಬಿಚ್ಚುವುದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ: ಚೆನ್ನಾಗಿ ಕಾಣಿಸಬೇಕಂತ ಸಿದ್ದರಾಮಯ್ಯ ಕಲರ್ ಬಟ್ಟೆ ತಗೋಳೋಕೆ ಶುರುಮಾಡಿದ್ದಾರಂತೆ!

    ರೊಚ್ಚಿಗೆದ್ದು ಪೊಲೀಸರನ್ನೇ ಥಳಿಸಿದ ಸಾರ್ವಜನಿಕರು; ಅಡ್ಡಗಟ್ಟಿದ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಬಿದ್ದ ಬೈಕ್ ಸವಾರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts