More

    ಬಿಜೆಪಿಯವರು ಗಾಂಧೀಜಿಯನ್ನು ಕೊಂದ ವಂಶದವರು; ಗಾಂಧಿ ಪ್ರತಿಮೆ ಮುಂದೆ ಕೂರಲು ಇವರಿಗೆ ಯಾವ ನೈತಿಕತೆಯಿದೆ: ಸಿಎಂ

    ಬೆಂಗಳೂರು: ನಾನು 14 ಬಜೆಟ್ ಮಂಡಿಸಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ವಿಪಕ್ಷದವರ ಗೈರು ಹಾಜರಿಯಲ್ಲಿ ಉತ್ತರ ಕೊಡುತ್ತಿರುವುದು. ಜನವಿರೋಧಿ ನಿಲುವು ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಬಿಜೆಪಿ ಮತ್ತು ಜೆಡಿಎಸ್‌ ಅವರದ್ದು ಪ್ರಜಾಪ್ರಭುತ್ವ ವಿರೋಧಿ ವರ್ತನೆ ಎಂದು ಸಿಎಂ ಸಿದ್ದರಾಮಯ್ಯ ಇಂದಿನ ಸದನದಲ್ಲಿ ಆರೋಪಿಸಿದರು.

    ಇದನ್ನೂ ಓದಿ: ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಸಿದವರಿಗೆ ತಟ್ಟಿದ ದಂಡದ‌ ಬಿಸಿ!

    “ಉಪ ಸಭಾಧ್ಯಕ್ಷರ ವಿರುದ್ಧ ಅನಾಗರೀಕವಾಗಿ ವರ್ತಿಸಿದ್ದಾರೆ. ಮಾರ್ಷಲ್ ಇಲ್ಲದಿದ್ದರೇ ಏನು ಮಾಡುತ್ತಿದ್ದರೋ ತಿಳಿದಿಲ್ಲ. ಸದ್ಯ 10 ಮಂದಿ ಬಿಜೆಪಿಗರನ್ನು ಅಮಾನತು ಮಾಡಿದ್ದೀವಿ, ಅವರನ್ನು ಹೊರತುಪಡಿಸಿ ಉಳಿದವರು ಬರಬಹುದಿತ್ತು. ಪರಿಷತ್ತಿಗೆ ಹಾಜರಾಗದೆ ಮಹಾತ್ಮ ಗಾಂಧಿಯ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಇವರು ನಾಥುರಾಮ್ ಗೂಡ್ಸೆ ಮುಂದೆ ಕುಳಿತು ಹೋರಾಟ ಮಾಡಬೇಕಿತ್ತು. ಗಾಂಧೀಜಿಯವರನ್ನು ಕೊಂದ ವಂಶದವರು ಬಿಜೆಪಿಯವರು” ಎಂದು ಆರೋಪಿಸಿದರು.

    “ಶಾಂತಿ ಸಂದೇಶ ಸಾರಿದ ಗಾಂಧಿ ಅವರ ಪ್ರತಿಮೆ ಮುಂದೆ ಬಿಜೆಪಿಯವರು ಕುಳಿತ್ತಿದ್ದಾರೆ. ಪ್ರತಿಮೆ ಎದುರು ಕುಳಿತುಕೊಳ್ಳಲು ಇವರಿಗೆ ಯಾವ ನೈತಿಕತೆ ಇದೆ” ಎಂದು ಸದನದಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ನೇರ ವಾಗ್ದಾಳಿ ನಡೆಸಿದ್ದಾರೆ.

    15 ವರ್ಷಗಳಿಂದ ಜೇನುನೊಣಗಳ 6 ಗೂಡು ಈ ಮನೆಯಲ್ಲಿ ಕುಟುಂಬಸ್ಥರಂತೆ ವಾಸಿಸುತ್ತಿವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts