More

    ಪ್ರೀತಿ ಮದುವೆಗೆ ಶ್ವೇತಾ ನಾಯಕಿ; ಕಿರಿಕ್ ಕೀರ್ತಿ ನಿರ್ದೇಶನದ ಚೊಚ್ಚಲ ಸಿನಿಮಾ

    ಬೆಂಗಳೂರು: ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿ ಸಿನಿಮಾದಲ್ಲಿಯೂ ಗುರುತಿಸಿಕೊಂಡಿರುವ ನಟಿ ಶ್ವೇತಾ ಪ್ರಸಾದ್ ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ವಿಶೇಷ ಏನೆಂದರೆ, ಈ ಚಿತ್ರಕ್ಕೆ ಬಿಗ್​ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ‘ಪ್ರೀತಿ ಮದುವೆ ಇತ್ಯಾದಿ’ ಎಂಬ ಶೀರ್ಷಿಕೆಯನ್ನೂ ಇಡಲಾಗಿದೆ.

    ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಪಡೆದು, ‘ರಾಧಾ ರಮಣ’ ಧಾರಾವಾಹಿಯಲ್ಲಿ ಹೆಂಗಳೆಯರ ಮೆಚ್ಚಿನ ನಾಯಕಿಯಾಗಿದ್ದ ಶ್ವೇತಾ ‘ಕಳ್ಬೆಟ್ಟದ ದರೋಡೆಕೋರರು’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ ಆ ಸಿನಿಮಾದ ಬಳಿಕ ‘ಪ್ರೀತಿ ಮದುವೆ ಇತ್ಯಾದಿ’ಗೆ ಕೈ ಜೋಡಿಸಿದ್ದಾರೆ. ಮಾರ್ಚ್​ನಿಂದ ಚಿತ್ರದ ಶೂಟಿಂಗ್ ಶುರುವಾಗಲಿರುವ ಈ ಚಿತ್ರಕ್ಕೆ ಶ್ವೇತಾಗೆ ನಾಯಕರಾಗಿ ‘ಸಂಕಷ್ಟಕರ ಗಣಪತಿ’ ಸಿನಿಮಾ ಖ್ಯಾತಿಯ ಲಿಖಿತ್ ಶೆಟ್ಟಿ ಜೋಡಿಯಾಗಲಿದ್ದಾರೆ. ಇನ್ನುಳಿದಂತೆ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ನಿರ್ದೇಶನದ ಜತೆಗೆ ಚಿತ್ರದ ನಿರ್ವಣವನ್ನೂ ಕೀರ್ತಿ ಅವರೇ ವಹಿಸಿಕೊಂಡಿದ್ದಾರೆ.

    ಯುವರತ್ನ ಚಿತ್ರದ ನಾಯಕಿಗೆ ಧ್ವನಿ: ಈಗಾಗಲೇ ಹಾಡು ಮತ್ತು ಟೀಸರ್ ಮೂಲಕ ಸದ್ದು ಮಾಡುತ್ತಿರುವ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಪುನೀತ್​ಗೆ ಜೋಡಿಯಾಗಿ ಸಾಯೇಷಾ ಸೈಗಲ್ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಇದೇ ನಟಿಗೆ ಶ್ವೇತಾ ಪ್ರಸಾದ್ ಧ್ವನಿ ನೀಡಿದ್ದಾರೆ. ಅಂದರೆ, ಕನ್ನಡದಲ್ಲಿ ಸಾಯೇಷಾಗೆ ಡಬ್ ಮಾಡಿದ್ದಾರೆ.

    ಬಿಗ್​ಬಾಸ್​ ಶೋ ಆರಂಭದಲ್ಲೇ ಕೇಳಿಬಂತು ಅಪಸ್ವರ: ಕಲರ್ಸ್​ ಕನ್ನಡಕ್ಕೆ ಜನರಿಟ್ಟ ಬೇಡಿಕೆ ಏನು?

    ಜಾಲಿಲೈಫ್​ಗೆ ಸಾಧು; ನಿರ್ದೇಶನ ಐದು ವರ್ಷದ ಬಳಿಕ ಡೈರೆಕ್ಟರ್ ಕ್ಯಾಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts