More

    PHOTOS: ತಮಿಳು ನಟ ವಿಷ್ಣು ವಿಶಾಲ್ ಜತೆ ಷಟ್ಲರ್ ಜ್ವಾಲಾ ಗುಟ್ಟಾ ನಿಶ್ಚಿತಾರ್ಥ…!

    ಬೆಂಗಳೂರು: ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಹಾಗೂ ತಮಿಳು ಸ್ಟಾರ್ ನಟ ವಿಷ್ಣು ವಿಶಾಲ್ ನಿಶ್ಚಿತಾರ್ಥ ಮಾಡಿಕೊಂಡರು. ಸೋಮವಾರ ಜ್ವಾಲಾ ಗುಟ್ಟಾ ಅವರ 37ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಷ್ಣು ನಿಶ್ಚಿತಾರ್ಥದ ಉಂಗುರ ನೀಡುವ ಮೂಲಕ ಅಚ್ಚರಿ ಮೂಡಿಸಿದರು. ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ನಿಶ್ಚಿತಾರ್ಥ ವಿಷಯವನ್ನು ಹಂಚಿಕೊಂಡಿದ್ದಾರೆ. ಜ್ವಾಲಾ 2017ರಿಂದ ಬ್ಯಾಡ್ಮಿಂಟನ್‌ನಿಂದ ದೂರ ಉಳಿದಿದ್ದಾರೆ. ಈ ಮೊದಲು ಜ್ವಾಲಾ, ಷಟ್ಲರ್ ಚೇತನ್ ಆನಂದ್ ಅವರಿಂದ ವಿಚ್ಛೇದನ ಪಡೆದಿದ್ದರು.

    ಇದನ್ನೂ ಓದಿ: PHOTOS: ತಮಿಳು ನಟ ವಿಷ್ಣು ವಿಶಾಲ್ ಜತೆ ಷಟ್ಲರ್ ಜ್ವಾಲಾ ಗುಟ್ಟಾ ನಿಶ್ಚಿತಾರ್ಥ...!ಎಸ್​ಪಿಬಿ ಕರೊನಾ ವರದಿ ನೆಗೆಟಿವ್​; ಐಪಿಎಲ್​ಗಾಗಿ ಕಾಯುತ್ತಿದ್ದಾರಂತೆ ಲೆಜೆಂಡರಿ ಗಾಯಕ

    ನಿಶ್ಚಿತಾರ್ಥ ಕುರಿತು ಪ್ರತಿಕ್ರಿಯಿಸಿರುವ ವಿಷ್ಣು, ಜ್ವಾಲಾಗೆ ಅಚ್ಚರಿ ನೀಡಬೇಕು ಎಂಬುದು ನನ್ನ ಆಸೆಯಾಗಿತ್ತು. ಹೀಗಾಗಿ ಅವಳ ಬರ್ತ್ ಡೇ ದಿನವೇ ಉಂಗುರ ನೀಡಿದೆ. ನನ್ನ ಮನವಿಗೆ ಆಕೆ ಓಕೆ ಎಂದಳು ಎಂದು ಹೇಳಿಕೊಂಡಿದ್ದಾರೆ. ಕೃಷ್ಣ ಹಾಗೂ ಗೋಪಿಕೆಯರು ಇರುವ ಚಿತ್ರದ ಹೊಂದಿರುವ ಡೈಮಂಡ್ ‘ಜುಗಾದ್’ ರಿಂಗ್ ಇದಾಗಿದೆ. ರಾತ್ರಿ 11.30ರ ವೇಳೆಗೆ ಆಕೆಗೆ ಉಂಗುರ ನೀಡಿ, ಕೇಕ್ ಕತ್ತರಿಸಿವುದೇ ನನ್ನ ಆಸೆಯಾಗಿತ್ತು. ಸದ್ಯಕ್ಕಿದು ಅವರಿಬ್ಬರ ನಡುವೆ ನಡೆದಿರುವ ನಿಶ್ಚಿತಾರ್ಥವಾಗಿದ್ದು, ಶೀಘ್ರವೇ ನಿಶ್ಚಿತಾರ್ಥ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗುವುದು. ಜತೆಗೆ ಮದುವೆ ದಿನಾಂಕ ಕೂಡ ಪ್ರಕಟಿಸಲಾಗುವುದು ಎಂದು ಜ್ವಾಲಾ ತಿಳಿಸಿದ್ದಾರೆ. PHOTOS: ತಮಿಳು ನಟ ವಿಷ್ಣು ವಿಶಾಲ್ ಜತೆ ಷಟ್ಲರ್ ಜ್ವಾಲಾ ಗುಟ್ಟಾ ನಿಶ್ಚಿತಾರ್ಥ...!

    ಜ್ವಾಲಾ ಗುಟ್ಟಾ, ಇದಕ್ಕೂ ಮೊದಲು 2005ರಲ್ಲಿ ಷಟ್ಲರ್ ಚೇತನ್ ಆನಂದ್ ಅವರನ್ನು ಪ್ರೀತಿ ಮದುವೆಯಾಗಿದ್ದರು. ಬಳಿಕ ಈ ಜೋಡಿ 2011ರಲ್ಲಿ ಬೇರ್ಪಟ್ಟಿತು. 35 ವರ್ಷದ ವಿಷ್ಣು ವಿಶಾಲ್ ಕೂಡ ವಿಚ್ಛೇದಿತನಾಗಿದ್ದಾರೆ.ರಜಿನಿ ನಟರಾಜ್ ಎಂಬುವರೊಂದಿಗೆ ವಿವಾಹವಾಗಿದ್ದ ವಿಷ್ಣು 2018ರಲ್ಲಿ ವಿಚ್ಛೇದನ ಪಡೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts