More

    ವಾರದ ಅಂತರದಲ್ಲಿ ಎರಡು ಪ್ರಶಸ್ತಿ ಗೆದ್ದ ಸ್ಟಾರ್ ಷಟ್ಲರ್ ಕ್ಯಾರೊಲಿನಾ ಮರಿನ್

    ಬ್ಯಾಂಕಾಕ್: ರಿಯೋ ಒಲಿಂಪಿಕ್ಸ್ ಚಾಂಪಿಯನ್ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಹಾಗೂ ಡೆನ್ಮಾರ್ಕ್‌ನ ವಿಕ್ಟೊರ್ ಅಕ್ಸೆಲ್‌ಸೆನ್ ಟೋಯೊಟಾ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಓಪನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿದ್ದಾರೆ. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಮರಿನ್ 21-19, 21-17 ನೇರ ಗೇಮ್‌ಗಳಿಂದ ಚೀನಾ ತೈಪೆಯ ತೈ ಜು ಯಿಂಗ್ ಅವರನ್ನು 48 ನಿಮಿಷಗಳ ಕಾದಾಟದಲ್ಲಿ ಮಣಿಸಿದರು. ಕಳೆದ ವಾರವಷ್ಟೇ ಮರಿನ್ ಥಾಯ್ಲೆಂಡ್ ಓಪನ್ ಜಯಿಸಿದ್ದರು. ಒಂದು ವಾರದ ಅಂತರದಲ್ಲಿ ಪ್ರತಿಷ್ಠಿತ ಎರಡೂ ಪ್ರಶಸ್ತಿ ಜಯಿಸಿದರು. ಎರಡೂ ಗೇಮ್‌ಗಳಲ್ಲೂ ಭರ್ಜರಿ ನಿರ್ವಹಣೆ ತೋರಿದ ಕ್ಯಾರೊಲಿನಾ ಮರಿನ್ ಸುಲಭ ಗೆಲುವಿನೊಂದಿಗೆ ಪ್ರಶಸ್ತಿ ಗೆದ್ದುಕೊಂಡರು.

    ಇದನ್ನೂ ಓದಿ: ಶ್ರೀಲಂಕಾ ಎದುರು ಇನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಪ್ರವಾಸಿ ಇಂಗ್ಲೆಂಡ್

    27 ವರ್ಷದ ವಿಶ್ವ ನಂ.6 ಮರಿನ್ ಸತತ ಎರಡೂ ಪ್ರಶಸ್ತಿ ಜಯಿಸುವ ಮೂಲಕ ಮುಂದಿನ ವಾರ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ವರ್ಲ್ಡ್ ಟೂರ್ ಫೈನಲ್ಸ್ ಭರ್ಜರಿ ಸಿದ್ಧತೆ ಕೈಗೊಂಡರು. ಬ್ಯಾಂಕಾಕ್‌ನಲ್ಲೇ ಹ್ಯಾಟ್ರಿಕ್ ಪ್ರಶಸ್ತಿ ಜಯಿಸುವ ಅವಕಾಶ ಉಳಿಸಿಕೊಂಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್‌ಸೆನ್ 21-11, 21-7 ನೇರ ಗೇಮ್‌ಗಳಿಂದ ಸ್ವದೇಶ ಬಾಂಧವ ಹನ್ಸ್ ಕ್ರಿಶ್ಟಿಯನ್ ಸೊಲ್‌ಬೆರ್ಗ್ ಅವರನ್ನು ಮಣಿಸಿದರು. ಕೇವಲ 40 ನಿಮಿಷಗಳ ಅಂತರದಲ್ಲಿ ವಿಕ್ಟರ್ ಸುಲಭ ಗೆಲುವು ದಾಖಲಿಸಿದರು. ಟೂರ್ನಿಯ ಸೆಮಿಫೈನಲ್ ಹಂತದಲ್ಲೇ ಭಾರತೀಯ ಹೋರಾಟ ಅಂತ್ಯಗೊಂಡಿತ್ತು. ಕರೊನಾ ವೈರಸ್‌ನಿಂದಾಗಿ ಪುರುಷರ ಸಿಂಗಲ್ಸ್ ಸಾಯಿ ಪ್ರಣೀತ್ ಹಿಂದೆ ಸರಿದಿದ್ದರೆ, ಅವರೊಂದಿಗೆ ಕೊಠಡಿ ಹಂಚಿಕೊಂಡಿದ್ದ ಶ್ರೀಕಾಂತ್ ಅವರನ್ನು ಕೂಡ ಟೂರ್ನಿಯಿಂದ ಹಿಂದೆ ಸರಿಯುವಂತೆ ಆಯೋಜಕರು ಸೂಚಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts