More

    ಇಂದಿನಿಂದ ಇಸ್ರೋದಲ್ಲಿ ನೂತನ ಅಧ್ಯಕ್ಷರ ಸಂ’ಕ್ರಮಣ’; ಎಸ್​. ಸೋಮನಾಥ್ ಅಧಿಕಾರ ಸ್ವೀಕಾರ

    ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇಂದಿನಿಂದ ನೂತನ ಅಧ್ಯಕ್ಷರ ಸಂ’ಕ್ರಮಣ’ಕ್ಕೆ ಸಾಕ್ಷಿಯಾಗಲಿದೆ. ಅರ್ಥಾತ್, ನೂತನ ಅಧ್ಯಕ್ಷ ಎಸ್​. ಸೋಮನಾಥ್ ಇಂದು ಅಧಿಕಾರ ಸ್ವೀಕರಿಸಿದ್ದು, ಅಧಿಕೃತವಾಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

    ಹಿರಿಯ ರಾಕೆಟ್ ವಿಜ್ಞಾನಿ, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐಐಎಸ್​ಸಿ) ವಿದ್ಯಾರ್ಥಿ ಎಸ್​. ಸೋಮನಾಥ್ ಅವರನ್ನು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಇಸ್ರೋ ನೂತನ ಅಧ್ಯಕ್ಷರನ್ನಾಗಿ ನೇಮಿಸಿದೆ. ಇಂದು ಅವರು ನಿರ್ಗಮಿತ ಅಧ್ಯಕ್ಷ ಕೆ. ಶಿವನ್ ಅವರಿಂದ ಅಧಿಕಾರ ಸ್ವೀಕರಿಸಿದರು. ಸೋಮನಾಥ್ ಇಸ್ರೋ ಅಧ್ಯಕ್ಷರ ಜವಾಬ್ದಾರಿ ಜತೆಗೆ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

    2018ರಿಂದ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ದ್ರವ ನೋದನ ವ್ಯವಸ್ಥಾ ಕೇಂದ್ರದ ನಿರ್ದೇಶಕರಾಗಿ ಸೋಮನಾಥ್ ಹೊಣೆ ಹೊತ್ತಿದ್ದರು. ಇದಕ್ಕೂ ಮೊದಲು ವಿಎಸ್​ಎಸ್​ಸಿಯ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರಾಗಿ, ಬಾಹ್ಯಾಕಾಶ ಉಡಾವಣಾ ವಾಹನ ಜಿಎಸ್​ಎಲ್​ವಿ ಮಾರ್ಕ್-3 ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕೊಲ್ಲಂನ ಟಿಕೆಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾಂತ್ರಿಕ ವಿಭಾಗದಲ್ಲಿ ಪದವಿ ಪಡೆದು, ನಂತರ ಬೆಂಗಳೂರಿನ ಐಐಎಸ್​ಸಿಯಲ್ಲಿ ವೈಮಾನಿಕ ಇಂಜಿನಿಯರಿಂಗ್ ವಿಭಾಗದ ಸಂರಚನೆ, ಬಲವಿಜ್ಞಾನ ಹಾಗೂ ನಿಯಂತ್ರಣ ವಿಷಯದ ವಿಶೇಷತೆಯೊಂದಿಗೆ ಚಿನ್ನದ ಪದಕ ಪಡೆದು ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

    1985ರಲ್ಲಿ ವಿಎಸ್​ಎಸ್​ಸಿ ಸೇರ್ಪಡೆಯಾದ ಸೋಮನಾಥ್, ಪಿಎಸ್​ಎಲ್​ವಿ ಪ್ರಾರಂಭಿಕ ಅವಧಿಯಲ್ಲಿ ಯೋಜನೆಯ ನೇತೃತ್ವ ವಹಿಸಿದ್ದರು. ಸಿಸ್ಟಂ ಇಂಜಿನಿಯರಿಂಗ್, ಉಡಾವಣಾ ವಾಹನ ವಿಷೇಶಜ್ಞರಾಗಿರುವ ಅವರು, ಚಂದ್ರಯಾನ-2 ಯೋಜನೆ ಲ್ಯಾಂಡರ್ ಎಂಜಿನ್ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಭಾರತೀಯ ಅಂತರಿಕ್ಷ ಸೊಸೈಟಿಯಿಂದ ‘ಸ್ಪೇಸ್ ಗೋಲ್ಡ್ ಮೆಡಲ್’ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

    ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ; ಕೊಲೆಯಾಗಿ ಹೋದ ತಾಲೂಕು ಪಂಚಾಯತ್ ಉಪಾಧ್ಯಕ್ಷನ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts