More

    ವಿದ್ಯಾಭ್ಯಾಸದ ಜತೆಗೆ ಸಂಸ್ಕಾರ ಇರಲೇಬೇಕು

    ಬೀರೂರು: ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ ಸದೃಢವಾಗಬೇಕಾದರೆ ಸಂಸ್ಕಾರ ಕಲಿಸುವ ಭಕ್ತಿ ಕೇಂದ್ರಗಳಾದ ದೇವಾಲಯಗಳಿಗೆ ಯುವ ಸಮೂಹ ತೆರಳಬೇಕು ಎಂದು ಶ್ರೀ ರಂಭಾಪುರಿ ಬೀರೂರು ಖಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದ ನೆಹರುನಗರದ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಸಮಾಜ ಶುಕ್ರವಾರ ಆಯೋಜಿಸಿದ್ದ ಬನದ ಹುಣ್ಣಿಮೆ ಮಹೋತ್ಸವ, 6ನೇ ವರ್ಷದ ಅನ್ನದಾಸೋಹ ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ದೇವಸ್ಥಾನ ಕಟ್ಟುವ ಮೊದಲು ಒಳ್ಳೆಯ ಮನಸ್ಸುಗಳನ್ನು ಕಟ್ಟಬೇಕು. ಸಿರಿವಂತನಾಗಿ ಕೊಡುಗೈ ದಾನಿಯಾಗಬೇಕು. ಅಧಿಕಾರವಿದ್ದಾಗ ಒಳ್ಳೆಯ ಸೇವೆ ಮಾಡಲು ಮುಂದಾಗಬೇಕು. ಜ್ಞಾನ ಇದ್ದಾಗ ಮಾತ್ರ ವಿಜ್ಞಾನ ಬೆಳೆಯುತ್ತದೆ. ಇಂದು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಸಮಾಜ ಸಂಸ್ಕಾರದ ಗೋಜಿಗೆ ಹೋಗದಂತಾಗಿದೆ. ಶಿಕ್ಷಣದ ಜತೆಗೆ ಸಂಸ್ಕಾರವಿದ್ದಾಗ ಮಾತ್ರ ಬದುಕು ಪರಿಪೂರ್ಣವಾಗುತ್ತದೆ ಎಂದರು.

    ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ವಾಸಿಸುವ ಮನೆಯೇ ಸಂಸ್ಕಾರ ಕಲಿಸುವ ದೇವಾಲಯವಿದ್ದಂತೆ. ಈ ವಿಜ್ಞಾನದ ಯುಗದಲ್ಲಿ ಸಂಸ್ಕಾರ ಕಾಣೆಯಾಗಿದೆ. ನಾವು ಸರಿದಾರಿಯಲ್ಲಿ ಸಾಗಲು ಧರ್ಮದ ಮೂಲ ಸಂಸ್ಕಾರದ ಅಗತ್ಯವಿದೆ. ನಮ್ಮ ದೇಶ ಧರ್ಮವನ್ನು ಆಧರಿಸಿದೆ. ಅಂತಹ ಧರ್ಮವನ್ನು ಉಳಿಸಿ ಬೆಳೆಸುತ್ತಿರುವುದು ದೇವಾಲಯಗಳು. ಯುವಪೀಳಿಗೆ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದು ತಿಳಿಸಿದರು.

    ಕಡೂರಿನ ವೈದ್ಯ ಡಾ. ಛಾಯಾಪತಿ ಅವರಿಗೆ ದೇವರ ದಾಸಿಮಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts