ಶ್ರೇಯಸ್​ ಈಗ ‘ದಿಲ್​ದಾರ್’ … ಶೀರ್ಷಿಕೆ ಅನಾವರಣ ಮಾಡಿದ್ರು ರವಿಚಂದ್ರನ್

blank

ಬೆಂಗಳೂರು: ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್​ ಮಂಜು ಚಿತ್ರವೊಂದರಲ್ಲಿ ನಟಿಸುತ್ತಿರುವುದು ಈಗಾಗಲೇ ಗೊತ್ತೇ ಇದೆ. ಈಗ ಆ ಚಿತ್ರಕ್ಕೆ ‘ದಿಲ್​ದಾರ್​’ ಎಂದು ನಾಮಕರಣ ಮಾಡಲಾಗಿದೆ. ಅಷ್ಟೇ ಅಲ್ಲ, ಚಿತ್ರದ ಮುಹೂರ್ತ ಸಹ ಇಂದು ಮುಗಿದಿದ್ದು, ಈ ಸಂದರ್ಭದಲ್ಲಿ ರವಿಚಂದ್ರನ್​ ಅವರು ಶೀರ್ಷಿಕೆ ಅನಾವರಣ ಮಾಡಿದ್ದಾರೆ.

ಇದನ್ನೂ ಓದಿ: ಒಬ್ಬರು ಫ್ಲವರ್; ಇನ್ನೊಬ್ಬರು ಫೈರ್!

ಶ್ರೇಯಸ್​ ಈಗ 'ದಿಲ್​ದಾರ್' … ಶೀರ್ಷಿಕೆ ಅನಾವರಣ ಮಾಡಿದ್ರು ರವಿಚಂದ್ರನ್‘ದಿಲ್​ದಾರ್’ ಚಿತ್ರವು ಒಂದು ಕಾಲೇಜ್​ ಲವ್​​ಸ್ಟೋರಿಯಾಗಿದ್ದು, ಮಧು ಗೌಡ ಗಂಗೂರು ನಿರ್ದೇಶಿಸುತ್ತಿದ್ದಾರೆ. ಕೆಲವು ಧಾರಾವಾಹಿಗಳಲ್ಲದೇ, ಸಿನಿಮಾಗಳಲ್ಲೂ ಕೆಲಸ ಮಾಡಿರುವ ಶ್ರೇಯಸ್​ಗೆ ನಿರ್ದೇಶಕರಾಗಿ ಇದು ಮೊದಲ ಚಿತ್ರ. ಇನ್ನು, ಶ್ರೇಯಸ್​ಗೆ ನಾಯಕಿಯಾಗಿ ‘ಬ್ಯಾಡ್​ ಮ್ಯಾನರ್ಸ್​’ ಮತ್ತು ‘ಅದ್ದೂರಿ ಲವರ್​’ ಚಿತ್ರಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಕುಮಾರ್​ ನಟಿಸುತ್ತಿದ್ದಾರೆ.

ಈ ಚಿತ್ರಕ್ಕೆ ಶ್ರೇಯಸ್​ಗೆ ರವಿಚಂದ್ರನ್​ ಜತೆಗೆ ಹಲವು ನಿರ್ದೇಶಕರು ಬೆಂಬಲ ಕೊಟ್ಟಿದ್ದಾರಂತೆ. ಈ ಕುರಿತು ಮಾತನಾಡುವ ಅವರು, ‘ನನ್ನ ಚಿತ್ರಕ್ಕೆ ಶುಭಕೋರಲು ಬಂದ ಎಲ್ಲಾ ನಿರ್ದೇಶಕರಿಗೂ ಧನ್ಯವಾದ ತಿಳಿಸುತ್ತೇನೆ. ಪ್ರತಿಯೊಬ್ಬ ನಿರ್ದೇಶಕರ ಹತ್ತಿರವೂ ಒಂದೊಂದು ಟಿಪ್ಸ್ ತಗೊಂತಿನಿ. ರವಿಚಂದ್ರನ್​, ಯಶ್​ ನನಗೆ ಬಹಳ ಬೆಂಬಲ ಕೊಟ್ಟಿದ್ದಾರೆ. ಇಂಥದ್ದೊಂದು ಅವಕಾಶ ಕೊಟ್ಟಿದ್ದಿಕ್ಕೆ ನಿರ್ದೇಶಕ ಮಧು ಅವರಿಗೆ ಥ್ಯಾಂಕ್ಸ್​. ಮುಂದಿನ ತಿಂಗಳನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ಸ್ವಲ್ಪ ಸಮಯ ಇದೆಯಾದರೂ, ನಾಳೆಯಿಂದ ರಿಹರ್ಸಲ್​ಗಳು ಪ್ರಾರಂಭವಾಗಲಿದೆ’ ಎಂದು ಮಾಹಿತಿ ಕೊಟ್ಟರು.

ಶೀರ್ಷಿಕೆ ಇಟ್ಟಾಗ, ಇಂಥದ್ದೊಂದು ಟೈಟಲ್​ ಯಾರಿಗೆ ಸೂಕ್ತ ಎಂದು ಯೋಚಿಸಿದರಂತೆ ನಿರ್ದೇಶಕ ಮಧು. ಕೊನೆಗೆ ಶ್ರೇಯಸ್​ ನೆನಪಾಗಿದರಂತೆ. ‘ಈ ಸಿನಿಮಾ ಕೇವಲ ನನ್ನಿಂದ ಅಲ್ಲ. ನನ್ನ ತಂಡದ ಸಪೋರ್ಟ್ ನಿಂದ ಸಾಧ್ಯವಾಗಿದೆ. ಕತೆ ರೆಡಿ ಮಾಡಿದಾಗ ‘ದಿಲ್​ದಾರ್​’ ಟೈಟಲ್ ಫಿಕ್ಸ್ ಮಾಡಿದಾಗ, ಆ ಹೆಸರಿಗೆ ಯಾರು ಸೂಕ್ತ ಎಂದು ಯೋಚಿಸಿದಾಗ, ಶ್ರೇಯಸ್ ಮಂಜು ನೆನಪಾದರು’ ಎಂದರು.

ಇದನ್ನೂ ಓದಿ: ಅಲೆಮಾರಿ ಜನರನ್ನು ಸಿನಿಮಾ ನೋಡಲು ಒಳಗೆ ಬಿಡದ ಮಲ್ಟಿಪ್ಲೆಕ್ಸ್​​​ ಸಿಬ್ಬಂದಿ!

‘ದಿಲ್​ದಾರ್​’ ಚಿತ್ರವನ್ನು ಏಷ್ಯಾನೆಟ್ ಮೂವೀ ಬ್ಯಾನರ್​ನಡಿ ಆರ್ ಸಂತೋಷ್ ಕುಮಾರ್ ನಿರ್ಮಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣವಿದೆ.

ಅಕಟಕಟಾ ನಟಿಯಿಂದ ಇಂಥಾ ಮಾತಾ! ರಾತ್ರಿ ಪ್ರಯಾಣ ಮಾಡುವಾಗ ಈ ರೀತಿ ಮಾಡ್ತಾರಂತೆ ನಿಮಿಷಾ

Share This Article

ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡುವುದು ಹೇಗೆ? Child Care Tips

Child Care Tips: ನೀವು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಕೊಡಬಾರದು. ನಿಮ್ಮ ಮಗು ನಿಮ್ಮೊಂದಿಗೆ…

ಈ 3 ರಾಶಿಯ ಮಹಿಳೆಯರು ಹುಟ್ಟಿನಿಂದಲೇ ಅಪಾರ ಬುದ್ಧಿಶಕ್ತಿ ಹೊಂದಿರುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…

ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್

ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ…