More

    IPL 2024; ಕೆಕೆಆರ್​ ನಾಯಕತ್ವಕ್ಕೆ ಮರಳಿದ ಶ್ರೇಯಸ್​ ಅಯ್ಯರ್​

    ಕಲ್ಕತ್ತಾ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐ ಇದೀಗ 2024ರಲ್ಲಿ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ತಯಾರಿ ಆರಂಭಿಸಿದೆ. ಡಿಸೆಂಬರ್​ 19ರಂದು ನಡೆಯುವ ಐಪಿಎಲ್​ ಮಿನಿ ಹರಾಜಿಗೆ ತಂಡಗಳು ಭರದಿಂದ ಸಿದ್ದತೆ ನಡೆಸಿದ್ದು, ಇದಕ್ಕೂ ಮುನ್ನ ಕಲ್ಕತ್ತಾ ನೈಟ್​ರೈಡರ್ಸ್​ ತಂಡದ ನಾಯಕ ಹಾಗೂ ಉಪನಾಯಕನನ್ನು ಘೋಷಣೆ ಮಾಡಿದೆ.

    ಕಳೆದ ಆವೃತ್ತಿಯಲ್ಲಿ ಬೆನ್ನು ನೋವಿನ ಕಾರಣದಿಂದ ಐಪಿಎಲ್‌ನಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ 2024ರ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ನಿತೀಶ್ ರಾಣ 2024ರ ಐಪಿಎಲ್‌ನಲ್ಲಿ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.

    ಇದನ್ನೂ ಓದಿ: ಪ್ರತಾಪ್​ನಂತಹ ದೇಶಭಕ್ತನನ್ನು ಶಂಕಿಸುವುದು ಕಾಂಗ್ರೆಸ್​ಗೆ ಮಾತ್ರ ಸಾಧ್ಯ: ಈಶ್ವರಪ್ಪ

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೆಕೆಆರ್​ ಸಿಇಒ ವೆಂಕಿ ಮೈಸೂರು. ಕೆಕೆಆರ್ ತಂಡದ ನಾಯಕನಾಗಿ ಶ್ರೇಯಸ್​ ಅಯ್ಯರ್ ಹಾಗೂ ಉಪನಾಯಕನಾಗಿ ನಿತೀಶ್​ ರಾಣಾ ಮುಂದುವರೆಯಲಿದ್ದಾರೆ. ಗಾಯದ ಸಮಸ್ಯೆಯಿಂದ 2023ರ ಐಪಿಎಲ್ ಆವೃತ್ತಿಯಿಂದ ಶ್ರೇಯಸ್ಸ್ ಅಯ್ಯರ್ ದೂರ ಉಳಿದದ್ದು ನಿಜಕ್ಕೂ ದುರಾದೃಷ್ಟಕರ. ಅವರು ನಾಯಕನಾಗಿ ಹಿಂತಿರುಗಿರುವುದು ನಮಗೆ ಸಂತೋಷ ತಂದಿದೆ. ಅವರು ಗಾಯದಿಂದ ಚೇತರಿಸಿಕೊಳ್ಳಲು ಶ್ರಮಿಸಿದ ರೀತಿ ಮತ್ತು ವಿಶ್ವಕಪ್ ಟೂರ್ನಿಯಲ್ಲಿ ಪ್ರದರ್ಶಿಸಿದ ಫಾರ್ಮ್ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಮುಂದಿನ ಆವೃತ್ತಿಯಲ್ಲಿ ನಿತೀಶ್ ಉಪನಾಯಕನಾಗಿ ತಂಡಕ್ಕಾಗಿ ಶ್ರೇಯಸ್ ಅಯ್ಯರ್ ಅವರನ್ನು ಬೆಂಬಲಿಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ. 

    ಈ ಕುರಿತು ಪ್ರತಿಕ್ರಿಯಿಸಿರುವ ಶ್ರೇಯಸ್​ ಅಯ್ಯರ್, ಕಳೆದ ಆವೃತ್ತಿಯಲ್ಲಿ ಗಾಯದ ಕಾರಣ ನನ್ನ ಅನುಪಸ್ಥಿತಿ ಸೇರಿದಂತೆ ಹಲವಾರು ಸವಾಲುಗಳನ್ನು  ತಂಡ ಎದುರಿಸಿದೆ. ನಿತೀಶ್  ನನ್ನ ಜಾಗ ತುಂಬಿರುವುದಲ್ಲದೇ, ಅವರ ಶ್ಲಾಘನೀಯ ನಾಯಕತ್ವದಿಂದಲೂ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts