More

    ಇಂದು-ನಾಳೆ ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಮೆಗಾ ಹರಾಜು; ಮೊದಲ ದಿನ 161 ಕ್ರಿಕೆಟಿಗರ ಲಿಲಾವು

    ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದ್ದು, ಸ್ಟಾರ್ ಆಟಗಾರರ ಜತೆಗೆ ಕೆಲವು ದೇಶೀಯ ಕ್ರಿಕೆಟ್ ಪ್ರತಿಭೆಗಳು ಭಾರಿ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇಡಲಾಗಿದೆ.

    ಹರಾಜು ಪ್ರಕ್ರಿಯೆಯಲ್ಲಿ 10 ತಂಡಗಳು ಭಾಗವಹಿಸಲಿದ್ದು, 370 ಭಾರತೀಯ ಮತ್ತು 220 ವಿದೇಶಿ ಸಹಿತ ಒಟ್ಟು 590 ಆಟಗಾರರು ಕಣದಲ್ಲಿದ್ದಾರೆ. ಈ ಪೈಕಿ 228 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವವರಾದರೆ, 355 ದೇಶೀಯ ಆಟಗಾರರು. 7 ಅಸೋಸಿಯೇಟ್ ದೇಶಗಳ ಆಟಗಾರರು. ಈ ಬಾರಿ 10ಕ್ಕೂ ಅಧಿಕ ಕ್ರಿಕೆಟಿಗರಿಗೆ 10 ಕೋಟಿ ರೂ.ಗೂ ಅಧಿಕ ಮೊತ್ತ ಬಿಡ್ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಈ ಪೈಕಿ ಕೆಲವರಿಗೆ 20 ಕೋಟಿ ರೂ.ವರೆಗೂ ಬಿಡ್ ಸಲ್ಲಿಕೆಯಾಗಬಹುದು ಎನ್ನಲಾಗಿದೆ.

    ರಾಹುಲ್ ದಾಖಲೆ ಮುರಿಯುವುದೇ?
    ಸದ್ಯ ತಂಡಗಳ ರಿಟೇನ್-ಡ್ರಾಫ್ಟ್​ ಪ್ರಕ್ರಿಯೆಯ ಬಳಿಕ ಕನ್ನಡಿಗ ಕೆಎಲ್ ರಾಹುಲ್ ಟೂರ್ನಿಯ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ. ಕರ್ನಾಟಕದ ಬ್ಯಾಟ್ಸ್‌ಮನ್ 17 ಕೋಟಿ ರೂ. ಮೊತ್ತಕ್ಕೆ ಲಖನೌ ಸೂಪರ್‌ಜೈಂಟ್ಸ್ ತಂಡ ಸೇರಿದ್ದಾರೆ. ಹರಾಜಿನಲ್ಲಿ ಅವರ ದಾಖಲೆಯನ್ನು ಯಾರು ಮೀರಿಸುವರು ಎಂಬ ಕುತೂಹಲವಿದೆ. ರೋಹಿತ್ ಶರ್ಮ, ರವೀಂದ್ರ ಜಡೇಜಾ, ರಿಷಭ್ ಪಂತ್ ತಲಾ 16 ಕೋಟಿ ರೂ.ಗೆ ರಿಟೇನ್ ಆಗಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮಾರಿಸ್ 16.25 ಕೋಟಿ ರೂ.ಗೆ ಬಿಕರಿಯಾಗಿದ್ದು, ಹರಾಜು ಇತಿಹಾಸದಲ್ಲೇ ಅತ್ಯಧಿಕವಾಗಿದೆ. ಈ ಬಾರಿ ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್ ಅವರಂಥ ಕೆಲ ಪ್ರಮುಖ ಆಟಗಾರರಿಗೆ 20 ಕೋಟಿ ರೂ.ವರೆಗೂ ಬಿಡ್ ಸಲ್ಲಿಕೆಯಾಗುವ ನಿರೀಕ್ಷೆ ಇಡಲಾಗಿದೆ. ತಂಡಗಳ ಒಟ್ಟು ಬಜೆಟ್ 90 ಕೋಟಿ ರೂ.ಗೆ ಏರಿಕೆಯಾಗಿರುವುದು ಇದಕ್ಕೆ ಕಾರಣ.

    10 ಮಾರ್ಕೀ ಆಟಗಾರರು:
    *ಶಿಖರ್ ಧವನ್ *ಮೊಹಮದ್ ಶಮಿ *ಫಾಫ್​ ಡು ಪ್ಲೆಸಿಸ್ *ಡೇವಿಡ್ ವಾರ್ನರ್ *ಪ್ಯಾಟ್ ಕಮ್ಮಿನ್ಸ್ *ಶ್ರೇಯಸ್ ಅಯ್ಯರ್ *ಆರ್. ಅಶ್ವಿನ್ *ಕ್ವಿಂಟನ್ ಡಿಕಾಕ್ *ಕಗಿಸೊ ರಬಾಡ *ಟ್ರೆಂಟ್ ಬೌಲ್ಟ್.

    ಆಟಗಾರರ ಹರಾಜು ಪ್ರಕ್ರಿಯೆ
    ಯಾವಾಗ: ಫೆಬ್ರವರಿ 12-13
    ಎಲ್ಲಿ: ಐಟಿಸಿ ಗಾರ್ಡೇನಿಯಾ, ಬೆಂಗಳೂರು
    ಆರಂಭ: ಬೆಳಗ್ಗೆ 11.00 (ಬಿಡ್ಡಿಂಗ್ 12ರಿಂದ)
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಪ್ರಕ್ರಿಯೆ ಹೇಗಿರುತ್ತೆ?
    ಆಟಗಾರರನ್ನು ಬ್ಯಾಟರ್, ವೇಗಿ, ಸ್ಪಿನ್ನರ್, ಕೀಪರ್, ಆಲ್ರೌಂಡರ್ ಹೀಗೆ ಅವರ ಪಾತ್ರಕ್ಕೆ ತಕ್ಕಂತೆ ವಿಭಾಗಿಸಲಾಗಿರುತ್ತದೆ. ಈ ಪೈಕಿ 10 ಮಾರ್ಕೀ ಆಟಗಾರರ ಹರಾಜಿನೊಂದಿಗೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಂತರ ಅಂತಾರಾಷ್ಟ್ರೀಯ (ಕ್ಯಾಪ್ಡ್) ಮತ್ತು ದೇಶೀಯ (ಅನ್‌ಕ್ಯಾಪ್ಡ್) ಆಟಗಾರರನ್ನು ಅವರ ವಿಭಾಗಗಳಿಗೆ ತಕ್ಕಂತೆ ಹರಾಜಿಗೆ ಇಡಲಾಗುತ್ತದೆ. ಈ ರೀತಿ ಒಟ್ಟು 62 ವಿಭಾಗಗಳಿವೆ. ಮೊದಲ ದಿನವಾದ ಶನಿವಾರ 161 ಆಟಗಾರರನ್ನು ಹರಾಜಿಗೆ ಒಳಪಡಿಸಲಾಗುತ್ತದೆ. 2ನೇ ದಿನವಾದ ಭಾನುವಾರ, ್ರಾಂಚೈಸಿಗಳು ಸೂಚಿಸುವ ಆಟಗಾರರನ್ನು ಮಾತ್ರ ಹರಾಜಿಗೆ ಒಳಪಡಿಸಲಾಗುತ್ತದೆ. ಈ ಪೈಕಿ ಮೊದಲ ದಿನ ಮಾರಾಟವಾಗದ ಆಟಗಾರರೂ ಸೇರಿರಬಹುದು.

    ಹ್ಯೂ ಎಡ್‌ಮೀಡ್ಸ್ ಹರಾಜುಗಾರ
    ಬ್ರಿಟನ್‌ನ ಹ್ಯೂ ಎಡ್‌ಮೀಡ್ಸ್ ಹರಾಜುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು 2018ರಿಂದಲೂ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದಾರೆ. ಕಳೆದ 3 ದಶಕಗಳಲ್ಲಿ ವಿಶ್ವದೆಲೆಡೆ 2,500ಕ್ಕೂ ಅಧಿಕ ಹರಾಜು ಪ್ರಕ್ರಿಯೆಗಳನ್ನು ನಡೆಸಿಕೊಟ್ಟ ಅನುಭವ ಅವರಿಗೆ ಇದೆ.

    ಐಪಿಎಲ್ ಇತಿಹಾಸದ ಪ್ರತಿ ಹರಾಜಿನ ದುಬಾರಿ
    2008: ಎಂಎಸ್ ಧೋನಿ (ಸಿಎಸ್‌ಕೆ): ₹6.5 ಕೋಟಿ
    2009: ಕೆವಿನ್ ಪೀಟರ್ಸೆನ್ (ಆರ್‌ಸಿಬಿ), ಆಂಡ್ರೋ ಫ್ಲಿಂಟ್ಾ (ಸಿಎಸ್‌ಕೆ): ₹7.5 ಕೋಟಿ
    2010: ಶೇನ್ ಬಾಂಡ್ (ಕೆಕೆಆರ್), ಕೈರಾನ್ ಪೊಲ್ಲಾರ್ಡ್ (ಮುಂಬೈ): ₹3.42 ಕೋಟಿ
    2011: ಗೌತಮ್ ಗಂಭೀರ್ (ಕೆಕೆಆರ್): ₹11.2 ಕೋಟಿ
    2012: ರವೀಂದ್ರ ಜಡೇಜಾ (ಸಿಎಸ್‌ಕೆ): ₹10.68 ಕೋಟಿ
    2013: ಗ್ಲೆನ್ ಮ್ಯಾಕ್ಸ್‌ವೆಲ್ (ಮುಂಬೈ): ₹5.65 ಕೋಟಿ
    2014: ಯುವರಾಜ್ ಸಿಂಗ್ (ಆರ್‌ಸಿಬಿ): ₹14 ಕೋಟಿ
    2015: ಯುವರಾಜ್ ಸಿಂಗ್ (ಡೆಲ್ಲಿ): ₹16 ಕೋಟಿ
    2016: ಶೇನ್ ವ್ಯಾಟ್ಸನ್ (ಆರ್‌ಸಿಬಿ): ₹9.5 ಕೋಟಿ
    2017: ಬೆನ್ ಸ್ಟೋಕ್ಸ್ (ಪುಣೆ): ₹14.5 ಕೋಟಿ
    2018: ಬೆನ್ ಸ್ಟೋಕ್ಸ್ (ರಾಜಸ್ಥಾನ): ₹12.5 ಕೋಟಿ
    2019: ಜೈದೇವ್ ಉನಾದ್ಕತ್ (ರಾಜಸ್ಥಾನ), ವರುಣ್ ಚಕ್ರವರ್ತಿ (ಪಂಜಾಬ್): ₹8.4 ಕೋಟಿ
    2020: ಪ್ಯಾಟ್ ಕಮ್ಮಿನ್ಸ್ (ಕೆಕೆಆರ್): ₹15.5 ಕೋಟಿ
    2021: ಕ್ರಿಸ್ ಮಾರಿಸ್ (ರಾಜಸ್ಥಾನ): ₹16.25 ಕೋಟಿ

    ತಂಡಗಳು: 10
    ಪ್ರತಿ ತಂಡದ ಒಟ್ಟು ಬಜೆಟ್: ₹90 ಕೋಟಿ
    ಪ್ರತಿ ತಂಡದ ಕನಿಷ್ಠ ವೆಚ್ಚ: ₹67.5 ಕೋಟಿ
    ತಂಡಗಳ ಒಟ್ಟಾರೆ ಬಜೆಟ್: ₹900 ಕೋಟಿ
    ರಿಟೇನ್-ಡ್ರ್‌ಟಾ ವೆಚ್ಚ: ₹343.7 ಕೋಟಿ
    ಹರಾಜಿಗೆ ಉಳಿಕೆ ಬಜೆಟ್: ₹556.3 ಕೋಟಿ
    ತಂಡಗಳ ರಿಟೇನ್-ಡ್ರ್‌ಟಾ ಆಟಗಾರರು: 33
    ಪ್ರತಿ ತಂಡಕ್ಕೆ ಕನಿಷ್ಠ ಆಟಗಾರರು: 18
    ಪ್ರತಿ ತಂಡಕ್ಕೆ ಗರಿಷ್ಠ ಆಟಗಾರರು: 25 (8 ವಿದೇಶಿ).
    ಹರಾಜಿಗೆ ಒಟ್ಟು ಆಟಗಾರರು: 590 (220 ವಿದೇಶಿ).
    ತಂಡಗಳಿಗೆ ಬೇಕಾದ ಗರಿಷ್ಠ ಆಟಗಾರರು: 217 (70 ವಿದೇಶಿ).

    ದೊಡ್ಡ ಮೊತ್ತದ ಬಿಡ್ ನಿರೀಕ್ಷೆಯಲ್ಲಿರುವವರು
    *ಶ್ರೇಯಸ್ ಅಯ್ಯರ್
    *ಡೇವಿಡ್ ವಾರ್ನರ್
    *ಇಶಾನ್ ಕಿಶನ್
    *ಕ್ವಿಂಟನ್ ಡಿಕಾಕ್
    *ಕಗಿಸೊ ರಬಾಡ
    *ಪ್ಯಾಟ್ ಕಮ್ಮಿನ್ಸ್
    *ಜೇಸನ್ ಹೋಲ್ಡರ್
    *ದೇವದತ್ ಪಡಿಕಲ್
    *ದೀಪಕ್ ಚಹರ್
    *ಶಾರ್ದೂಲ್ ಠಾಕೂರ್
    *ಶಾರುಖ್ ಖಾನ್
    *ಯಜುವೇಂದ್ರ ಚಾಹಲ್
    *ಪ್ರಸಿದ್ಧಕೃಷ್ಣ

    ಒಟ್ಟು ₹90 ಕೋಟಿ ಬಜೆಟ್‌ನಲ್ಲಿ ಉಳಿಕೆ: ಚೆನ್ನೈ ಸೂಪರ್‌ಕಿಂಗ್ಸ್: ₹48 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್: ₹47.5 ಕೋಟಿ, ಕೆಕೆಆರ್: ₹48 ಕೋಟಿ, ಲಖನೌ ಸೂಪರ್‌ಜೈಂಟ್ಸ್: ₹59 ಕೋಟಿ, ಮುಂಬೈ ಇಂಡಿಯನ್ಸ್: ₹48 ಕೋಟಿ, ಪಂಜಾಬ್ ಕಿಂಗ್ಸ್: ₹72 ಕೋಟಿ, ರಾಜಸ್ಥಾನ ರಾಯಲ್ಸ್: ₹62 ಕೋಟಿ, ಆರ್‌ಸಿಬಿ: ₹57 ಕೋಟಿ, ಸನ್‌ರೈಸರ್ಸ್‌: ₹68 ಕೋಟಿ, ಅಹಮದಾಬಾದ್: ₹52 ಕೋಟಿ.

    *590 ಕ್ರಿಕೆಟಿಗರ ಮೂಲಬೆಲೆ
    48 ಕ್ರಿಕೆಟಿಗರಿಗೆ ₹2 ಕೋಟಿ
    20 ಕ್ರಿಕೆಟಿಗರಿಗೆ ₹1.5 ಕೋಟಿ
    34 ಕ್ರಿಕೆಟಿಗರಿಗೆ ₹1 ಕೋಟಿ
    24 ಕ್ರಿಕೆಟಿಗರಿಗೆ ₹75 ಲಕ್ಷ
    103 ಕ್ರಿಕೆಟಿಗರಿಗೆ ₹50 ಲಕ್ಷ
    16 ಕ್ರಿಕೆಟಿಗರಿಗೆ ₹40 ಲಕ್ಷ
    9 ಕ್ರಿಕೆಟಿಗರಿಗೆ ₹30 ಲಕ್ಷ
    336 ಕ್ರಿಕೆಟಿಗರಿಗೆ ₹20 ಲಕ್ಷ

    ವಿಂಡೀಸ್ ವಿರುದ್ಧ ಅಂತಿಮ ಏಕದಿನದಲ್ಲೂ ಸುಲಭ ಜಯ, ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts