More

    ಬೋಟ್‌ಗಳಿಗೆ ಸ್ಯಾಟಲೈಟ್ ಸಂವಹನ, ತ್ರಜ್ಞಾನ ಅಳವಡಿಸಲು ಉ.ಕ.ಜಿಲ್ಲಾ ಸಹಕಾರಿ ಮೀನು ಫೆಡರೇಶನ್ ಅಧ್ಯಕ್ಷ ಗಣಪತಿ ಆಗ್ರಹ

    ಉಡುಪಿ: ನವರಾತ್ರಿ, ದೀಪಾವಳಿ ಸೇರಿದಂತೆ ಜಾತ್ರಾ ಮಹೋತ್ಸವಗಳಲ್ಲಿ ಕರೊನಾ ವೈರಸ್ ಹರಡದಂತೆ ಎಚ್ಚರ ವಹಿಸಲು ಸರ್ಕಾರದ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ದೇವಾಲಯಗಳಲ್ಲಿ ನವರಾತ್ರಿ ಉತ್ಸವ, ದೀಪಾವಳಿ ಸಂದರ್ಭ ಪಾಲಿಸಬೇಕಾದ ಕ್ರಮಗಳ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ಭಕ್ತರು ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಮಾರ್ಕ್ ಹಾಕಬೇಕು. ಮಾಸ್ಕ್ ಧರಿಸಬೇಕು. ಥರ್ಮಲ್ ಸ್ಕಾೃನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯ. ರಜಾದಿನಗಳಲ್ಲಿ ದೇವಳ್ಕೆ ಹೆಚ್ಚು ಜನರು ಬರುವ ಸಾಧ್ಯತೆ ಇರುವ ಕಾರಣ, ಅಗತ್ಯವಿದ್ದಲ್ಲಿ ಪೊಲೀಸರ ಸಹಾಯ ಪಡೆಯಬೇಕು ಎಂದರು.

    ದೇವಾಲಯಗಳಲ್ಲಿ ಅನ್ನಸಂತರ್ಪಣೆ ಮಾಡುತ್ತಿದ್ದರೆ, ಮುಂದುವರಿಸಬಹುದು. ಹೊಸದಾಗಿ ಪ್ರಾರಂಭಿಸಬಾರದು. ಸುತ್ತ ಅಂಗಡಿ ಹಾಗೂ ಹೊಟೇಲ್‌ನವರು ಮಾಸ್ಕ್ ಧರಿಸಬೇಕು. ದೇವಾಲಯಗಳಲ್ಲಿ ಜಾತ್ರಾ ಉತ್ಸವ, ಬ್ರಹ್ಮಕಲಶೋತ್ಸವ, ಪವಿತ್ರೋತ್ಸವ ಮುಂತಾದ ವಿಶೇಷ ಉತ್ಸವಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಇದನ್ನು ನಿಲ್ಲಿಸುವ ಸಂಪ್ರದಾಯವಿಲ್ಲದ ದೇವಳಗಳಲ್ಲಿ ತಂತ್ರಿ ಗಳು, ಆರ್ಚಕರು, ಸಿಬ್ಬಂದಿ ಸಾಂಕೇತಿಕವಾಗಿ ಉತ್ಸವ ನಡೆಸಬಹುದು ಎಂದು ಜಗದೀಶ್ ಹೇಳಿದರು.

    ಉಪ್ಪಿನಂಗಡಿ ಅಂಚೆ ಕಚೇರಿ ಸೀಲ್‌ಡೌನ್: ಇಲ್ಲಿನ ಅಂಚೆ ಕಚೇರಿಯ ಇನ್ನೋರ್ವ ಸಿಬ್ಬಂದಿಗೆ ಕರೊನಾ ಪಾಸಿಟಿವ್ ವರದಿ ಬಂದ ಹಿನ್ನೆಲೆ ಗುರುವಾರ ಮತ್ತು ಶುಕ್ರವಾರ ಉಪ್ಪಿನಂಗಡಿ ಅಂಚೆ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗುವುದೆಂದು ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts