More

    ಎಪಿಎಂಸಿಯಲ್ಲಿ ಸಿಬ್ಬಂದಿ ಕೊರತೆ

    ಶ್ರವಣ್ ಕುಮಾರ್ ನಾಳ ಪುತ್ತೂರು

    ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. 6 ವರ್ಷಗಳಿಂದ ಎಪಿಎಂಸಿಯಲ್ಲಿ ಪ್ರಭಾರ ಕಾರ್ಯದರ್ಶಿ ಹಾಗೂ ಕಾಯಂ ಇಬ್ಬರು ಸಿಬ್ಬಂದಿ ಜತೆ ನಿತ್ಯ ವೇತನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆೆ. ಪ್ರಸ್ತುತ ಜಿಲ್ಲೆಯಲ್ಲೇ ಅತೀ ಹೆಚ್ಚು ಆದಾಯ ಗಳಿಸುವ ಕೃಷಿಉತ್ಪನ್ನ ಮಾರುಕಟ್ಟೆ ಎಂಬ ಹೆಸರು ಪುತ್ತೂರು ಎಪಿಎಂಸಿಗಿದೆ. ಸಿಬ್ಬಂದಿ ಕೊರತೆ ಮಧ್ಯೆಯೂ ಉತ್ತಮ ಆಡಳಿತ ವ್ಯವಸ್ಥೆಯಿಂದ ಎಪಿಎಂಸಿ ಲಾಭದಾಯಕವಾಗಿ ನಡೆಯುತ್ತದೆ ಎಂಬುದು ವಿಶೇಷ.

    ಎಪಿಎಂಸಿಯಲ್ಲಿ 15 ಹುದ್ದೆಯಿದ್ದು, ಈ ಪೈಕಿ ಇಬ್ಬರು ಮಾತ್ರ ಕಾಯಂ ಸಿಬ್ಬಂದಿ ಇದ್ದು, ಉಳಿದ 13 ಹುದ್ದೆ ಖಾಲಿಯಾಗಿದೆ. ಈ ಹುದ್ದೆಯನ್ನು ಭರ್ತಿ ಮಾಡುವಂತೆ ಎಪಿಎಂಸಿ ನಿರ್ಣಯ ಕೈಗೊಂಡು ಎಪಿಎಂಸಿ ಕೃಷಿ ಮಾರುಕಟ್ಟೆ ಮಂಡಳಿಗೆ ಮನವಿ ಸಲ್ಲಿಸಿತ್ತು. ಆದರೆ ಈ ತನಕ ಸರ್ಕಾರ ಯಾವುದೇ ನೇಮಕಾತಿ ನಡೆದಿಲ್ಲ.

    ಈಗ ಕರೊನಾ ಹಿನ್ನೆಲೆಯಲ್ಲಿ ಹೊರಗುತ್ತಿದೆ ಸಿಬ್ಬಂದಿಯನ್ನೂ ಶೇ.50 ಕಡಿತಗೊಳಿಸುವಂತೆ ಸರ್ಕಾರದಿಂದ ಸುತ್ತೋಲೆ ಬಂದಿದೆ. ಎಪಿಎಂಸಿಯಲ್ಲಿ ಈಗಾಗಲೇ 15 ಮಂದಿ ಹೊರಗುತ್ತಿಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈಗ ಸಿಬ್ಬಂದಿ ಕಡಿತ ಮಾಡಲು ಸುತ್ತೋಲೆ ಬಂದಿರುವ ಕಾರಣ 5 ಮಂದಿಯನ್ನು ವಿವಿಧ ತಾಂತ್ರಿಕ ಕಾರಣಗಳಿಂದ ಬಿಡುಗಡೆ ಮಾಡಲಾಗಿದೆ. ಉಳಿದಂತೆ 10 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಇಬ್ಬರನ್ನು ತೆರವು ಮಾಡಬೇಕಾಗಿದೆ. ಆದರೆ ಕರೊನಾ ಸಂಕಷ್ಟದ ಸಂದರ್ಭದಲ್ಲಿ ಅವರನ್ನು ಬಿಡುವುದೂ ಸಮಸ್ಯೆಯಾಗಿದೆ.

    ಪುತ್ತೂರಿನಲ್ಲಿ ಎಪಿಎಂಸಿಯ ಆದಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಕಾಯಂ ಸಿಬ್ಬಂದಿಯನ್ನು ನೇಮಿಸುವಂತೆ ಎಪಿಎಂಸಿ ಮಾರುಕಟ್ಟೆ ಮಂಡಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ನೇಮಕ ಸಾಧ್ಯವಿಲ್ಲದಿದ್ದಲ್ಲಿ ಕನಿಷ್ಠ ಇಬ್ಬರು ಸಿಬ್ಬಂದಿಯನ್ನು ಜಿಲ್ಲೆಯಿಂ ನಿಯೋಜನೆಗೊಳಿಸುವಂತೆ ಮನವಿ ಮಾಡುವುದೆಂದು ಎಪಿಎಂಸಿ ಸಭೆಯಲ್ಲಿ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ.
    -ದಿನೇಶ್ ಮೆದು, ಪುತ್ತೂರು ಎಪಿಎಂಸಿ ಅಧ್ಯಕ್ಷ

    ಜಿಲ್ಲೆಯಲ್ಲೇ ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿ ಕೊರತೆ ನಡುವೆಯೂ ಪುತ್ತೂರಿನಲ್ಲಿ ಎಪಿಎಂಸಿಯ ಆದಾಯ ಹೆಚ್ಚಿದೆ. ವಿಶೇಷ ನೆಲೆಯಲ್ಲಾದರೂ ಇಲ್ಲಿಗೆ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು, ಹೊರಗುತ್ತಿದೆ ಸಿಬ್ಬಂದಿಯನ್ನೂ ಶೇ.50 ಕಡಿತಗೊಳಿಸುವಂತೆ ಸರ್ಕಾರ ನೀಡಿದ ಸುತ್ತೋಲೆಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
    – ಸಂಜೀವ ಮಠಂದೂರು, ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts