More

    ಸಣ್ಣ ಅಪಘಾತದಿಂದ ಗಾಯಗೊಂಡು ಸ್ಕ್ಯಾನ್​ ಮಾಡಿಸಲು ಆಸ್ಪತ್ರೆಗೆ ಹೋದ ಮಹಿಳೆಗೆ ಕಾದಿತ್ತು ಶಾಕ್​!

    ಬೀಜಿಂಗ್​: ಸಣ್ಣ ಕಾರು ಅಪಘಾತವೊಂದರಲ್ಲಿ ಗಾಯಗೊಂಡ 29 ವರ್ಷದ ಮಹಿಳೆಯೊಬ್ಬಳು ಸಿಟಿ ಸ್ಕ್ಯಾನ್​ ಮಾಡಿಸಲೆಂದು ಆಸ್ಪತ್ರೆಗೆ ಹೋದಾಗ ಸ್ಕ್ಯಾನ್​ ರಿಪೋರ್ಟ್​ ನೀಡಿ ಅಘಾತಕ್ಕೊಳಗಾದ ಘಟನೆ ನಡೆದಿದೆ. ಅಷ್ಟಕ್ಕೂ ಮಹಿಳೆಗೆ ಆಘಾತವಾಗಲು ಕಾರಣವೇನೆಂದರೆ ಆಕೆಯ ಮೆದುಳಿನಲ್ಲಿ ಎರಡು ಸೂಜಿಗಳು ಆಳಕ್ಕೆ ನಾಟಿಕೊಂಡಿದ್ದವು.

    ಮಹಿಳೆಯ ಹೆಸರು ಜೌ. ಈಕೆ ಚೀನಾದ ಹೆನಾನ್​ ಪ್ರಾಂತ್ಯರ ಜೆಂಗ್​ಜೌ ನಗರದ ನಿವಾಸಿ. ಆಕಸ್ಮಿಕ ಕಾರು ಅಪಘಾತದಲ್ಲಿ ಸಣ್ಣದಾಗಿ ಗಾಯಗೊಂಡಿದ್ದ ಜೌಗೆ ಸಿಟಿ ಸ್ಕ್ಯಾನ್​ ಮಾಡಿಸುವಂತೆ ಸಲಹೆ ನೀಡಲಾಗಿತ್ತು. ಅದರಂತೆಯೇ ಜೌ, ಸ್ಕ್ಯಾನ್​ ಮಾಡಿಸಿದ್ದಳು. ಆದರೆ, ವರದಿಯಲ್ಲಿ ಅಪಘಾತಕ್ಕೆ ಸಂಬಂಧಿಸಿದ ಯಾವುದೇ ಆಂತರಿಕ ಗಾಯಗಳು ಇರಲಿಲ್ಲ.

    ಆದರೆ, ವರದಿಯಲ್ಲಿ ಮಾತ್ರ ಬೆಚ್ಚಿ ಬೀಳಿಸುವ ಅಂಶವೊಂದಿತ್ತು. ಸುಮಾರು 5 ಸೆಂಟಿಮೀಟರ್​ ಉದ್ದದ ಸೂಜಿ ಮಾದರಿಯ ಚೂಪಾದ ಎರಡು ಲೋಹದ ವಸ್ತುಗಳು ಮಹಿಳೆಯ ತಲೆಬುರುಡೆಯಲ್ಲಿ ನಾಟಿಕೊಂಡಿದ್ದು ಪತ್ತೆಯಾಯಿತು. ಆದರೆ, ಜೌ ಹೇಳುವ ಪ್ರಕಾರ ಆಕೆ ಈವರೆಗೂ ಒಮ್ಮೆಯು ತಲೆಯ ಶಸ್ತ್ರ ಚಿಕಿತ್ಸೆ ನಡೆದಿಲ್ಲವಂತೆ. ಅಲ್ಲದೆ, ಒಮ್ಮೆಯೂ ತಲೆನೋವಾಗಲಿ ಅಥವಾ ಆರೋಗ್ಯ ಹದಗೆಡುವುದಾಗಲಿ ಆಗಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಸೇನಾ ವಿಮಾನ ಪತನ: 22 ವಿದ್ಯಾರ್ಥಿಗಳು ಸಜೀವ ದಹನ, ನಾಲ್ವರು ಕಣ್ಮರೆ

    ಹಾಗಾದರೆ ಸೂಜಿಯು ಜೌ, ತಲೆಗೆ ಹೇಗೆ ನುಸುಳಿತು ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ. ಆದರೂ ಒಂದು ಅಂದಾಜಿಗೆ ಬಂದಿರುವ ವೈದ್ಯರು ಬಾಲ್ಯದಲ್ಲಿ ಆಕಸ್ಮಿಕವಾಗಿ ಜೌ ತಲೆಗೆ ಸೂಜಿ ನುಸುಳಿರಬಹುದು ಎಂದಿದ್ದಾರೆ. ಇದೀಗ ಜೌ ಬೆಳೆದಿರುವ ಹಿನ್ನೆಲೆಯಲ್ಲಿ ಅದನ್ನು ಹೊರ ತೆಗೆಯುವುದು ಸಾಧ್ಯವಿಲ್ಲ ಎಂದಿದ್ದಾರೆ.

    ಸೂಜಿಯು ತಲೆಯ ಮುಖ್ಯ ಭಾಗಕ್ಕೆ ನಾಟದೇ ಇರುವುದರಿಂದ ಜೌಗೆ ಆ ಬಗ್ಗೆ ಯಾವುದೇ ಅನುಭವವಾಗಿಲ್ಲ. ಇದೀಗ ಸೂಜಿಯನ್ನು ತೆಗೆಸುವುದು ಅನಿವಾರ್ಯವಾಗಿದ್ದು, ತಜ್ಞ ವೈದ್ಯರಿಗೆ ಶಿಫಾರಸ್ಸು ಮಾಡಲಾಗಿದೆ.

    ಸೂಜಿ ಹೇಗೆ ಒಳಹೊಕ್ಕಿತು ಎಂಬುದು ಸಹ ಜೌ ಕುಟುಂಬಕ್ಕೂ ತಿಳಿದಿಲ್ಲ. ಆದಾಗ್ಯು ತಲೆಯಲ್ಲಿ ಎರಡು ಕಪ್ಪು ಚುಕ್ಕೆಗಳು ಇರುವುದನ್ನು ಜೌ ಅಂಕಲ್​ ಮೊದಲೇ ಪತ್ತೆಹಚ್ಚಿದ್ದರು. ಆದರೆ, ಗಾಯದ ಕಲೆ ಇರಬಹುದೇನೋ ಎಂದು ಸುಮ್ಮನಾಗಿದ್ದರಂತೆ. ಆದರೆ, ಇದೀಗ ಸೂಜಿಗಳು ನಾಟಿಕೊಂಡಿವೆ ಎಂದು ತಿಳಿದಬಳಿಕ ಕುಟುಂಬ ಆತಂಕಕ್ಕೀಡಾಗಿದೆ. (ಏಜೆನ್ಸೀಸ್​)

    ಎನ್​ಸಿಬಿ ಕಚೇರಿ ತಲುಪಿದ್ರು ದೀಪಿಕಾ ಪಡುಕೋಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts