More

    ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಅಪರಾಧಿಯನ್ನು ಗಲ್ಲುಶಿಕ್ಷೆಯಿಂದ ಪಾರು ಮಾಡಿದ ಒಂಟೆಗಳು

    ಮೊಗಾದಿಶು(ಸೊಮಾಲಿಯಾ): ಹನ್ನೆರಡು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಸೊಮಾಲಿಯ ಮೂಲದ ವ್ಯಕ್ತಿಯೊಬ್ಬ, ಸಂತ್ರಸ್ತೆಯ ಪಾಲಕರಿಗೆ 75 ಒಂಟೆಗಳನ್ನು ಪರಿಹಾರವಾಗಿ ನೀಡುವ ಮೂಲಕ ಶಿಕ್ಷೆಯಿಂದ ಪಾರಾಗಿದ್ದಾನೆ.

    2019ರ ಫೆಬ್ರವರಿಯಲ್ಲಿ ಬಾಲಕಿಯನ್ನು ಗಾಲ್ಕಾಯೊ ನಗರದ ದಕ್ಷಿಣ ಪುಂಟ್ಲ್ಯಾಂಡ್​​ನಲ್ಲಿರುವ ಮಾರುಕಟ್ಟೆಯಿಂದ ಅಪಹರಣ ಮಾಡಲಾಗಿತ್ತು. ಬಳಿಕ ಬಾಲಕಿ ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿ, ಜನನಾಂಗಕ್ಕೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಭಯಾನಕ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಕ್ರಮ ಕೈಗೊಳ್ಳಲು ಅಧಿಕಾರಿಗಳ ಬಳಿ ತಾಕೀತು ಮಾಡಿದ್ದರು.

    ಸೊಮಾಲಿಯಾದ 2016ರ ಲೈಂಗಿಕ ಅಪರಾಧ ಕಾನೂನಿನ ಅಡಿಯಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗಿತ್ತು. ಲೈಂಗಿಕ ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುವ ಆಫ್ರಿಕಾ ದೇಶದ ಮೊದಲ ಕಾನೂನು ಇದಾಗಿತ್ತು. ಇದರನ್ವಯ ಫೆಬ್ರವರಿಯಲ್ಲಿ ಇಬ್ಬರು ಅಪರಾಧಿಗಳನ್ನು ಫೈರಿಂಗ್​ ಮಾಡಿ ಹತ್ಯೆ ಮಾಡಲಾಗಿತ್ತು. ಆದರೆ, ಉಳಿದ ಇನ್ನೊರ್ವ ಅಪರಾಧಿ ಅಬ್ದಿಸಲಾನ್​ ಅಬ್ದಿರಹಮಾನ್​ಗೆ ಕಾರಣಾಂತರಗಳಿಂದ ಶಿಕ್ಷೆಯು ವಿಳಂಬವಾಗಿತ್ತು.

    ಆದರೆ, ಫೆಬ್ರವರಿಯ ಕೊನೆಯಲ್ಲಿ ಸಂತ್ರಸ್ತೆ ಕುಟುಂಬಕ್ಕೆ ಸುಮಾರು 75 ಒಂಟೆಗಳನ್ನು ಪರಿಹಾರವನ್ನಾಗಿ ನೀಡಿ ಅಬ್ದಿಸಲಾನ್​ ಅಬ್ದಿರಹಮಾನ್​ ಬಿಡುಗಡೆಯಾಗಿದ್ದಾನೆ. ಈ ಬಗ್ಗೆ ಸಂತ್ರಸ್ತೆಯ ಪಾಲಕರು ಕೂಡ ಮಾಹಿತಿಯನ್ನು ಖಚಿತ ಪಡಿಸಿದ್ದಾರೆ.

    ಆದರೆ, ಸೊಮಾಲಿಯಾದ ಮಹಿಳಾ ಕಾರ್ಯಕರ್ತರು ಮಾತ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಪ್ರದಾಯವಾದಿ ನಾಯಕರು ಒಳಗೊಂಡಿರುವುದರಿಂದ ಸೊಮಾಲಿಯಾದ ಪುಂಟ್ಲ್ಯಾಂಡ್​ನಲ್ಲಿ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಗುವುದಿಲ್ಲ ಎಂದು ಕಾರ್ಯಕರ್ತೆಯೊಬ್ಬರು ಕಿಡಿಕಾರಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts