More

    ವಿಮಾನದಲ್ಲಿ ಕರೊನಾ ಸೋಂಕಿತರು ಇರಬಹುದೆಂಬುದನ್ನು ಕೇಳಿ ಪೈಲಟ್​ಗಳಿಬ್ಬರು ಮಾಡಿದ್ದನು ಕೇಳಿದ್ರೆ ಶಾಕ್​ ಖಂಡಿತ!

    ನವದೆಹಲಿ: ವಿಮಾನದಲ್ಲಿರುವ ಪ್ರಯಾಣಿಕರಲ್ಲಿ ಕರೊನಾ ಸೋಂಕಿತರ ಸಂಭವನೀಯತೆ ಬಗ್ಗೆ ಕೇಳಿದ ಇಬ್ಬರು ಪೈಲಟ್​ಗಳು ಆನ್​ಬೋರ್ಡ್​ ವಿಮಾನದ ಕಾಕ್​ಪಿಟ್​ನಿಂದ ತರಾತುರಿಯಲ್ಲಿ ಆಚೆ ಬಂದ ಶಾಕಿಂಗ್​ ಘಟನೆ ನಡೆದಿದೆ.
     
    ಏರ್​ ಏಷಿಯಾ ವಿಮಾನದ ಇಬ್ಬರು ಪೈಲಟ್​ಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಹೀಗೆ ಮಾಡಿದ್ದಾರೆ. ಕಾಕ್​ಪಿಟ್​ನ ಕಿಟಕಿ ಯಿಂದ ಏಣಿಯ ಸಹಾಯ ಮೂಲಕ ಹೊರಕ್ಕೆ ಬಂದಿದ್ದಾರೆ. ಈ ಮೂಲಕ ವಿಮಾನದಲ್ಲಿದ್ದದ ಪ್ರಯಾಣಿಕರನ್ನು ಪೈಲಟ್​ ನಿರ್ಲಕ್ಷಿಸಿದ್ದಾರೆ.
     
    ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ. ವಿಡಿಯೋದಲ್ಲಿ ಪೈಲಟ್​ಗಳು ಭಾರಿ ಎಚ್ಚರಿಕೆಯಿಂದ ಕಾಕ್​ಪಿಟ್​ನ ಕಿಟಕಿ ತೆಗೆದು ತಮ್ಮ ಲಗೇಜ್​ಗಳನ್ನು ತೆಗೆದುಕೊಂಡು ಸ್ಟೇರ್ಸ್​ನ ಸಹಾಯದಿಂದ ಹೊರಬಂದಿದ್ದಾರೆ. ಕರೊನಾ ವೈರಸ್​ ಎಷ್ಟರಮಟ್ಟಿಗೆ ಭೀತಿ ಸೃಷ್ಟಿಸಿದೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ.
     
    ಇನ್ನು ಜಾಗತಿಕವಾಗಿ ಕರೊನಾ ವೈರಸ್​ನಿಂದ ಮೃತಪಟ್ಟವರ ಸಂಖ್ಯೆ 18 ಸಾವಿರವನ್ನು ದಾಟಿದೆ. 4 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. (ಏಜೆನ್ಸೀಸ್​)
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts