ಮಲ್ಲಿಕಾರ್ಜುನ ಖರ್ಗೆ‌ ಕೂಡಲೇ ಮೋದಿಯವರ ಬಳಿ ಕ್ಷಮೆ‌ ಕೇಳಬೇಕು:ಶೋಭಾ ಕರಂದ್ಲಾಜೆ

Shobha Karandlaje
Published on

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ‌ ಅವರು‌ ಕೂಡಲೇ ಮೋದಿಯವರ ಬಳಿ ಕ್ಷಮೆ‌ ಕೇಳಬೇಕು. ಮಾಧ್ಯಮಗಳಲ್ಲಿ‌ ಬ್ರೇಕಿಂಗ್ ನ್ಯೂಸ್‌ಬರೋಕಾಗಿ ಹೇಳಿಕೆ ಕೊಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಕಾಂಗ್ರೆಸ್​​ ಪಕ್ಷದ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ನರಗುಂದದಲ್ಲಿ‌ ಮೋದಿಯವರನ್ನು ಇವತ್ತು ಟೀಕಿಸಿದ್ದಾರೆ. ‌ ಮೋದಿ ವಿಷದ ಹಾವು ಅವರ‌ ವಿಷದ‌ ಹಾಲು‌ ನೆಕ್ಕಿದರೆ‌ ನೀವು ಸಾವನ್ನಪ್ತೀರಿ ಎಂದಿದ್ದಾರೆ. ಕೇವಲ ಕರ್ನಾಟಕದಲ್ಲಿ ಅಧಿಕಾರದ ಕುರ್ಚಿ ಹಿಡಿಯೋಕೆ ಈ‌ ಹೇಳಿಕೆ ನೀಡುತ್ತಿದ್ದಾರೆ. ಇಂತಹ‌ ನೀಚ ಮಟ್ಟಕ್ಕೆ ಇಳಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ‌ ಅವರು‌ ಕೂಡಲೇ ಮೋದಿಯವರ ಕ್ಷಮೆ‌ ಕೇಳಬೇಕು ಎಂದು ಖರ್ಗೆ ವಿರುದ್ಧವಾಗಿ ಕಿಡಿಕಾರಿದ್ದಾರೆ.

ರಾಜಕೀಯ ಮಾಡೋಕೆ ಜನತ ಬಳಿ‌ಹೋಗಬೇಕು. ಅವರ ಅಭಿವೃದ್ಧಿ ‌ಪರವಾಗಿ‌ಮತ ಕೇಳಬೇಕು. ಹಿಂದೆ ಲೈಟ್‌ಕಂಬ‌ ತೋರಿಸಿ ಕಾಂಗ್ರೆಸ್ ಅಭ್ಯರ್ಥಿ ಅಂದರೂ ವೋಟ್‌ ಹಾಕುವ ಕಾಲ‌ವೊಂದಿತ್ತು. ಆದರೆ ಅವರು ಮಾಡಿದ‌ ಕೆಲಸಗಳು ಪಕ್ಷ‌ ಅಧೋಗತಿಗೆ‌ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇವತ್ತು ಭಾರತದ‌ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಕ್ಕೆ ಹೋದರೆ ಕೇವಲ ಪ್ರಧಾನಿ ಅಂತ‌ಹೋಗಲ್ಲ. ಬದಲಾಗಿದೆ. ದೇಶದ ಒಬ್ಬ ಪ್ರತಿನಿಧಿ ಯಾಗಿ‌ ಹೋಗುತ್ತಾರೆ ಎಂದು ಮೋದಿ ಅವರ ಕೆಲಸದ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net