More

    ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತೆ ನಿಯಮ ರೂಪಿಸಿ; ಚುನಾವಣಾ ಅಧಿಕಾರಿಗೆ ಮನವಿ ಮಾಡಿದ ಶೋಭಾ ಕರಂದ್ಲಾಜೆ

    ಬೆಂಗಳೂರು: ಎಲ್ಲರಿಗೂ ಧಾರ್ಮಿಕ ಹಕ್ಕು ಇದೆ. ಯಾವುದೇ ಸಂದರ್ಭದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಬರದ ಹಾಗೆ ನಡೆದುಕೊಳ್ಳಬೇಕು. ಆದರೆ ಚುನಾವಣಾ ಆಯೋಗ ಧಾರ್ಮಿಕ ಕೇಂದ್ರಗಳಲ್ಲಿ, ದೇವಸ್ಥಾನದಲ್ಲಿ ಪ್ರಸಾದ ಕೊಡುವುದಕ್ಕೂ ತಕರಾರು ಮಾಡುತ್ತಿದೆ ಎಂದು ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ನಾಮಪತ್ರ ಹಿಂಪಡೆದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ; ಬಿಜೆಪಿ ಅಭ್ಯರ್ಥಿ ನಿರಾಳ!

    ಧಾರ್ಮಿಕ ಆಚರಣೆಯಿಂದ ತೊಂದರೆ

    ಧಾರ್ಮಿಕ ಕೇಂದ್ರಗಳಲ್ಲಿ ಪ್ರಸಾದ ಕೊಡುವ ವಿಚಾರಕ್ಕೆ ಚುನಾವಣಾ ಆಯೋಗ ತಕರಾರು ಮಾಡಿರುವ ವಿಚಾರವಾಗಿ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ಶೋಭಾ ಕರಂದ್ಲಾಜೆ ಮನವಿ ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇದು ಧಾರ್ಮಿಕ ಆಚರಣೆ ಹೆಚ್ಚು ನಡೆಯುವ ಸಮಯವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೋತ್ಸವ, ಕರಾವಳಿ ಭಾಗದಲ್ಲಿ ದೈವಾರಾಧನೆ, ನೇಮೋತ್ಸವ ನಡೆಯುತ್ತಿದೆ. ಆದರೆ ಚುನಾವಣಾ ಆಯೋಗದ ಕೆಲ ನಿಯಮಗಳಿಂದ ಧಾರ್ಮಿಕ ಆಚರಣೆಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಭಿನ್ನಮತ ಮರೆತು ಕೆಲಸ ಮಾಡಿ; ವಿಜಯಪುರ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಖಡಕ್ ಸೂಚನೆ

    ಹರಕೆ ತೀರಿಸಲೂ ಕಷ್ಟವಾಗಿದೆ

    ಕೊಡಗಿನಲ್ಲಿ ದೇವಸ್ಥಾನವೊಂದರಲ್ಲಿ ಪ್ರಸಾದ ಹಂಚಿದ್ದಕ್ಕೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ನಮ್ಮ ಧಾರ್ಮಿಕ ಭಾವನೆಯ ಜತೆಗೆ ದೇವಸ್ಥಾನದಲ್ಲಿ ಅನ್ನ ಪ್ರಸಾದ ಪ್ರಮುಖವಾದುದು. ಬಹಳಷ್ಟು ಜನ ವರ್ಷದ ಹಿಂದೆಯೇ ಅನ್ನದಾನ ಮಾಡಲು ಹರಕೆ ಹೊತ್ತಿರುತ್ತಾರೆ. ಚುನಾವಣೆ ಎಂದು ಅದನ್ನೇ ನಿಷೇಧ ಮಾಡಿದರೆ, ಅವರು ಮತ್ತೆ ಅನ್ನದಾನ ಮಾಡುವುದು ಕಷ್ಟ. ದೂರಿದಿಂದ ಮತ್ತೆ ಬಂದು ಅನ್ನದಾನ ಮಾಡಲು ಕಷ್ಟವಾಗುತ್ತದೆ ಎಂದು ಶೋಭಾ ಕರಂದ್ಲಾಜೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts