More

    ಅಕ್ಟೋಬರ್​ 16ಕ್ಕೆ ಚಿರು ಅಭಿನಯದ ‘ಶಿವಾರ್ಜುನ’ ಮರುಬಿಡುಗಡೆ

    ಬೆಂಗಳೂರು: ಚಿತ್ರಪ್ರದರ್ಶನ ಪ್ರಾರಂಭಿಸಬಹುದು ಎಂದು ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಚಿತ್ರಪ್ರದರ್ಶನ ಶುರು ಮಾಡುವುದಕ್ಕೆ ಹಲವು ನಿರ್ಮಾಪಕರು ಮತ್ತು ವಿತರಕರು ಉತ್ಸಾಹ ತೋರಿದ್ದಾರೆ. ಈಗಾಗಲೇ ದಸರಾ ಹಬ್ಬದ ಸಂದರ್ಭದಲ್ಲಿ, ‘ಡಾರ್ಲಿಂಗ್​’ ಕೃಷ್ಣ ಅಭಿನಯದ ಮತ್ತು ನಿರ್ದೇಶನದ ‘ಲವ್​ ಮಾಕ್​ಟೇಲ್​’ ಬಿಡುಗಡೆಯಾಗಲಿದೆ. ಅದಕ್ಕೂ ಒಂದು ವಾರ ಮುನ್ನ. ಅಂದರೆ ಅಕ್ಟೋಬರ್​ 16ಕ್ಕೆ ಚಿರಂಜೀವಿ ಅಭಿನಯದ ‘ಶಿವಾರ್ಜುನ’ ಚಿತ್ರವು ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಮತ್ತೆ ಚಿತ್ರಮಂದಿರದಲ್ಲಿ ‘ದಿಯಾ’; ಮೆಲೊಡಿ ಹಾಡಿನೊಂದಿಗೆ…

    ‘ಶಿವಾರ್ಜುನ’ ಚಿತ್ರವು ಮಾರ್ಚ್​ 13ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಅದಾಗಿ ಮರುದಿನವೇ, ಅಂದರೆ ಮಾರ್ಚ್​ 14ರಂದು ಲಾಕ್​ಡೌನ್​ ಘೋಷಣೆಯಾಯಿತು. ಹಾಗಾಗಿ ಚಿತ್ರಪ್ರದರ್ಶನ ರದ್ದಾಯಿತು. ಕೇವಲ ಒಂದು ದಿನ ಮಾತ್ರ ಪ್ರದರ್ಶನ ಕಂಡಿದ್ದ ಈ ಚಿತ್ರವನ್ನು, ಲಾಕ್​ಡೌನ್​ ತೆರವಾದ ಮೇಲೆ ಮರುಬಿಡುಗಡೆ ಮಾಡುವುದಾಗಿ ನಿರ್ಮಾಪಕ ಶಿವಾರ್ಜುನ್​ ಹೇಳಿಕೊಂಡಿದ್ದರು. ಅದರಂತೆ, ಚಿತ್ರವನ್ನು ಅವರು ಅಕ್ಟೋಬರ್ 16ರಂದು ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.

    ‘ಶಿವಾರ್ಜುನ’ ಚಿತ್ರವು ತಮಿಳಿನ ‘ಗಿರಿ’ ಚಿತ್ರದ ರೀಮೇಕ್​ ಆಗಿದ್ದು, ಮೂಲ ಚಿತ್ರದಲ್ಲಿ ಚಿರಂಜೀವಿ ಅವರ ಮಾವ ಅರ್ಜುನ್​ ಸರ್ಜಾ ಅಭಿನಯಿಸಿದ್ದರು. ಅವರಿಗೆ ನಾಯಕಿಯಾಗಿ ಕನ್ನಡದ ರಮ್ಯಾ ನಟಿಸಿದ್ದರು. 2004ರಲ್ಲಿ ಬಿಡುಗಡೆಯಾದ ಈ ಚಿತ್ರವು ಸಾಕಷ್ಟು ಯಶಸ್ವಿಯಾಗಿತ್ತು. ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡದಲ್ಲಿ ರೀಮೇಕ್​ ಮಾಡಲಾಗಿತ್ತು.

    ಇದನ್ನೂ ಓದಿ: ಲಾಕ್​ಡೌನ್​ ನಂತರ ಬಿಡುಗಡೆಯಾಗಲಿರುವ ಮೊದಲ ಚಿತ್ರ ಯಾವುದು?

    ಶಿವತೇಜಸ್​ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿ ಜತೆಗೆ ಅಮೃತಾ ಅಯ್ಯಂಗಾರ್, ಅಕ್ಷತಾ ಶ್ರೀನಿವಾಸ್​​, ತಾರಾ, ಕಿಶೋರ್​, ಸಾಧು ಕೋಕಿಲ, ಅವಿನಾಶ್​, ಶಿವರಾಜ್​ ಕೆ.ಆರ್​. ಪೇಟೆ, ಕುರಿ ಪ್ರತಾಪ್​ ಮುಂತಾದವರು ನಟಿಸಿದ್ದರು. ಬಾಲಿವುಡ್​ ನಟ ರವಿ ಕಿಶನ್​ ಈ ಚಿತ್ರದಲ್ಲಿ ವಿಲನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ ಅವರ ಮಗ ಸುರಾಗ್​ ಕೋಕಿಲ ಸಂಗೀತ ಸಂಯೋಜಿಸಿರುವ ಈ ಚಿತ್ರವನ್ನು ಶಿವಾರ್ಜುನ್​ ನಿರ್ಮಿಸಿದ್ದಾರೆ.

    ಸುಶಾಂತ್​ ಬಗ್ಗೆ ಸಿನಿಮಾ ಆಗೋದು ಯಾವಾಗ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts