More

    ರಾಜ್ಯಾದ್ಯಂತ ಶಿವ ನಾಮಸ್ಮರಣೆ, ದೇವಸ್ಥಾನಕ್ಕೆ ಬಂದ ಭಕ್ತ ಸಾಗರ

    ಬೆಂಗಳೂರು: ರಾಜ್ಯಾದ್ಯಂತ ಶಿವನಾಮ ಸ್ಮರಣೆ ಮೊಳಗಿದೆ. ಶಿವ ದೇಗುಲಗಳ ಬಳಿ ಭಕ್ತ ಸಾಗರ ನೆರೆದಿದೆ. ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಮಹಾಶಿವರಾತ್ರಿ ಉತ್ಸವ ಕಳೆಗಟ್ಟಿದೆ. ಸಹಸ್ರ ಭಕ್ತಗಣದಿಂದ ಧರ್ಮಸ್ಥಳ ತುಂಬಿದೆ. ಇಂದು ಸಂಜೆ 6 ಗಂಟೆಗೆ ಆರಂಭವಾಗುವ ಶಿವರಾತ್ರಿ ಉತ್ಸವ ನಾಳೆ ಮುಂಜಾನೆವರೆಗೂ ನಡೆಯಲಿದೆ. ಶ್ರೀ ಮಂಜುನಾಥ ಸ್ವಾಮಿಗೆ ಪೂಜೆ, ಅರ್ಚನೆ, ಭಜನೆ, ಸತ್ಸಂಗ, ಶಿವ ಪಂಚಾಕ್ಷರಿ ಪಠಣ ಮಾಡುತ್ತ ಭಕ್ತರು ಜಾಗರಣೆ ಮಾಡಲಿದ್ದಾರೆ.

    ತುಮಕೂರಿನ ಸಿದ್ಧಗಂಗಾ ಮಠದಲ್ಲೂ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತಿದೆ. ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಗ್ಗೆಯಿಂದಲೇ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜೆ ನೆರವೇರಿದೆ. ಮಠದಲ್ಲಿ ಶಿವರಾತ್ರಿ ಪ್ರಯುಕ್ತ 26 ಸಾವಿರ ಎಳ್ಳಿನ‌ ತಂಬಿಟ್ಟು ತಯಾರಾಗಿದ್ದು, ಭಕ್ತರಿಗೆ ತಂಬಿಟ್ಟು ಪ್ರಸಾದ ನೀಡಲಾಗುತ್ತಿದೆ. ನಾಳೆ(ಶುಕ್ರವಾರ) ಐತಿಹಾಸಿಕ ರಥೋತ್ಸವ, ಶನಿವಾರ ಬೆಳ್ಳಿಪಲ್ಲಕ್ಕಿ ಉತ್ಸವ ನೆರವೇರಲಿದೆ.

    ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಸೋಮನಕೊಪ್ಪ ಗ್ರಾಮದ ಪೂರ್ಣಾನಂದ ಮಠದಲ್ಲೂವಿಶಿಷ್ಟ ಶಿವನಾಮ ಸ್ಮರಣೆ ಮೊಳಗಿದೆ. ಶಿವಗಂಗೆ, ಬೆಂಗಳೂರಿನ ಗವಿಗಂಗಾಧರೇಶ್ವರ ಸ್ವಾಮಿ ಸೇರಿದೆ ರಾಜ್ಯದೆಲ್ಲಡೆ ಶಿವ ದೇಗುಲಗಳಲ್ಲಿ ಸಂಭ್ರಮದಿಂದ ಶಿವರಾತ್ರಿ ಮಹೋತ್ಸವ ಆಚರಿಸಲಾಗುತ್ತಿದೆ. ದೇಗುಲದ ಆವರಣದಲ್ಲಿ ದೇವರ ನಾಮಸ್ಮರಣೆ, ಭಜನೆ, ರಾತ್ರಿಪೂರ ಜಾಗರಣೆ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

    150 ಹುದ್ದೆ ತಲಾ 25-30 ಲಕ್ಷ ರೂ.ಗೆ ಸೇಲ್​! ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ

    ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್

    ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts