More

    ಲಾಂಗ್ ಲಾಂಗ್ ಎಗೋ ಲಾಂಗ್ ಹಿಡಿದ ಅನುಭವದಿಂದ ‘ಪಡ್ಡೆಹುಲಿ’ಗೆ ಲಾಂಗ್ ಹಿಡಿಯಲು ಹೇಳ್ಕೊಟ್ಟ ಶಿವಣ್ಣ

    ಬೆಂಗಳೂರು: ಲಾಂಗ್ ಲಾಂಗ್ ಎಗೋ.. ಅಂದರೆ 26 ವರ್ಷಗಳ ಹಿಂದೆಯೇ ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದ ಮೂಲಕ ನಟ ಶಿವರಾಜಕುಮಾರ್​ ಲಾಂಗ್ ಹಿಡಿದು ಸ್ಯಾಂಡಲ್​ವುಡ್​ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಲ್ಲದೇ, ಆ ಬಳಿಕ ಲಾಂಗ್ ಝಳಪಿಸುವಂಥದ್ದೇ ಅನೇಕ ಕಥೆಗಳಿಗೆ ಓಂಕಾರ ಹಾಡಿ, ಅಂಥದ್ದೇ ಹಲವಾರು ಸಿನಿಮಾಗಳ ಲಾಂಗ್​ ಜರ್ನಿಗೆ ಕಾರಣವಾಗಿದ್ದು ಈಗ ಇತಿಹಾಸ.

    ‘ಓಂ’ ಬಳಿಕ ಅದೇ ಪ್ರೇರಣೆಯಿಂದ ಲಾಂಗ್ ಪ್ರಧಾನ ಕಥೆ ಇರುವ ಅದೆಷ್ಟೋ ಸಿನಿಮಾಗಳು ಬಂದಿವೆ. ಅವುಗಳಲ್ಲಿ ಒಂದಷ್ಟು ಯಶಸ್ಸು ಕಂಡಿದ್ದರೆ, ಇನ್ನೊಂದಷ್ಟು ಕ್ಲಿಕ್​ ಆಗದ ಉದಾಹರಣೆಗಳೂ ಇವೆ. ಏನೇ ಆದರೂ ಕನ್ನಡದ ಹಲವು ಸಿನಿಮಾಗಳಲ್ಲಿ ಹೀರೋಗೂ ಲಾಂಗ್​ಗೂ ಒಂದು ಅವಿನಾಭಾವ ಸಂಬಂಧ.

    ಇದನ್ನೂ ಓದಿದ: ಇವರಿಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಕರೊನಾ ಬಂತು!; ಈ ಪೈಕಿ ಕೇರಳದಲ್ಲೇ ಗರಿಷ್ಠ ಪ್ರಕರಣ…

    ಇದೀಗ ನಿರ್ಮಾಪಕ ಕೆ. ಮಂಜು ಅವರ ಪುತ್ರ ‘ಪಡ್ಡೆಹುಲಿ’ ಖ್ಯಾತಿಯ ಶ್ರೇಯಸ್​​ ನಾಯಕನಾಗಿ ಅಭಿನಯಿಸುತ್ತಿರುವ, ಗುಜ್ಜಲ್ ಪುರುಷೋತ್ತಮ್​ ನಿರ್ಮಾಣ, ನಂದಕಿಶೋರ್​ ನಿರ್ದೇಶನದ ‘ರಾಣಾ’ ಚಿತ್ರದಲ್ಲೂ ಲಾಂಗ್ ಬಹಳಷ್ಟು ಝಳಪಿಸಲಿದ್ದು, ಅದಕ್ಕಾಗಿ ಚಿತ್ರೀಕರಣ ಭರದಿಂದ ಸಾಗಿದೆ.

    ಈ ನಡುವೆ ‘ರಾಣಾ’ ಚಿತ್ರತಂಡ ಇತ್ತೀಚೆಗೆ ನಟ ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿದ್ದು, ಅವರು ಚಿತ್ರತಂಡವನ್ನು ಹುರಿದುಂಬಿಸಿ ಶುಭ ಕೋರಿದ್ದಾರೆ. ಮಾತ್ರವಲ್ಲ, ಇದೇ ಸಂದರ್ಭದಲ್ಲಿ ನಟ ಶ್ರೇಯಸ್​ಗೆ ಲಾಂಗ್ ಹೇಗೆ ಹಿಡಿಯಬೇಕು, ಕ್ಯಾಮರಾ ಮುಂದೆ ಲಾಂಗ್ ಹೇಗೆ ಝಳಪಿಸಬೇಕು ಎಂಬ ಕುರಿತು ಸ್ವತಃ ಲಾಂಗ್ ಹಿಡಿದು ಟಿಪ್ಸ್ ಕೊಟ್ಟಿದ್ದಾರೆ.

    ಲಾಂಗ್ ಲಾಂಗ್ ಎಗೋ ಲಾಂಗ್ ಹಿಡಿದ ಅನುಭವದಿಂದ 'ಪಡ್ಡೆಹುಲಿ'ಗೆ ಲಾಂಗ್ ಹಿಡಿಯಲು ಹೇಳ್ಕೊಟ್ಟ ಶಿವಣ್ಣ
    ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್, ನಟರಾದ ಶಿವರಾಜಕುಮಾರ್ ಮತ್ತು ಶ್ರೇಯಸ್​.

    ಗೃಹಸಚಿವರ ಮೇಲೆ ಯಾರು ಅತ್ಯಾಚಾರ ನಡೆಸಿದ್ದಾರೆ?; ತನಿಖೆ ನಡೆಸಿ ಬಹಿರಂಗಪಡಿಸಿ ಎಂದು ಆಗ್ರಹ

    ಫ್ರೀ ಕೊಟ್ರೂ ಊಟ-ತಿಂಡಿ-ನೀರು ಏನೂ ಬೇಡ ಎಂದು ಹೇಳಿ ಸಿಕ್ಕಿಬಿದ್ದ ಸ್ಮಗ್ಲರ್; ಹೊಟ್ಟೆಯಲ್ಲಿತ್ತು 11 ಕೋಟಿ ರೂ. ಮೌಲ್ಯದ ಡ್ರಗ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts