More

    ಮತ್ತೆ ಒಂದಾದ ಹರ್ಷ-ಶಿವರಾಜ್ ಕುಮಾರ್: ವೇದನಾದ ಶಿವಣ್ಣ

    ಬೆಂಗಳೂರು: ‘ಸೆಂಚುರಿ ಸ್ಟಾರ್’ ಶಿವರಾಜಕುಮಾರ್ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಷನ್​ನ ನಾಲ್ಕನೇ ಸಿನಿಮಾದ ಶೀರ್ಷಿಕೆ ಶಿವರಾತ್ರಿ ಹಬ್ಬದ ಪ್ರಯುಕ್ತ ಬಹಿರಂಗವಾಗಿದೆ.

    ‘ಭಜರಂಗಿ’, ‘ವಜ್ರಕಾಯ’ ಮತ್ತು ‘ಭಜರಂಗಿ 2’ ಬಳಿಕ ‘ವೇದ’ ಚಿತ್ರದ ಮೂಲಕ ಈ ನಟ ಮತ್ತು ನಿರ್ದೇಶಕರು ಒಂದಾಗಿದ್ದಾರೆ. ಬರೀ ಶೀರ್ಷಿಕೆ ಅಷ್ಟೇ ಅಲ್ಲ ಚಿತ್ರದ ಫಸ್ಟ್​ಲುಕ್ ಸಹ ರಿವೀಲ್ ಆಗಿದೆ. ಹಿಂದೆಂದೂ ಕಾಣದ ಅವತಾರದಲ್ಲಿ ಶಿವರಾಜಕುಮಾರ್ ಕಾಣಿಸಿಕೊಂಡಿದ್ದು, ಗಡ್ಡದಾರಿಯ ಲುಕ್ ಕುತೂಹಲ ಮೂಡಿಸಿದೆ. 1960ರ ಕಾಲಘಟ್ಟದಲ್ಲಿ ನಡೆದ ಘೋರ ಕಥೆ ಈ ಚಿತ್ರದ್ದಾಗಿರಲಿದೆ ಎಂಬ ಸುಳಿವನ್ನೂ ನಿರ್ದೇಶಕರು ಪೋಸ್ಟರ್​ನಲ್ಲಿ ನೀಡಿದ್ದಾರೆ.

    ಶೀರ್ಷಿಕೆ ಅನಾವರಣ, ಫಸ್ಟ್ ಲುಕ್ ಬಿಡುಗಡೆ ಒಂದೆಡೆಯಾದರೆ ಮತ್ತೊಂದು ವಿಶೇಷ ಸುದ್ದಿಯನ್ನೂ ಶಿವಣ್ಣ ನೀಡಿದ್ದಾರೆ. ಅದೇನೆಂದರೆ, ‘ಗೀತಾ ಪಿಕ್ಚರ್ಸ್’ ಹೆಸರಿನ ಹೊಸ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದು, ಆ ಪ್ರೊಡಕ್ಷನ್ಸ್​ನಲ್ಲಿ ‘ವೇದ’ ಚಿತ್ರ ನಿರ್ವಣವಾಗಲಿದೆ! ಈಗಾಗಲೇ ‘ಶ್ರೀಮುತ್ತು ಸಿನಿ ಸರ್ವೀಸಸ್’ ಹೆಸರಿನ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಶಿವರಾಜಕುಮಾರ್ ಹೊಂದಿದ್ದಾರೆ.

    ಅದರ ಅಡಿಯಲ್ಲಿ ಧಾರಾವಾಹಿ ಮತ್ತು ವೆಬ್​ಸಿರೀಸ್​ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗ ‘ಗೀತಾ ಪಿಕ್ಚರ್ಸ್’ ಸಂಸ್ಥೆ ಶುರು ಮಾಡಿ ‘ವೇದ’ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸ್ವಾಮಿ ಗೌಡ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ.

    ಶ್ರದ್ಧಾ ಕಪೂರ್​ ಹಾಕಿರುವ ಈ ಬಿಕಿನಿ ರೇಟ್ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts