More

    Video: ‘ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನಾ…’ ಹಾಡು ಹೇಳಿದ ಆರ್​ಸಿಬಿ ಸ್ಟಾರ್ ಮ್ಯಾಕ್ಸ್​​ವೆಲ್

    ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿಗಳು ರದ್ದಾಗಿರುವುದರಿಂದ ಕ್ರಿಕೆಟ್ ಅಭಿಮಾನಿಗಳು ತೀವ್ರ ನಿರಾಸೆಯಾಗಿದ್ದಾರೆ. ಅದರಲ್ಲೂ ಆರ್​ಸಿಬಿ ಅಭಿಮಾನಿಗಳಂತೂ ಶಾಕ್​ಗೆ ಒಳಗಾಗಿದ್ದಾರೆ. ಈ ಸಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಆರ್​ಸಿಬಿ ಕಪ್ ಗೆಲ್ಲುವ ಹಾಟ್​ ಫೇವರಿಟ್ ಆಗಿತ್ತು.

    ಆದರೆ, ಟೂರ್ನಿ ರದ್ದಾಗಿರುವುದರಿಂದ ಎಲ್ಲರೂ ಅವರವರ ಮನೆಗೆ ತೆರಳುವ ಸಿದ್ದತೆಯಲ್ಲಿದ್ದಾರೆ. ಇತ್ತ ತನ್ನ ಆಟಗಾರರಿಗೆ ಆರ್​ಸಿಬಿ ಬಿಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿ ಬೇಸರಿದಿಂದ ಬಿಳ್ಕೊಟ್ಟಿದೆ.

    ಇದೇ ವೇಳೆ ಎಂದಿನಂತೆ ಆರ್​​ಸಿಬಿ ಆಟಗಾರರ ಜೊತೆಗಿದ್ದು ನಗಿಸುತ್ತಾ ಚೀಯರ್ ಹೇಳುವ ನಟ ಡ್ಯಾನಿಶ್ ಶೇಟ್​ ಅವರು ಸ್ಪೋಟಕ ಬ್ಯಾಟ್ಸಮನ್ ಮ್ಯಾಕ್ಸವೆಲ್ ಬಳಿ ಶಿವಣ್ಣ ಅಭಿನಯದ ಜೋಗಿ ಚಿತ್ರದ ‘ಹೊಡಿ ಮಗ ಹೊಡಿ ಮಗ’ ಹಾಡು ಹೇಳಿಸಿದ್ದಾರೆ.

    ಈ ಹಾಡನ್ನು ಹೇಳಲು ಆರಂಭದಲ್ಲಿ ಮ್ಯಾಕ್ಸವೆಲ್ ಕಷ್ಟಪಟ್ಟರೂ ಆಮೇಲೆ ಸಾರಾಗವಾಗಿ ಹಾಡು ಹೇಳಿದ್ದಾರೆ. ಅಲ್ಲದೇ ಅದು ನಮ್ಮ ಶಿವಣ್ಣನ ಸಾಂಗ್ ಎಂದು ಹೇಳಿ ಸಂಭ್ರಮಪಟ್ಟಿದ್ದಾರೆ. ಟ್ವಿಟ್ಟರ್​ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ವಿದೇಶಿಗರಿಗೆ ತಮ್ಮ ವಿಶಿಷ್ಠ ಶೈಲಿಯಿಂದ ಕನ್ನಡ ಕಲಿಸುವ ಡ್ಯಾನಿಶ್ ಶೇಟ್ ಅವರಿಗೆ ಕನ್ನಡಿಗರು ಜೈ ಅಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts