More

    ಮತ್ತೆ ಜತೆಯಾದ ಶಿವಣ್ಣ, ಧನಂಜಯ್ … ಮುಂದಿನ ವರ್ಷ ಚಿತ್ರ ಶುರು

    ಇದೇ ಭಾನುವಾರ (ಜುಲೈ 12) ಶಿವರಾಜಕುಮಾರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಕ್ಕೆ ಸಜ್ಜಾಗುತ್ತಿದ್ದಾರೆ. ಈ ಮಧ್ಯೆ ಹೊಸ ಚಿತ್ರವೊಂದಕ್ಕೆ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಅವರು ಮಾತ್ರವಲ್ಲ, `ಡಾಲಿ’ ಧನಂಜಯ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ.

    ಶಿವರಾಜಕುಮಾರ್ ಮತ್ತು ಧನಂಜಯ್ ಇಬ್ಬರೂ ಎರಡು ವರ್ಷಗಳ ಹಿಂದೆ ಬಿಡುಗಡೆಯಾದ `ಟಗರು’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಶಿವರಾಜಕುಮಾರ್ ಹೀರೋ ಆದರೆ, ಧನಂಜಯ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. `ಟಗರು’ ನಂತರ ಶಿವಣ್ಣ ಮತ್ತು ಧನಂಜಯ್ ಜತೆಯಾಗಿ ನಟಿಸುವ ಕುರಿತಾಗಿ ಚರ್ಚೆ ನಡೆಯುತ್ತಲೇ ಇತ್ತು. ಅದೀಗ ಕಾರ್ಯರೂಪಕ್ಕೆ ಬರುತ್ತಿದೆ.

    ಇದನ್ನೂ ಓದಿ: ಕರೊನಾ ಪೀಡಿತರ ನೆರವಿಗಾಗಿ ಓಟಕ್ಕಿಳಿದ ಸುಮನ್ ನಗರ್‍ಕರ್

    ಅಂದಹಾಗೆ, ಅವರಿಬ್ಬರೂ ಮತ್ತೆಮ್ಮೆ ಜತೆಗೆ ಕರೆತರುತ್ತಿರುವವರು ತಮಿಳಿನ ಖ್ಯಾತ ಛಾಯಾಗ್ರಾಹಕ ಮತ್ತು ನಿರ್ದೇಶಕ ವಿಜಯ್ ಮಿಲ್ಟನ್. ಈ ಹಿಂದೆ `ಗೋಲಿ ಸೋಡಾ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯ್ ಮಿಲ್ಟನ್, ಇದೀಗ ಶಿವರಾಜಕುಮಾರ್ ಮತ್ತು ಧನಂಜಯ್ ಇಬ್ಬರಿಗೂ ಹೊಂದುವಂತಹ ಕಥೆಯನ್ನು ಬರೆದಿದ್ದಾರೆ. ಈ ಚಿತ್ರಕ್ಕೆ ಚಿತ್ರಕಥೆ ಬರೆದಯುವುದರ ಜತೆಗೆ ಛಾಯಾಗ್ರಹಣ ಮತ್ತು ನಿರ್ದೇಶನವನ್ನೂ ಅವರೇ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.

    ಅಂದಹಾಗೆ, ಈ ಚಿತ್ರವನ್ನು ಕೃಷ್ಣಸಾರ್ಥಕ್ ನಿರ್ಮಿಸುತ್ತಿದ್ದಾರೆ. ಇನ್ನು ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಶನಿವಾರ (ಜುಲೈ 11) ಸಂಜೆ 7.20ಕ್ಕೆ ಯೂಟ್ಯೂಬ್‍ನ ಜೆಪಿ ಮ್ಯೂಸಿಕ್ ಚಾನಲ್‍ನಲ್ಲಿ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಸುಶಾಂತ್ ಸಾವಿನ ಬಗ್ಗೆ ಮೌನ ಮುರಿದ ಸುದೀಪ್

    ಅಂದಹಾಗೆ, ಚಿತ್ರ ಈಗ ಘೋಷಣೆಯಾಗಿದ್ದರೂ, ಪ್ರಾರಂಭವಾಗುವುದು ಮುಂದಿನ ವರ್ಷವೇ. ಸದ್ಯಕ್ಕೆ ಶಿವರಾಜಕುಮಾರ್ ಮತ್ತು ಧನಂಜಯ್ ಇಬ್ಬರೂ ಬೇರೆಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ, ಅವನ್ನೆಲ್ಲಾ ಮುಗಿಸಿ ಮುಂದಿನ ವರ್ಷ ಮತ್ತೊಮ್ಮೆ ಒಟ್ಟಿಗೆ ನಟಿಸುವ ಸಾಧ್ಯತೆ ಇದೆ.

    ಅಪ್ಪಟ ಕನ್ನಡಿಗರಲ್ಲಿ ಕ್ಷಮೆ ಕೋರಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts