More

    ಶಿವಮೊಗ್ಗದ ಹರ್ಷ ಸಾವಿಗೆ ಆಕ್ರೋಶ

    ಬಳ್ಳಾರಿ: ಶಿವಮೊಗ್ಗದ ಹರ್ಷ ಸಾವಿಗೆ ಪರಿಹಾರವಲ್ಲ ಮಾತ್ರವಲ್ಲ, ನ್ಯಾಯ ಬೇಕು. ತಪ್ಪಿತಸ್ಥರನ್ನ ಗಲ್ಲಿಗೇರಿಸಿ ಎಂದು ಒತ್ತಾಯಿಸಿ ನಗರದ ರಾಯಲ್‌ವೃತ್ತದಲ್ಲಿ ಹಿಂದುಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

    ಶಿವಾಜಿ ಮತ್ತು ಶ್ರೀರಾಮನ ಪರ ಘೋಷಣೆ ಕೂಗುತ್ತಾ, ಪಾಕಿಸ್ತಾನದ ವಿರುದ್ಧ ಘೋಷಣೆ ಹಾಕಿದ ಪ್ರತಿಭಟನಾಕಾರರು, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ರಾಯಲ್‌ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ದಾರಿ ಉದ್ದಕ್ಕೂ ಹರ್ಷನ ಸಾವಿಗೆ ನ್ಯಾಯ ಸಿಗೋವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ವಿಶ್ವಹಿಂದು ಪರಿಷತ್, ಬಜರಂಗದಳ, ಭಾವಸಾರ ಕ್ಷತ್ರಿಯ ಸಮುದಾಯದಿಂದ ರ‌್ಯಾಲಿ ನಡೆಯಿತು.

    ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ಗೋವಿಂದರಾಜುಲು ಮಾತನಾಡಿ, ಪಿಎಫ್‌ಐ ಹಾಗೂ ಎಸ್‌ಡಿಪಿಐನವರಿಂದಲೇ ಬಜರಂಗದಳದ ಹರ್ಷ ಹತ್ಯೆಯಾಗಿದ್ದು, ಕೂಡಲೇ ಸರ್ಕಾರ ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು. ಪರಿಸ್ಥಿತಿಯನ್ನು ಹೀಗೆ ಬಿಟ್ಟರೆ ಇಡೀ ದೇಶಕ್ಕೆ ಗಂಡಾಂತರ ಕಾದಿದೆ ಎಂಬಂದು ಅರ್ಥವಾಗುತ್ತದೆ. ಸರ್ಕಾರ ಕೂಡಲೇ ನ್ಯಾಯಾಲಕ್ಕೆ ಒಪ್ಪಿಸಿ ಕಠಿಣ ಶಿಕ್ಷೆಗೆ ವಿಧಿಸಬೇಕು. ಇದರ ತನಿಖೆಯನ್ನು ಎನ್‌ಐಎ ಮತ್ತು ಸಿಬಿಐಗೆ ಒಪ್ಪಿಸಿ, ಇದರ ಹಿಂದಿರುವ ಸಮಾಜಘಾತುಕರ ಸಂಚನ್ನು ಬಯಲಿಗೆಳೆದು ಕಠಿಣವಾಗಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿಗೆ ಮನವಿ ಸಲ್ಲಿಸಿದರು. ಇನ್ನು ಪ್ರತಿಭಟನೆ ಕೊನೆಯವೆರೆಗೂ ಹಿಂದುಪರ ಸಂಘಟನೆಯ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಿತು.

    ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ, ವಿವಿಧ ಸಂಘಟನೆಗಳ ಮುಖಂಡರಾದ ಶ್ರೀರಾಮ್, ತಿಮ್ಮಾರೆಡ್ಡಿ, ಅಶೋಕ, ಸುನಿಲ್‌ರೆಡ್ಡಿ, ರಾಮಾಂಜನಿ, ರಾಘವೇಂದ್ರ, ಅರುಣಾ ಬಾಲಚಂದ್ರ, ಶಿವಕೃಷ್ಣಾ, ಕೆ.ಸುಗುಣಾ, ಪುಷ್ಪಲತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts