More

    ಓಬವ್ವನದ್ದು ಕೊಲೆಯಲ್ಲ, ಅಭಿಮಾನದ ಸಾವು

    ಶಿವಮೊಗ್ಗ: ಸಿನಿಮಾದಲ್ಲಿ ತೋರಿಸಿದಂತೆ ಒನಕೆ ಓಬವ್ವಳದ್ದು ಕೊಲೆಯಲ್ಲ. ಶತ್ರು ಸೈನಿಕರು ಹಿಬಂದಿಯಿಂದ ಬಂದು ಚೂರಿ ಹಾಕುವುದಿಲ್ಲ. ಬದಲಿಗೆ ಆಕೆ ಅಭಿಮಾನದಿಂದ ಪ್ರಾಣ ತ್ಯಾಗ ಮಾಡುತ್ತಾಳೆ ಎಂಬುದು ಅನೇಕರಿಗೆ ತಿಳಿದಿಲ್ಲ ಎಂದು ದಾವಣಗೆರೆ ವಿವಿಯ ಡಾ. ಚಿದಾನಂದಮೂರ್ತಿ ಸಂಶೋಧನಾ ಕೇಂದ್ರದ ಕನ್ನಡ ಸಂಶೋಧಕ ಸಿ.ಜಿ.ಹನುಮಂತಪ್ಪ ಹೇಳಿದರು.
    ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಹೈದರಾಲಿ ಕೋಟೆ ಮೇಲೆ ನಾಲ್ಕು ಬಾರಿ ಆಕ್ರಮಣ ಮಾಡುತ್ತಾನೆ. 2ನೇ ಬಾರಿ ಹೈದರಾಲಿ ಪುತ್ರ ಟಿಪ್ಪು ಸುಲ್ತಾನ್ ಕೂಡ ಸಾಥ್ ನೀಡುತ್ತಾನೆ. ಆದರೆ ಸಿನಿಮಾದಲ್ಲಿ ತೋರಿಸಿದಂತೆ ಓಬವ್ವಳ ಇತಿಹಾಸಕ್ಕೆ ಸೀಮಿತವಾಗಿಲ್ಲ ಎಂದರು.
    ಹೈದರಾಲಿ 2ನೇ ಬಾರಿ ಆಕ್ರಮಣ ಮಾಡಿದಾಗ ಸಾವಿರಾರು ಶತ್ರು ಸೈನಿಕರನ್ನು ಓಬವ್ವ ಒಬ್ಬಳೇ ಚೆಂಡಾಡಿದ್ದ ವಿಷಯ ರಾಜ ಮದಕರಿ ನಾಯಕನಿಗೆ ತಿಳಿಯುತ್ತದೆ. ಆಕೆಯ ಸಹಾಸ ಮೆಚ್ಚಿ ಮದಕರಿ ನಾಯಕ ಛಲವಾದಿ ಸಮಾಜದವರಿಗೆ ಅಗಸನಕಲ್ಲು ಗ್ರಾಮವನ್ನೇ ದತ್ತು ನೀಡುತ್ತಾನೆ. ಮತ್ತೊಂದು ಸುತ್ತು ಕಲ್ಲಿನಿಂದ ಕೋಟೆಯನ್ನು ಎತ್ತರಿಸುತ್ತಾನೆ. ಜತೆಗೆ ಓಬವ್ವನ ಪ್ರತಿಮೆಯನ್ನೂ ಕಟ್ಟಿಸುತ್ತಾನೆ. ಅದೇ ಅಭಿಮಾನದಿಂದ ಓಬವ್ವ ನಾಲ್ಕನೇ ಬಾರಿ ಆಕ್ರಮಣ ಮಾಡಿದ್ದ ಸಂದರ್ಭದಲ್ಲಿ ಪ್ರಾಣ ಬಿಡುತ್ತಾಳೆಯೋ ವಿನಃ ಹೈದರಾಲಿ ಸೈನಿಕರು ಕೊಲ್ಲುವುದಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts