More

    ಬಿಜೆಪಿಯದ್ದು ಒಗ್ಗಟ್ಟು, ಕಾಂಗ್ರೆಸ್‌ನದ್ದು ಬಿಕ್ಕಟ್ಟು: ಈಶ್ವರಪ್ಪ ವ್ಯಂಗ್ಯ

    ಶಿವಮೊಗ್ಗ: ನಾವು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಸಾಮೂಹಿಕವಾಗಿ ಚುನಾವಣೆ ಎದುರಿಸುತ್ತೇವೆ. ಬಿಜೆಪಿಯವರು ನಾವು ಎಂಬ ಒಗ್ಗಟ್ಟಿನ ಭಾವ ಹೊಂದಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಾನು..ನಾನು ಎಂದು ಹೇಳಿಕೊಳ್ಳುತ್ತಾರೆ. ನಮ್ಮದು ಒಗ್ಗಟ್ಟಾದರೆ ಕಾಂಗ್ರೆಸ್‌ನವರದ್ದು ಬಿಕ್ಕಟ್ಟು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ಸೋಮವಾರ ಮಲ್ಲೇಶ್ವರ ನಗದರಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಡಕಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿರುವುದು ಹಾಸ್ಯಾಸ್ಪದ. ನಾವು ಕಾಂಗ್ರೆಸ್‌ನವರಂತೆ ಎಂದು ಬಡಿದಾಡುವುದಿಲ್ಲ. ನಾನೇ ಮುಂದಿನ ಸಿಎಂ, ಒಕ್ಕಲಿಗರೆಲ್ಲ ನನ್ನನ್ನು ಬೆಂಬಲಿಸಿ ಎಂದು ಡಿಕೆಶಿ ಹೇಳುತ್ತಾರೆ. ಕುರಬರೆಲ್ಲಾ ನನ್ನ ಹಿಂದೆ ಬರಬೇಕೆಂದು ಸಿದ್ದರಾಮಯ್ಯ ಹೇಳುತ್ತಿರುವುದನ್ನು ಎಲ್ಲರೂ ಗಮನಿಸಿದ್ದಾರೆ ಎಂದರು.
    ಹಿಂದೆ ಇವರದ್ದೇ ಸರ್ಕಾರವಿತ್ತು. ಅದರಲ್ಲಿ ಸಚಿವರಾಗಿದ್ದವರೂ ಗುಂಪುಗಾರಿಕೆಯಲ್ಲಿ ಸೋತರು. ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಬಗ್ಗೆ ನಮಗೆ ಆಸಕ್ತಿಯಿಲ್ಲ. ಅವರನ್ನು ಸೋಲಿಸಲು ಮಾತ್ರ ಆಸಕ್ತಿಯಿದೆ. ಕಾಂಗ್ರೆಸ್ ನಾಯಕರಾದ ಡಿಕೆಶಿ, ಡಾ.ಜಿ.ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಕೂಡಾ ಸಿದ್ದರಾಮಯ್ಯ ಅವರನ್ನು ಸೋಲಿಸಲು ಸಿದ್ಧವಾಗಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
    ಎಲ್ಲಿ ಸ್ಪರ್ಧೆ ಎಂದು ಸಿದ್ದರಾಮಯ್ಯ ಘೋಷಿಸಲಿ. ಅವರ ವಿರುದ್ಧ ನಮ್ಮ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಅವರನ್ನು ಸೋಲಿಸುತ್ತೇವೆ. ಶಾಸಕರಾಗಿರುವವರು ಮತ್ತೊಂದು ಕ್ಷೇತ್ರ ಹುಡುಕಿಕೊಂಡು ಹೋಗುವುದು ಮತದಾರರಿಗೆ ಹಾಗೂ ಪಕ್ಷಕ್ಕೆ ಮಾಡುವ ಅವಮಾನವಾಗಿದೆ. ಈಗ ಯಾವ ಕ್ಷೇತ್ರ ಎಂದು ಯೋಚಿಸುತ್ತಿರುವ ಸಿದ್ದರಾಮಯ್ಯ ಮುಂದೆ ಯಾವ ಪಕ್ಷ ಅಂತ ಯೋಚಿಸುವ ಸ್ಥಿತಿಗೆ ತಲುಪಬಹುದು ಎಂದು ವ್ಯಂಗ್ಯವಾಡಿದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts