More

    ಛತ್ರಪತಿ ಜಯಂತಿ

    ಉಡುಪಿ: ಛತ್ರಪತಿ ಶಿವಾಜಿ ಮಹಾರಾಜರ ಧ್ಯೆರ್ಯ, ಆದರ್ಶ ಮತ್ತು ಶೌರ್ಯ ಸಾಹಸಗಳು ಯುವ ಜನತೆಗೆ ಸಾಧನೆ ಮಾಡಲು ಪ್ರೇರಕ ಶಕ್ತಿ ನೀಡುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಭಿಪ್ರಾಯಪಟ್ಟರು. ಬುಧವಾರ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಮೊಘಲರಿಂದ ಹಿಂದು ಧರ್ಮವನ್ನು ರಕ್ಷಿಸಿದ ಶಿವಾಜಿ ಅವರ ಧೈರ್ಯ ಸಾಹಸಗಳು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಲವು ಹೋರಾಟಗಾರರಿಗೆ ಸ್ಫೂರ್ತಿ ನೀಡಿದ್ದವು. ಯುವ ಜನತೆ ಶಿವಾಜಿಯ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
    ಮರಾಠಾ ಸಮುದಾಯದ ದಿನೇಶ್ ನಾಯಕ್ ಮಾತನಾಡಿ, ನಶಿಸಿ ಹೋಗುವ ಹಂತದಲ್ಲಿದ್ದ ಹಿಂದು ಧರ್ಮದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿದ ಶ್ರೇಯ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ, ಉತ್ತಮ ಆಡಳಿತಗಾರ ಮತ್ತು ಹೋರಾಟಗಾರರಾಗಿದ್ದ ಶಿವಾಜಿ ಅವರ ಆಡಳಿತದಲ್ಲಿ ಪ್ರಜಾಪ್ರಭುತ್ವದ ಕಲ್ಪನೆ ಹಾಗೂ ಜಾತ್ಯತಿತ ನ್ಯಾಯ ಕಾಣಬಹುದು ಎಂದರು. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶೇಷಶಯನ ಕಾರಿಂಜ, ಮರಾಠ ಸಮುದಾಯದ ಮುಖಂಡರಾದ ಪ್ರಕಾಶ್ ರಾವ್ ಕವಡೆ, ಕೇಶವ್‌ರಾವ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts