More

    ಸಮುದ್ರ ತೀರದಲ್ಲಿ ಶಿವ- ಗಂಗಾ ವಿವಾಹ

    ಗೋಕರ್ಣ: ಅಶ್ವಿಜ ಕೃಷ್ಣ ತ್ರಯೋದಶಿ ಶನಿವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ರುದ್ರಪಾದ ಕ್ಷೇತ್ರದ ಸಮುದ್ರ ತೀರದಲ್ಲಿ ನಿರ್ವಿುಸಲಾದ ಮಾವಿನತಳಿರ ವಿಶೇಷ ಮಂಟಪದಲ್ಲಿ ವೈದಿಕರ ನೇತೃತ್ವದಲ್ಲಿ ಶಿವ-ಗಂಗಾ ವಿವಾಹ ಶಾಸ್ತ್ರೋಕ್ತವಾಗಿ ಸಂಪನ್ನವಾಯಿತು.

    ಮಹಾಬಲೇಶ್ವರ ಮಂದಿರದಿಂದ ಮದುವೆ ದಿಬ್ಬಣದ ಉತ್ಸವ ಸರಳವಾಗಿ ಮೆರವಣಿಗೆಯಲ್ಲಿ ಆಗಮಿಸಿತು. ಪ್ರತಿ ವರ್ಷ ಇದನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಸಮುದ್ರ ತೀರದಲ್ಲಿ ಸೇರುತ್ತಿದ್ದರು. ಆದರೆ, ಕರೊನಾ ಆತಂಕದಿಂದಾಗಿ ಸಮುದ್ರ ತೀರದಲ್ಲಿ ಎಂದಿನ ಭಕ್ತರ ದಟ್ಟಣೆ ಇರಲಿಲ್ಲ. ಅದೇ ರೀತಿ ಮಂದಿರದ ವತಿಯಿಂದ ಉತ್ಸವದಲ್ಲಿ ಅಗತ್ಯವಿರುವ ಕೆಲವೇ ಕೆಲ ಜನರು ಪಾಲ್ಗೊಂಡರು.

    ಉತ್ಸವ ಸಾಗುವ ದಾರಿಯಲ್ಲಿ ಸಮುದ್ರ ತೀರದ ವಿವಿಧ ಕಡೆ ಆಕರ್ಷಕವಾದ ಬಗೆ ಬಗೆಯ ಮಾವಿನತಳಿರ ಮಂಟಪಗಳನ್ನು ನಿರ್ವಿುಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಇಂತಹ ಮಂಟಪಗಳಲ್ಲಿ ಹಾಲಕ್ಕಿ ಒಕ್ಕಲಿಗ ಜಾನಪದ ಕಲಾವಿದರಿಂದ ಪಾರಂಪರಿಕ ಗುಮಟೆ ಪಾಂಗ ಸಂಘಟಿಸಲಾಗಿತ್ತು. ವಿವಾಹದ ತರುವಾಯ ಶಿವ-ಗಂಗೆಯರನ್ನು ಹೊತ್ತ ಉತ್ಸವವು ಕ್ಷೇತ್ರ ಪದ್ಧತಿಯಂತೆ ಮಹರ್ಷಿ ದೈವರಾತರು ಸ್ಥಾಪಿಸಿದ ಋಷಿಕುಲ ಯೋಗಾಶ್ರಮಕ್ಕೆ ಭೇಟಿಯಿತ್ತು ಸೇವೆ ಸ್ವೀಕರಿಸಿತು. ತರುವಾಯದಲ್ಲಿ ಮಹಾಬಲೇಶ್ವರ ಮಂದಿರದ ಅಮೃತಾನ್ನ ಭವನಕ್ಕೆ ಆಗಮಿಸಿತು. ಅಲ್ಲಿ ಅರ್ಚಕರು, ಉಪಾಧಿವಂತರು ಮತ್ತು ವೈದಿಕರ ನೇತೃತ್ವದಲ್ಲಿ ರಾಜೋಪಚಾರ ಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಮಂದಿರದ ಅರ್ಚಕ ವೇ. ಶಿವಭಟ್ಟ ಷಡಕ್ಷರಿ ಮತ್ತು ಇತರರ ನೇತೃತ್ವದಲ್ಲಿ ಪ್ರಮುಖ ಕಾರ್ಯಕ್ರಮ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts