More

    ಕರೊನಾ ನಡುವೆ ಮದ್ಯದ ಅಮಲು ಬೇಕಿತ್ತಾ?: ಕೇಂದ್ರದ ವಿರುದ್ಧ ಸಂಜಯ್​ ರಾವತ್​ ಟೀಕಾಸ್ತ್ರ

    ಮುಂಬೈ: ಕರೊನಾ ವೈರಸ್​ ವಿಚಾರದಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ಸದಾ ಟೀಕಿಸುವ ಶಿವಸೇನಾ ನಾಯಕ ಸಂಜಯ್​ ರಾವತ್​ ಅವರು ಮತ್ತೊಮ್ಮೆ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

    ಇದನ್ನೂ ಓದಿ: VIDEO| ಮಹಿಳೆಯರ ಕಿತ್ತಾಟ: ಓಡಿ ಬಂದು ಜಿಗಿದು ಹೆಂಗಸಿನ ಹೊಟ್ಟೆಗೆ ಒದ್ದ ವ್ಯಕ್ತಿ!

    ಅಂತ್ಯಕ್ರಿಯೆಯಲ್ಲಿ ಕೇವಲ 20 ಮಂದಿ ಮಾತ್ರ ಭಾಗವಹಿಸಬೇಕೆಂಬ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ, ಮದ್ಯ ಮಾರಾಟದ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿದ್ದನ್ನು ಖಂಡಿಸಿದ್ದಾರೆ. ಶವಸಂಸ್ಕಾರದಲ್ಲಿ 20 ಮಂದಿ ಮಾತ್ರ ಪಾಲ್ಗೊಳ್ಳಬೇಕಂತೆ ಆದರೆ, ವೈನ್​ ಶಾಪ್​ನಲ್ಲಿ ಸಾವಿರಾರು ಮಂದಿ ಒಟ್ಟಿಗೆ ಸೇರುವುದು ಎಷ್ಟರ ಮಟ್ಟಿಗೆ ಸರಿಯೆಂದು ಪ್ರಶ್ನಿಸಿದ್ದಾರೆ.

    ಟ್ವೀಟ್​ ಮೂಲಕ ವಾಗ್ದಾಳಿ ನಡೆಸಿರುವ ರಾವತ್​, ಅಂತ್ಯಕ್ರಿಯೆಲ್ಲಿ ಪಾಲ್ಗೊಳ್ಳಲು ಸರ್ಕಾರ 20 ಮಂದಿಗೆ ಮಾತ್ರ ಅವಕಾಶ ನೀಡಿದೆ. ಏಕೆಂದರೆ, ಮೃತದೇಹದಲ್ಲೇ ಆತ್ಮವೇ ಇರುವುದಿಲ್ಲ. ವೈನ್​ ಶಾಪ್​ ಬಳಿ ಸಾವಿರಾರು ಮಂದಿ ಸೇರಬಹುದು ಏಕೆಂದರೆ ಶಾಪ್​ಗಳಲ್ಲಿ ಆತ್ಮಗಳಿರುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.

    ಇದನ್ನೂ ಓದಿ: VIDEO: ನೀವೂ ಒಮ್ಮೆ ಮನೆಯಲ್ಲಿ ಮಾಡಿನೋಡಿ ಈ ‘ಭಯಾನಕ ಚಹಾ’ವನ್ನು…!

    ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ದೀಪ ಬೆಳಗಿಸಿ ಎಂದು ಕರೆ ನೀಡಿದ್ದನ್ನು ಟೀಕಿಸಿ ಸರ್ಕಾರ ಕೋವಿಡ್​-19 ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದರು.

    ಇನ್ನು ಸರ್ಕಾರ ಮದ್ಯ ಮಾರಾಟಕ್ಕೆ ಅನುವು ನೀಡಿರುವುದರಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಲಾಕ್​ಡೌನ್​ ಸಡಿಲಿಕೆ ಬೆನ್ನಲ್ಲೇ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಮದ್ಯಕ್ಕಾಗಿ ಕುಡುಕರು ಮುಗಿಬೀಳುತ್ತಿರುವುದು ಸಹ ಕಳವಳಕ್ಕೆ ಕಾರಣವಾಗಿದೆ. ವಿಪರ್ಯಾಸವೆಂದರೆ ಮದ್ಯಾ ಮಾರಾಟಕ್ಕೆ ಅನುಮತಿ ಮಾಡಿಕೊಟ್ಟಾಗಿನಿಂದ ಅಪರಾಧ ಚಟುವಟಿಕೆಗಳು ಸಹ ಹೆಚ್ಚಾಗಿದೆ. (ಏಜೆನ್ಸೀಸ್​)

    ಇದನ್ನೂ ಓದಿ: VIDEO| ಚಲಿಸುತ್ತಿದ್ದ ಆಂಬುಲೆನ್ಸ್​ನಿಂದ ಸ್ಟ್ರೆಚರ್ ಸಮೇತ ರಸ್ತೆಗೆ ಬಿದ್ದ ರೋಗಿ: ಮುಂದೇನಾಯಿತು ನೋಡಿ!

    ದೀದಿಯಿಂದ ಮತ್ತೊಂದು ವಿಘ್ನ; ಗೃಹ ಸಚಿವ ಅಮಿತ್​ ಷಾ ಫುಲ್ ಗರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts