More

    ಪಕ್ಷ ಮತ್ತು ಸಚಿವರ ವಿರುದ್ಧ ಬಹಿರಂಗ ಹೇಳಿಕೆಗೆ ಕೆ.ಎಸ್. ಈಶ್ವರಪ್ಪ ಆಕ್ಷೇಪ

    ಶಿವಮೊಗ್ಗ: ಯಾರೇ ಆಗಿದ್ದರೂ ಪಕ್ಷ ಮತ್ತು ಸಚಿವರ ವಿರುದ್ಧ ಸಾರ್ವಜನಿಕವಾಗಿ ಬಹಿರಂಗ ಹೇಳಿಕೆ ನೀಡುವುದು ಒಳ್ಳೆಯ ಬೆಳವಣಿಗೆಯಲ್ಲ. ಏನೇ ಸಮಸ್ಯೆ ಮತ್ತು ಅಸಮಾಧಾನವಿದ್ದರೂ ಸಿಎಂ ಅಥವಾ ಪಕ್ಷದ ರಾಜ್ಯಾಧ್ಯಕ್ಷರ ಬಳಿ ಹೇಳಿಕೊಂಡು ಬಗೆಹರಿಸಿಕೊಳ್ಳಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಎಂ.ಪಿ.ರೇಣುಕಾಚಾರ್ಯ ಇಬ್ಬರೂ ನನಗೆ ಒಳ್ಳೆಯ ಸ್ನೇಹಿತರು. ಅವರಿಬ್ಬರೂ ಪದೇ ಪದೇ ಸಾರ್ವಜನಿಕವಾಗಿ ಹೇಳಿಕೆ ನೀಡಬಾರದು. ಇದು ಸ್ವತಃ ಅವರಿಗೂ ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಸಾವಿರ ಸಮಸ್ಯೆಗಳಿದ್ದರೂ ವರಿಷ್ಠರ ಗಮನಕ್ಕೆ ತರಬೇಕು. ಪತ್ರದ ಮೂಲಕ ದೂರು ನೀಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಪದೇ ಪದೇ ಮಾಧ್ಯಮಗಳ ಮುಂದೆ ಪತ್ರ ಬರೆದಿದ್ದೇವೆಂದು ಹೇಳಿಕೊಳ್ಳುವುದು ತಪ್ಪು. ಇದರಿಂದ ಅವರ ಬಗ್ಗೆಯೆ ಸಾರ್ವಜನಿಕರಿಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂದು ಹೇಳಿದರು.
    ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ನ ಗುಂಪುಗಾರಿಕೆಗೆ ಜನರು ಬೇಸತ್ತು ಹೋಗಿದ್ದಾರೆ. ಗ್ರಾಪಂ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಜನರು ದೂರ ತಳ್ಳಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷದ ಶಾಸಕರಿಬ್ಬರು ಹೇಳಿಕೆ ಕೊಡುವುದು ಅವರ ವರ್ಚಸ್ಸಿಗೂ ಒಳ್ಳೆಯದಲ್ಲ. ತಪ್ಪಿದ್ದರೆ ವರಿಷ್ಠ ಗಮನಕ್ಕೆ ತಂದರೆ ಸರಿಪಡಿಸುತ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts