More

    ಕೋವಿಡ್​ ಲಸಿಕೆ ಪಡೆದ ಮೊದಲ ಬಾಲಿವುಡ್​ ನಟಿ ಯಾರು ಹೇಳಿ?

    ದುಬೈ: ಕೋವಿಡ್​ಗೆ ಲಸಿಕೆ ಕೊಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ ಜನಸಾಮಾನ್ಯರು ಲಸಿಕೆ ಪಡೆಯುವುದಕ್ಕೆ ಮುಂದಾಗಿದ್ದು, ಸಿನಿಮಾ ಸೆಲೆಬ್ರಿಟಿಗಳು ಸಹ ಹಿಂದೆ ಬಿದ್ದಿಲ್ಲ. ಇದೀಗ ಬಾಲಿವುಡ್​ ನಟಿಯೊಬ್ಬರು ದುಬೈನಲ್ಲಿ ಲಸಿಕೆ ಪಡೆದಿದ್ದು, ಲಸಿಕೆ ಪಡೆದ ಮೊದಲ ಬಾಲಿವುಡ್​ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಕೋವಿಡ್​ ಲಸಿಕೆ ಪಡೆದ ಮೊದಲ ಬಾಲಿವುಡ್​ ನಟಿ ಯಾರು ಹೇಳಿ?

    ಇದನ್ನೂ ಓದಿ: ‘ಆಚಾರ್ಯ’ ಚಿತ್ರಕ್ಕೆ ಬಹುಕೋಟಿ ವೆಚ್ಚದ ದೇವಸ್ಥಾನದ ಸೆಟ್​

    ಅಂದಹಾಗೆ, ಆ ನಟಿ ಯಾರು ಗೊತ್ತಾ? ಶಿಲ್ಪಾ ಶಿರೋಡ್​ಕರ್​. ತೆಲುಗು ನಟ ಮಹೇಶ್​ ಬಾಬು ಅವರ ಪತ್ನಿ ನಮ್ರತಾ ಶಿರೋಡ್​ಕರ್​ ಇದ್ದಾರಲ್ಲ, ಅವರ ಸಹೋದರಿ ಈಕೆ. 90ರ ದಶಕದಲ್ಲಿ ಬಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡಿದ್ದ ಶಿಲ್ಪಾ, ಅಪರೇಶ್​ ರಂಜಿತ್​ ಎನ್ನುವವರನ್ನು ಮದುವೆಯಾಗಿ, ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಿಂದ ದೂರವೇ ಇದ್ದರು. ಇದೀಗ ಲಸಿಕೆ ಪಡೆಯುವ ಮೂಲಕ ಅವರು ಮತ್ತೆ ಸುದ್ದಿಯಲ್ಲಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್​ ನಂತರ ನಾಲ್ಕನೇ ಚಿತ್ರಕ್ಕೆ ಬಣ್ಣ ಹಚ್ಚಿದ ಅಕ್ಷಯ್​ …

    51 ವರ್ಷದ ಶಿಲ್ಪಾ, ಸದ್ಯ ದುಬೈನಲ್ಲಿ ಇದ್ದಾರೆ. ಅಲ್ಲಿ ಈಗಾಗಲೇ ಕೋವಿಡ್​-19ಗೆ ಲಸಿಕೆ ಕೊಡಲಾಗುತ್ತಿದ್ದು, ಅಲ್ಲೇ ಪಡೆದಿದ್ದಾರೆ. ಅಷ್ಟೇ ಅಲ್ಲ, ಎಡಗೈಗೆ ಪ್ಲಾಸ್ಟರ್​ ಅಂಟಿಸಿಕೊಂಡಿರುವ ಫೋಟೋವೊಂದನ್ನು ಅವರು ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, ‘ಲಸಿಕೆ ಹಾಕಿಸಿಕೊಂಡು ಸೇಫ್​ ಆಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

    ಸಿಸಿಬಿ ವಿಚಾರಣೆ ಬಳಿಕ ರಾಧಿಕಾ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts