More

    ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್​ ಷರೀಫ್!

    ಇಸ್ಲಮಾಬಾದ್​: ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿಯಾಗಿ ಪಿಎಂಎಲ್​​ -ಎನ್​ ಮುಖ್ಯಸ್ಥ ಶೆಬಾಜ್​ ಷರೀಫ್​ ಅವರನ್ನು ಆಯ್ಕೆ ಮಾಡಲಾಗಿದೆ. ವಿಪಕ್ಷ ನಾಯಕರಾಗಿದ್ದ ಶೆಹಬಾಜ್​ ಇದೀಗ ಪ್ರಧಾನಿ ಹುದ್ದೆ ಏರಲಿದ್ದಾರೆ.

    ಮಾಜಿ ಪ್ರಧಾನಿ ನವಾಜ್​ ಷರೀಫ್​ ಸಹೋದರರಾಗಿರುವ ಶೆಹಬಾಜ್​​ ಸೋಮವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಪಾಕಿಸ್ತಾನದ ಜನತೆ, ಮಾಧ್ಯಮ ಹಾಗೂ ತಮ್ಮ ಪಕ್ಷದ ಸದಸ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

    ಶನಿವಾರವಷ್ಟೇ ಇಮ್ರಾನ್​ ಖಾನ್​ ಸರ್ಕಾರ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಅಧಿಕಾರ ಕಳೆದುಕೊಂಡಿದ್ದರು. ಪಾಕಿಸ್ತಾನ 1947ರಲ್ಲಿ ಸ್ವಾತಂತ್ರ್ಯವಾಯಿತು ಆಡಳಿತ ಬದಲಾವಣೆ ಹಾಗೂ ವಿದೇಶಿ ಷಡ್ಯಂತರದ ವಿರುದ್ಧ ಇನ್ನೂ ಹೋರಾಟ ಮಾಡಬೇಕಿದೆ. ಆದರೆ ಪಾಕ್​ ಜನತೆ ದೇಶದ ಪ್ರಜಾಪ್ರಭುತ್ವ ಹಾಗೂ ಸಾರ್ವಭೌಮತೆ ರಕ್ಷಿಸಲಿದ್ದಾರೆ ಎಂದು ಭಾನುವಾರ ಟ್ವೀಟ್​ ಮಾಡಿದ್ದಾರೆ.

    ಈ ಮಧ್ಯೆ ವಿಮಾನ ನಿಲ್ದಾಣಗಳಲ್ಲಿ ಪಾಕಿಸ್ತಾನ ತನಿಖಾ ಸಂಸ್ಥೆ ಹೈ ಅಲರ್ಟ್​ ಘೋಷಿಸಿದ್ದು, ಇಮ್ರಾನ್​ ಖಾನ್​ ಸರ್ಕಾರದೊಂದಿಗೆ ಸಂಪರ್ಕವಿದ್ದ ಯಾವೊಬ್ಬ ಅಧಿಕಾರಿಯೂ ಅನುಮತಿ ಇಲ್ಲದೇ ವಿದೇಶಗಳಿಗೆ ತೆರಳಲು ಅನುಮತಿ ನೀಡಬಾರದೆಂದು ಭದ್ರತಾ ಸಿಬ್ಬಂದಿಗೆ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts