More

    ಕುರಿ ಸಾಕಣೆಗಾರರ ಅನುಗ್ರಹ ಯೋಜನೆ ಮುಂದುವರಿಸುವಂತೆ ಕುರುಬ ಸಮುದಾಯದ ವಿವಿಧ ಸಂಘನೆಗಳ ಒತ್ತಾಯ

    ರಾಯಚೂರು: ಕುರಿ, ಮೇಕೆ ಅಕಾಲಿಕ ಸಾವಿಗೆ ನೆರವಾಗುತ್ತಿದ್ದ ಅನುಗ್ರಹ ಯೋಜನೆ ರದ್ದು ಮಾಡಿದ್ದನ್ನು ಕೈ ಬಿಟ್ಟು, ಹೆಚ್ಚುವರಿ ಬಜೆಟ್‌ನಲ್ಲಿ ಹೆಚ್ಚಿನ ಹಣಕಾಸು ನಿಗದಿ ಪಡಿಸುವಂತೆ ಆಗ್ರಹಿಸಿ ಕುರುಬ ಸಮುದಾಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮೂಲಕ ಸಿಎಂ ಯಡಿಯೂರಪ್ಪ ಶುಕ್ರವಾರ ಮನವಿ ಸಲ್ಲಿಸಿದರು.

    ಕುರುಬ ಸಮುದಾಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಯೋಜನೆ ರದ್ದು ಪಡಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ರಾಜ್ಯ ಸರ್ಕಾರ ಆಕಸ್ಮಿಕವಾಗಿ ಕುರಿ, ಮೇಕೆ ಸತ್ತರೆ 5 ಸಾವಿರ ರೂ. ನೆರವು ನೀಡಲಾಗುತ್ತಿತ್ತು. ಇದೀಗ ಯೋಜನೆ ರದ್ದು ಪಡಿಸುವ ಮೂಲಕ ವಿವಿಧ ಸಮುದಾಯಗಳ ಕುರಿ, ಮೇಕೆ ಸಾಕಣೆಯನ್ನೇ ಅವಲಂಬಿಸಿದ್ದವರಿಗೆ ಸಂಕಷ್ಟ ಎದುರಿಸುವಂತಾಗಿದೆ. ಮಳೆ, ಗಾಳಿ, ಸಿಡಿಲು ಮತ್ತಿತರ ಕಾರಣಗಳಿಂದ ಸಾವು ಸಂಭವಿಸುತ್ತಿವೆ. ಅದನ್ನೆ ಉಪಜೀವನವಾಗಿಸಿಕೊಂಡ ಬಡ ವರ್ಗಕ್ಕೆ ನಿರ್ಧಾರ ಅಘಾತ ತಂದಿದೆ. ಜಿಲ್ಲೆಯಲ್ಲಿ ಸಿಡಿಲು, ಅಕಾಲಿಕ ಮಳೆ ಸೇರಿ ನಾನಾ ಕಾರಣಗಳಿಂದ ಸುಮಾರು 2 ಸಾವಿರ ಕುರಿ, ಮೇಕೆಗಳು ಸಾವನ್ನಪ್ಪಿವೆ. ಇಂತಹ ಸಂದರ್ಭದಲ್ಲಿ ಹೊರಡಿಸಿದ ಸುತ್ತೋಲೆಯನ್ನು ಕೂಡಲೆ ಹಿಂಪಡೆಯಬೇಕು. ಕುರಿಗಾಹಿಗಳ ನೆರವಿಗೆ ಬರಬೇಕು, ಸಂಬಂಧಿಸಿದ ಅಧಿಕಾರಿಗೆ ಸೂಚಿಸಬೇಕು, ಬಾಕಿ ಅರ್ಜಿಗಳ ಪರಿಹಾರ ಬಿಡುಗಡೆ ಮಾಡಬೇಕು, ಬಜೆಟ್‌ನಲ್ಲಿ ಹೆಚ್ಚುವರಿಯಾಗಿ ಅನುದಾನ ನಿಗದಿ ಪಡಿಸಲು ಕೋರಿದರು. ವಿವಿಧ ಸಂಘಗಳ ಪದಾಧಿಕಾರಿಗಳಾದ ಶ್ರೀನಿವಾಸ ಏಗನೂರು, ಬುಳ್ಳನಗೌಡ, ರಾಮಣ್ಣ ಕಾಡ್ಲೂ ರು, ಆಂಜನೇಯ, ಕಲವಲದೊಡ್ಡಿ, ಲಿಂಗಪ್ಪ ಮಲದಕಲ್, ನರಸಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts