More

    ಯೂಕ್ರೇನ್​ನಲ್ಲಿ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ; ಭಾರತೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ರಷ್ಯಾ ಆಹ್ವಾನ

    ನವದೆಹಲಿ: ಭಾರತ ಸರ್ಕಾರ ಯೂಕ್ರೇನ್​ನಿಂದ ನಮ್ಮ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳನ್ನು ‘ಆಪರೇಷನ್ ಗಂಗಾ’ ಮೂಲಕ ಹಿಂದಕ್ಕೆ ಕರೆದುಕೊಂಡು ಬಂದದ್ದು ಮರೆಯಲಾರದ ಘಟನೆ. ಯುದ್ಧದಿಂದಾಗಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಈಗ ರಷ್ಯಾ ವಿದ್ಯಾರ್ಥಿಗಳ ಮುಂದೆ ಹೊಸ ಆಫರ್ ಇಟ್ಟಿದೆ.

    ಈಗ ಯುದ್ಧ ಶುರುವಾಗಿ ಒಂಬತ್ತು ತಿಂಗಳು ಕಳೆದ ನಂತರ, ಯೂಕ್ರೇನ್‌ನಿಂದ ವಾಪಸ್ಸಾಗಿದ್ದ ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲಿ ತಮ್ಮ ಉಳಿದ ಶಿಕ್ಷಣವನ್ನು ಮುಂದುವರಿಸಬಹುದು ಎಂದು ರಷ್ಯಾ ದೂತವಾಸ ಕಛೇರಿ ಹೇಳಿದೆ. ಯೂಕ್ರೇನ್​ ಮತ್ತು ರಷ್ಯಾದಲ್ಲಿ ವೈದ್ಯಕೀಯ ಪಠ್ಯಕ್ರಮ ಬಹುತೇಕ ಒಂದೇ ರೀತಿ ಇರುವ ಕಾರಣ ಇದು ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.

    ‘ಯೂಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು. ರಷ್ಯಾ ಮತ್ತು ಯೂಕ್ರೇನ್​ನ ವೈದ್ಯಕೀಯ ಪಠ್ಯಕ್ರಮ ಬಹುತೇಕ ಒಂದೇ ರೀತಿ ಇದೆ. ಯೂಕ್ರೇನ್‌ನಲ್ಲಿ ಹೆಚ್ಚಿನವರು ರಷ್ಯನ್ ಭಾಷೆಯನ್ನು ಮಾತನಾಡುತ್ತಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಜನರ ಭಾಷೆ ಅರ್ಥವಾಗುತ್ತದೆ’ ಎಂದು ರಷ್ಯಾ ದೂತಾವಾಸದ ಜನರಲ್, ಒಲೆಗ್ ಅವ್​ದೀವ್ ಮಾಹಿತಿ ನೀಡಿದ್ದಾರೆ.

    ಭಾರತದ ವಿದೇಶಾಂಗ ಸಚಿವ ಎಸ್​ ಜೈಶಂಕರ್ ಮಂಗಳವಾರ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್​ರನ್ನು ಭೇಟಿಯಾದಾಗ ದ್ವಿಪಕ್ಷೀಯ ಹಿತಾಸಕ್ತಿ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಮಾತುಕತೆ ನಡೆಸಿದ್ದರು. ಇದೇ ವೇಳೆಯಲ್ಲಿ ಅವ್​ದೀವ್ ಈ ಹೇಳಿಕೆ ನೀಡಿದ್ದಾರೆ. ಇದು ಭಾರತಕ್ಕೆ ಸಿಕ್ಕ ರಾಜತಾಂತ್ರಕ ಜಯ ಎಂದೇ ಹೇಳಬಹುದು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts