More

    ಎಸ್ಟಿ ಮೀಸಲು ನೀಡಲು ಸರ್ಕಾರ ಬದ್ಧ: ಸಚಿವ ಎಂ.ಟಿ.ಬಿ.ನಾಗರಾಜ್ ಭರವಸೆ

    ಗಂಗಾವತಿ: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ದೊರೆಯುವ ವಿಶ್ವಾಸವಿದೆ ಎಂದು ಪೌರಾಡಳಿತ ಮತ್ತು ಸಣ್ಯ ಉದ್ಯಮ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದರು.

    ನಗರದ ಕನಕದಾಸ ವೃತ್ತದಲ್ಲಿ ತಾಲೂಕು ಕನಕದಾಸ ಕುರಬರ ಹಾಲುಮತ ಸಮಾಜದಿಂದ ನಿರ್ಮಿಸಿರುವ ವಿಶ್ವಚೇತನ ಶ್ರೀ ಕನಕದಾಸರ ಕಂಚಿನ ಪ್ರತಿಮೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಬ್ರಿಟಿಷರ ಆಡಳಿತಾವಧಿಯಲ್ಲಿ ಹಾಲುಮತ ಸಮಾಜ ಎಸ್ಟಿಗೆ ಮೀಸಲಿದ್ದು, ಕಾಲಾನಂತರದಲ್ಲಿ ಬದಲಾಗಿದೆ. ಸಮುದಾಯದ ಗುರುಗಳು ಮತ್ತು ಮುಖಂಡರ ಹೋರಾಟದ ಲದಿಂದ ಕುಲಶಾಸೀಯ ಅಧ್ಯಯನ ಸಲ್ಲಿಕೆವರೆಗೂ ಮುಂದುವರಿದಿದೆ. ರಾಜ್ಯ ಸರ್ಕಾರ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ವರದಿ ಶಿಾರಸು ಮಾಡಲಿದೆ. ಮೀಸಲಿನಿಂದ ಸಮುದಾಯದ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯಾಗಲಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಕಾಗಿನೆಲೆ ಪೀಠ ಅಭಿವೃದ್ಧಿಯಾಗಿದ್ದು, ಸರ್ಕಾರದಿಂದ ಕನಕದಾಸ ಜಯಂತಿ ಆಚರಿಸಲು ಸಾಧ್ಯವಾಗಿದೆ. ಯಾವುದೇ ತಾಲೂಕಿನಲ್ಲಿ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಿದರೆ ವೈಯಕ್ತಿಕವಾಗಿ ಎರಡು ಲಕ್ಷ ರೂ. ಮತ್ತು ಭವನ ನಿರ್ಮಾಣಕ್ಕೆ 10 ಲಕ್ಷ ರೂ. ನೀಡಲಾಗುವುದು ಎಂದರು.

    ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಟಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಸಮಾಜದ ತಾಲೂಕು ಅಧ್ಯಕ್ಷ ಯಮನಪ್ಪ ವಿಠಲಾಪುರ, ಹಾಲುಮತ ಸಮಾಜದ ಗುರುಗಳಾದ ಶ್ರೀ ಸಿದ್ದಯ್ಯಸ್ವಾಮಿ, ಶ್ರೀ ಸಿದ್ದರಾಮಯ್ಯ ಸ್ವಾಮಿ ಗುರುವಿನ್, ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ನಗರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟೇಶ, ನಾಗೇಶ ಮುಕ್ಕಣ್ಣ, ಆಶೋಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts