More

    ಸಹೋದರನಿಗೆ ಶ್ರೀರಕ್ಷೆ ಬಂಧಿಸುವ ಕನಸು ಕಂಡ ಬಾಲಕಿಯನ್ನು ರಕ್ಷಿಸಲಿಲ್ಲ ವೈದ್ಯರು

    ಬರೇಲಿ: ಆಕೆ ಉತ್ತರ ಪ್ರದೇಶದ ಸಬಲ್ ಗ್ರಾಮದ ನಿವಾಸಿ. 16 ವರ್ಷದವಳು. ಕೋವಿಡ್ 19 ಆರೈಕೆ ಕೇಂದ್ರದಲ್ಲಿ ವೈದ್ಯರು ಆಕೆಯನ್ನು ಪರೀಕ್ಷಿಸಲು ಬಾರದೆ ಆಕೆ ಮೃತಪಟ್ಟಿದ್ದಾಳೆ.
    ಸಾಯುವುದಕ್ಕಿಂತ ಒಂದೇ ಗಂಟೆ ಮುಂಚೆ ಆಕೆ ತನ್ನ ಸಹೋದರನಿಗೆ ಫೋನ್ ಮಾಡಿ ರಾಖಿ ಕಟ್ಟಿಸಿಕೊಳ್ಳಲು ಆಸ್ಪತ್ರೆಗೆ ಬರಬೇಕೆಂದು ತಿಳಿಸಿದ್ದಳು.
    ವೈದ್ಯಕೀಯ ನಿರಾಸಕ್ತಿ ಕಾರಣವಾಯಿತೆ? : ಆಕೆ ತೀವ್ರ ಹೊಟ್ಟೆ ಮತ್ತು ಎದೆ ನೋವಿನಿಂದ ಬಳಲುತ್ತಿದ್ದಳು, ನಂತರ COVID-19 ಪರೀಕ್ಷೆಗೊಳಪಡಿಸಿದಾಗ ಮೂರು ದಿನಗಳ ಹಿಂದೆ ಸೋಂಕು ದೃಢಪಟ್ಟಿರುವುದು ತಿಳಿದುಬಂತು. ತರುವಾಯ ಆಕೆಯನ್ನು ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ದಾಖಲಿಸಲಾಯಿತು. ಯಾವುದೇ ವೈದ್ಯರು ಆಕೆಯ ಬಳಿಗೆ ಬರುತ್ತಿರಲಿಲ್ಲ. ಆಕೆಗೆ ಆಹಾರ ಮತ್ತು ಕೆಲವು ಔಷಧಿಗಳನ್ನು ದಾದಿಯರು ನೀಡಿದರು ಎಂದು ಆಕೆಯ ಸಹೋದರ ತಿಳಿಸಿದ್ದಾರೆ.

    ಇದನ್ನೂ ಓದಿ: ರೆಡ್ ಝೋನ್ ನ್ಯಾಯಾಲಯಗಳಲ್ಲಿ ಆಗಸ್ಟ್ 15 ರವರೆಗೆ ವರ್ಚುವಲ್ ಹಿಯರಿಂಗ್

    ನಾವು ಭಾನುವಾರ ಸಂಜೆ 6 ಗಂಟೆಗೆ ಮಾತನಾಡಿದ್ದೇವೆ. ಈ ವರ್ಷ ನಾವು ರಕ್ಷಾ ಬಂಧನ ಹಬ್ಬ ಹೇಗೆ ಆಚರಿಸಬಹುದೆಂದು ಆಕೆಗೆ ಕೇಳಿದಾಗ ರಾಖಿಯೊಂದಿಗೆ ಆಸ್ಪತ್ರೆಗೆ ಬಾ ಎಂದು ಆಕೆ ತಿಳಿಸಿದ್ದಳು. ಆದರೆ ಆಕೆಯನ್ನು ಭೇಟಿಯಾಗಲು ಅನುಮತಿ ಇರಲಿಲ್ಲ ಎಂದು ಆತನಿಗೆ ತಿಳಿದಿತ್ತು. ಆದರೆ ಈಗ ಆಕೆ ಮೃತಪಟ್ಟಿದ್ದಾಳೆ. ಆಕೆಯ ಸಾವಿಗೆ ವೈದ್ಯಕೀಯ ನಿರಾಸಕ್ತಿ ಕಾರಣ ಎಂದು ದೂರಿದ ಸಹೋದರ, ನಾವು ಅವಳನ್ನು ಮನೆಯಲ್ಲೇ ಪ್ರತ್ಯೇಕವಾಗಿರಿಸಿಕೊಂಡಿದ್ದರೆ ಆಕೆ ಬಕುಳಿಯುತ್ತಿದ್ದಳು ಎಂದು ಆಕೆಯ ಹತಾಶೆ ವ್ಯಕ್ತಪಡಿಸಿದ್ದಾರೆ.
    ಏತನ್ಮಧ್ಯೆ, ಆಸ್ಪತ್ರೆಗೆ ಕರೆತಂದಾಗ ಬಾಲಕಿಯ ಸ್ಥಿತಿ ಅದಾಗಲೇ ಗಂಭೀರವಾಗಿತ್ತೆಂದು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಕೋವಿಡ್ -19 ಪ್ರೋಟೋಕಾಲ್ ಪ್ರಕಾರ ಆಕೆಯ ಮೃತ ದೇಹವನ್ನು ಮರ್ದಾನಾ ಶವಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

    ಡಿಎಸ್​ಪಿ ಮನೆಯೇ ಮಾದಕವಸ್ತು ಮಾರಾಟದ ಕಾರಸ್ಥಾನ; ಸಿಕ್ಕಿಬಿದ್ದ ಬಾಡಿಗೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts