More

    ವಿಮಾನ ನಿಲ್ದಾಣ ಖಾಸಗೀಕರಣ ಬೆಂಬಲಿಸಿದ ಶಶಿ ತರೂರ್​; ಕೇರಳ ಸಚಿವರಿಗೆ ನೀಡಿದ ಪ್ರತಿಕ್ರಿಯೆ ಏನು?

    ನವದೆಹಲಿ: ಕೇಂದ್ರ ಸರ್ಕಾರದ ಯೋಜನೆಗಳನ್ನು ಸಾಮಾನ್ಯವಾಗಿ ವಿರೋಧ ಪಕ್ಷಗಳು ವಿರೋಧಿಸುವುದು ವಾಡಿಕೆಯಂತಾಗಿದೆ. ಕೆಲವೊಮ್ಮೆ ಅದನ್ನು ಸಮರ್ಥಿಸುವುದು ಇಲ್ಲವೆಂದೇನಿಲ್ಲ. ಆದರೆ, ಕೇಂದ್ರ ನಿಲುವನ್ನು ಬೆಂಬಲಿಸಿ ರಾಜ್ಯ ಸಚಿವರಿಗೆ ಪ್ರತಿಕ್ರಿಯಿಸುವುದು ಅಪರೂಪವೇ ಸರಿ.

    ಕೇರಳದ ತಿರುವನಂತಪುರಂ ಸೇರಿ ಮೂರು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಖಾಸಗಿಯವರಿಗೆ ಅರ್ಥಾತ್​ ಅದಾನಿ ಕಂಪನಿಗೆ ವಹಿಸಿದೆ.

    ಇದನ್ನೂ ಓದಿ; ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ 

    ಕೇಂದ್ರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್​ ಇದನ್ನು ಮರು ಪರಿಶೀಲನೆ ಮಾಡಬೇಕೆಂದು ಪತ್ರ ಬರೆದಿದ್ದರು. ಆದರೆ, ವಿರೋಧ ಪಕ್ಷದಲ್ಲಿದ್ದರೂ ಕಾಂಗ್ರೆಸ್​ನ ಸಂಸದ ಶಶಿ ತರೂರ್​ ಕೇಂದ್ರದ ನಿಲುವ ನ್ನು ಸಮರ್ಥಿಸಿದ್ದರು.

    ಇದು ಕೇರಳ ಸಚಿವರ ಅಸಮಾಧಾನಕ್ಕೂ ಕಾರಣವಾಗಿತ್ತು. ಬ್ರಿಟಿಷ್​ ಕಾಲದ ಧನಧಾಹಿತನ ಹಾಗೂ ಸಂಪತ್ತಿನ ಶೇಖರಣೆಯನ್ನು ಟೀಕಿಸುವ ಶಶಿ ತರೂರ್​, ಅಧುನಿಕ ಕಾಲದ ಕಾರ್ಪೋರೇಟ್​ ಕಂಪನಿಗಳು ಅದನ್ನೇ ಮಾಡುತ್ತಿದ್ದರೂ ಟೀಕಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಟ್ವೀಟ್​ ಮಾಡಿದ್ದರು.

    ಇದನ್ನೂ ಓದಿ; ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ? 

    ಇದಕ್ಕೆ ಪ್ರತಿಕ್ರಿಯಿಸಿರುವ ಶಶಿ ತರೂರ್​, ವಿಮಾನ ನಿಲ್ದಾಣವನ್ನು ಖಾಸಗಿ ನಿರ್ವಹಣೆಗೆ ವಹಿಸಿದ್ದನ್ನು ಕೇವಲ ಆದಾಯದ ದೃಷ್ಟಿಯಿಂದ ನೋಡಬೇಕಿಲ್ಲ. ವಿಮಾನ ನಿಲ್ದಾಣದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದಾಗಿದೆ. ಈ ವಿಮಾಣ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಬಳಕೆಯಾದಲ್ಲಿ ಕೇರಳಕ್ಕೆ ಇನ್ನಷ್ಟು ಬಂಡವಾಳ, ವಹಿವಾಟು ಗಳಿಸಲಿದೆ ಎಂದು ಹೇಳಿದ್ದಾರೆ. ಅಲ್ಲಿಗೆ ಕೇಂದ್ರದ ಕ್ರಮವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.

    ಕೆಲಸ ಕಳೆದುಕೊಂಡಿದ್ದೀರಾ…? ಸರ್ಕಾರವೇ ಕೊಡುತ್ತೆ ಮೂರು ತಿಂಗಳ ಸಂಬಳ; ಅರ್ಹತೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts