More

    ಶರೀಫರು, ಗೋವಿಂದ ಭಟ್ಟರು ಸಮಾಜಕ್ಕೆ ದಾರಿದೀಪ

    ಕುಂದಗೋಳ: ಶಿಶುವಿನಹಾಳ ಗ್ರಾಮದ ಶರೀಫ ಶಿವಯೋಗಿಗಳು ಹಾಗೂ ಗುರು ಗೋವಿಂದ ಭಟ್ಟರ ಬದುಕು ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
    ತಾಲೂಕಿನ ಕಳಸ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗುರು ಗೋವಿಂದ ಭಟ್ಟರ ಆರಾಧನಾ ಉತ್ಸವದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು. ಗೋವಿಂದ ಭಟ್ಟರು ಜಾತಿ, ಧರ್ಮ ಭಾಷೆ ನೋಡದೇ ಶರೀಫರಲ್ಲಿದ್ದ ಗುರು ಭಕ್ತಿ ನೋಡಿ ತಮ್ಮ ವಿದ್ಯೆ ಧಾರೆ ಎರೆದು ಅವರನ್ನು ಮಹದೇವನನ್ನಾಗಿ ಮಾಡಿದರು ಎಂದರು.
    ಸಭೆಯ ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಚಿನ್ಮಯ ಮಿಷನ್​ನ ಕೃತಾತ್ಮನಂದ ಸ್ವಾಮಿಗಳು, ಗುರು ಗೋವಿಂದರು ಮಹಾನ್ ದಾರ್ಶನಿಕ ಪುರುಷರಾಗಿದ್ದರೆಂದೂ, ಸಾಧನೆ ಮೂಲಕ ಮಾತಿಗೆ ಮಂತ್ರ ಶಕ್ತಿ ಪಡೆದು ಕೊಂಡ ಯುಗಪುರುಷ ಎಂದು ಬಣ್ಣಿಸಿದರು.
    ಹಾವೇರಿ ಹಿರಿಯ ಉದ್ಯಮಿ ಪ್ರಭಾಕರ ರಾವ್ ಮಂಗಳೂರು ಅವರಿಗೆ ಶ್ರೀ ಗುರು ಗೋವಿಂದ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಹಾವೇರಿಯ ಲಿಂಗಯ್ಯ ಹಿರೇಮಠ, ಟ್ರಸ್ಟ್ ಕಮಿಟಿಯ ಗುರುನಾಥ ಜೋಶಿ, ಗೋಪಾಲ ವೈದ್ಯ, ಆರ್.ಡಿ. ಕುಲಕರ್ಣಿ, ಲಕ್ಷ್ಮಣ ಜೋಶಿ , ಕೆ.ಎಲ್. ಕುಲಕರ್ಣಿ, ಇತರರು ಉಪಸ್ಥಿತರಿದ್ದರು.
    ಟ್ರಸ್ಟ್ ಅಧ್ಯಕ್ಷ ಪ್ರಕಾಶ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts