More

    ಪಾಲಕರು ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಲಿ

    ಶಿರಹಟ್ಟಿ: ಹೆತ್ತವರು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮಾನವೀಯ ಮೌಲ್ಯ ಹಾಗೂ ಸಂಸ್ಕಾರಯುತ ಗುಣಗಳನ್ನು ಬೆಳೆಸಿದಾಗ ಮಾತ್ರ ಸುಭದ್ರ ಸಮಾಜ, ದೇಶ ನಿರ್ವಣವಾಗಬಲ್ಲದು ಎಂದು ಅಗಡಿ ಅಕ್ಕಿಮಠದ ಶ್ರೀ ಡಾ. ಗುರುಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

    ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರೋತ್ಸವದ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಧರ್ಮಸಭೆ ಉದ್ದೇಶಿಸಿ ಆಶೀರ್ವಚನ ನೀಡಿದರು. ಉಂಡುಟ್ಟು, ಮೋಜುಮಸ್ತಿ ಉಡಾಯಿಸುವ ಜಾತ್ರೆಗಳಾಗದೇ ಭೌತಿಕ ಶ್ರೀಮಂತಿಕೆಯ ಬದುಕಿನಲ್ಲಿ ಬಿದ್ದು, ಆಂತರಿಕ ಅಧ್ಯಾತ್ಮದ ಅರಿವಿನ ಕೊರತೆಯಲ್ಲಿರುವ ಜನರಿಗೆ ಧರ್ಮದ ಅರಿವು, ಸಂಸ್ಕೃತಿಯ ಕಾಳಜಿ ಬೆಳೆಸುವುದು ಅಗತ್ಯವಾಗಿದೆ. ಅದಕ್ಕೆ ಧರ್ಮಸಭೆ ಏರ್ಪಡಿಸುವ ಮೂಲಕ ಅವರಲ್ಲಿ ಮನುಷ್ಯತ್ವದ ದಾರಿ ತೋರುವ ಜಾತ್ರೆಗಳಾಗಬೇಕು ಎಂದರು. ವರವಿ ಮೌನೇಶ್ವರ ದೇವಸ್ಥಾನದ ಶ್ರೀ ಮೌನೇಶ್ವರ ಸ್ವಾಮಿಗಳು ಉಪನ್ಯಾಸ ನೀಡಿ, ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ಶಿರಹಟ್ಟಿ ಪಟ್ಟಣದ ಜನ ದ್ಯಾಮವ್ವದೇವಿಯ ಜಾತ್ರೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಇತರರಿಗೆ ಮಾದರಿ ಎಂದರು. ಪಪಂ ಸದಸ್ಯ ಫಕೀರೇಶ ರಟ್ಟಿಹಳ್ಳಿ, ಗಣಪತಿರಾವ ಶೇಳಕೆ ಮಾತನಾಡಿದರು. ಮಹಾಪ್ರಸಾದ ವ್ಯವಸ್ಥೆಗೆ ಸಹಕರಿಸಿದ ಯಲ್ಲಪ್ಪ ಇಂಗಳಗಿ, ಅಮೃತ ಬಾತಖಂಡೆ, ಈರಣ್ಣ ಮಣಕವಾಡ, ಫಕೀರೇಶ ರಟ್ಟಿಹಳ್ಳಿ, ಬಸವರಾಜ ಚಿಕ್ಕತೋಟದ, ಸುಧೀರ ಜಮಖಂಡಿ, ಯಲ್ಲಪ್ಪ ಗೂಳಪ್ಪನವರ, ನಾಗರಾಜ ಕುಲಕರ್ಣಿ, ಉಮೇಶ ಶೇಳಕೆ, ರಮೇಶ ಮಲ್ಲಿಕಶೆಟ್ಟರ ಹಾಗೂ ದ್ಯಾಮವ್ವದೇವಿ ದೇವಸ್ಥಾನಕ್ಕೆ ಭಕ್ತಿ ಕಾಣಿಕೆಯಾಗಿ ಅರ್ಧತೊಲ ಚಿನ್ನ ನೀಡಿದ ಪಪಂ ವಾಟರ್​ವುನ್ ಪಕ್ಕಣ್ಣ ಬಂತಿ, ಹನುಮಂತ ಕೊಡ್ಲಿ ಅವರನ್ನು ಗೌರವಿಸಲಾಯಿತು. ಎನ್.ಆರ್. ಕುಲಕರ್ಣಿ, ವಿ.ವಿ. ಕಪ್ಪತ್ತನವರ, ಸಿ.ಸಿ. ನೂರಶೆಟ್ಟರ, ಸಿದ್ದನಗೌಡ ಪಾಟೀಲ, ಬಸವಣ್ಣೆಪ್ಪ ತುಳಿ, ಯಲ್ಲಪ್ಪಗೌಡ ಅಣ್ಣಿಗೇರಿ, ಎಚ್.ಎಂ. ದೇವಗಿರಿ, ಬಸವರಾಜ ಹೊಸೂರ, ಉಡಚಪ್ಪ ನೀಲಣ್ಣವರ, ವಿ.ವಿ. ಬಾಳಿಗೇರಿ, ಎಂ.ಕೆ. ಲಮಾಣಿ, ಇತರರಿದ್ದರು. ಜಿಲ್ಲಾ ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ, ರೇಣುಕಾ ಜಗಂಡಬಾವಿ ಮಹಿಳಾ ತಂಡ ಶರಣರ ವಚನಗಳನ್ನು ಪ್ರಸ್ತುತಪಡಿಸಿದರು. ಶಸಾಪ ತಾಲೂಕಾಧ್ಯಕ್ಷ ಕೆ.ಎ. ಬಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಜಿ.ಬಿ. ಹೆಸರೂರ, ಬಸವರಾಜ ತುಳಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts