More

    ಮುತ್ತಗಿ ಮಠದಲ್ಲಿ ಮುಂದಿನ ವರ್ಷ ರಥೋತ್ಸವ ನಡೆಯಲಿ

    ಗೊಳಸಂಗಿ: ಮಾನವ ಧರ್ಮದ ಉಳಿವಿಗಾಗಿ ಓಣಿಗೊಂದು ಗುಡಿ ಇರಬೇಕು, ಊರಿಗೊಂದು ಮಠ ಇರಬೇಕು. ಮುತ್ತಗಿಯಲ್ಲಿ ಶತಮಾನ ಸಮೀಪಿಸಿದ ಸಂಸ್ಥಾನ ಹಿರೇಮಠವಿದೆ. ಶ್ರೀಮಠಕ್ಕೆ ಸಾರ್ಥಕತೆಯ ಭಾವ ಬರಬೇಕಾದರೆ ಮಠದ ಜಾತ್ರೆಯಲ್ಲಿ ತೇರು ಇರಬೇಕು. ಮಠದ ಜಾತ್ರೆಯಲ್ಲಿ ರಥೋತ್ಸವವಾಗಬೇಕು ಎಂದು ಬಾದಾಮಿ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು ಹೇಳಿದರು.

    ಸಮೀಪದ ಮುತ್ತಗಿ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಿಂ.ರುದ್ರಮುನಿ ಶಿವಾಚಾರ್ಯರ 86ನೇ ಪುಣ್ಯಾರಾಧನೆ, ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಚಿಮ್ಮಲಗಿ ಅರಳೆಲೆ ಕಟ್ಟಿಮನಿಯ ಸಿದ್ದರೇಣುಕ ಶಿವಾಚಾರ್ಯರು ಮಾತನಾಡಿ, ನೀರು ಸ್ವಚ್ಛವಾಗಿರಲು ಮೀನು ಬೇಕು, ಮೀನು ಬದುಕಲು ನೀರು ಇರಬೇಕು ಎನ್ನುವಂತೆ ಸಮಾಜದ ಕೊಳೆಯನ್ನು ತೊಳೆಯಲು ಮಠ-ಮಾನ್ಯಗಳಿರಬೇಕು, ಮಠ-ಮಾನ್ಯಗಳು ಬೆಳೆದು ಬೆಳಗಲು ಭಕ್ತಗಣವಿರಬೇಕು. ಮನುಷ್ಯನೊಬ್ಬ ಈ ಸಮಾಜದಲ್ಲಿ ಇದ್ದರೂ, ಸತ್ತರೂ ಒಂದೇ ಎನ್ನುವಂತಿರಬಾರದು. ಬದುಕಿದ್ದೂ ಸತ್ತಂತೆಯೂ ಇರಬಾರದು. ಸತ್ತರೂ ಬದುಕುಳಿದಿರುವ ಜನ ಹಾಡಿ ಹೊಗಳುವಂತಿರಬೇಕು ಎಂದರು.

    ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಹಿರೇಮಠದ ವೀರರುದ್ರಮುನಿ ಶಿವಾಚಾರ್ಯರು, ಶಿಕ್ಷಕ ವೈ.ಕೆ.ಪತ್ತಾರ, ಶಿಕ್ಷಕರಾದ ಎಸ್.ಎಸ್.ಚಿಮ್ಮಲಗಿ, ಆರ್.ಬಿ.ಬ್ಯಾಕೋಡ ಮಾತನಾಡಿದರು. ಕೊಣ್ಣೂರ- ಮುಳವಾಡದ ವಿರುಪಾಕ್ಷ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಧುರೀಣ ಪ್ರಭುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಟಿಎಪಿಎಂಎಸ್ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ, ಪ್ರಮುಖರಾದ ಭೀಮಶಿ ಜಗ್ಗಲ, ಎಸ್.ಜಿ.ಪಾಟೀಲ, ಸಿ.ಬಿ.ಮೇಟಿ, ನಾಗರಾಜ ಕರಡಕಲ್ಲ, ಬಾಲಾಜಿ ಕಟ್ಟಿಸಂಗವಿ ಇತರರಿದ್ದರು.

    ಮುತ್ತೈದೆಯರ ಕುಂಭಮೇಳ
    ಧರ್ಮಸಭೆಗೂ ಮುನ್ನ ಗ್ರಾಮದ ವಿವಿಧ ಬೀದಿಗಳಲ್ಲಿ ಲಿಂ.ರುದ್ರಮುನಿ ಶಿವಾಚಾರ್ಯರ ಭಾವಚಿತ್ರದ ಮೆರವಣಿಗೆ ಜರುಗಿತು. ಮುತ್ತೈದೆಯರ ಕುಂಭಮೇಳ, ಕಳಸಾರತಿ, ಹಾಲುಮತ ಬಾಂಧವರ ಡೊಳ್ಳಿನ ಕುಣಿತ ಗಮನ ಸೆಳೆಯಿತು. ಝಂಜರವಾಡ ದೇವಯೋಗ ಮಂದಿರದ ಬಸವರಾಜೇಂದ್ರ ಶರಣರು ಏ.9 ರಿಂದ ಪ್ರತಿದಿನ ರಾತ್ರಿ 8 ರಿಂದ ಹೇಳುತ್ತಿದ್ದ ಕಡಕೋಳ ಮಡಿವಾಳೇಶ್ವರ ಪುರಾಣ ಮಂಗಲಗೊಂಡು ಪುನಾರಂಭಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts