More

    ರಾಮಾಯಣ ಒಳಿತುಗಳ ಅನಂತ ಸಮುದ್ರ

    ಹೊಸನಗರ: ರಾಮಾಯಣ ಎಂದರೆ ಅದು ಶುಭಗಳ ಶುಭ, ಒಳಿತುಗಳ ಅನಂತ ಸಮುದ್ರ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

    ರಾಮಚಂದ್ರಾಪುರಮಠದಲ್ಲಿ ಗುರುವಾರ ಏರ್ಪಡಿಸಿದ್ದ ರಾಮೋತ್ಸವ ಸಮಾರೋಪದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಜೀವನದಲ್ಲಿ ನಾವು ಸುಖ ಬಯಸುತ್ತೇವೆ. ಅಂತಹ ಸುಖಗಳ ಮೂಲ ರಾಮ, ರಾಮಾಯಣ ಎಂದರು.
    ನಮ್ಮ ಪ್ರತಿಯೊಂದು ಕ್ರಿಯೆಯೂ ನಿಸರ್ಗದ ಮತ್ತು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಅದು ಒಳಿತು ಮತ್ತು ಕೆಡಕು ಎಂಬ ಪರಿಣಾಮ. ಹಿಂದೆ ರಾಮನ ಪ್ರತಿಯೊಂದು ಕ್ರಿಯೆಯೂ ಸೃಷ್ಟಿಗೆ ಒಳಿತು ಮಾಡುವಂತಿತ್ತು. ಅದೇ ರಾವಣನ ಕ್ರಿಯೆ ಕೆಡುಕು ಮಾಡುತ್ತಿತ್ತು. ಇದರರ್ಥ ಈ ಜಗತ್ತಿನಲ್ಲಿ ನನ್ನಿಷ್ಟದಂತೆ ನಾನು ನಡೆದರೇನು ಎಂದು ಯಾರೂ ಭಾವಿಸಬಾರದು ನನ್ನಿಷ್ಟ ಎನ್ನುವುದು ಸುತ್ತಲ ವಾತಾವರಣದ ಮೇಲೆ ಪರಿಣಾಮ ಬೀರಲಿದೆ. ಅದು ಒಳಿತಾಗಿರಬೇಕು ಎಂದರೆ ರಾಮನ ಕ್ರಿಯೆಯನ್ನು ಅನುಸರಿಸಬೇಕು ಎಂದು ತಿಳಿಸಿದರು.
    ಇಲ್ಲಿ ಮಾಡುವ ರಾಮೋತ್ಸವ, ಸೀತಾಕಲ್ಯಾಣೋತ್ಸವ ಕಾರ್ಯಕ್ರಮಗಳಿಂದ ಪ್ರಯೋಜನವೇನು ಎಂದು ಕೆಲವರು ಪಶ್ನಿಸಬಹುದು. ಆದರೆ ರಾಮರಾಜ್ಯದ ಬರೀ ಕನಸು ಕಂಡರೆ ಸಾಲದು. ಅದು ಸಾಕಾರಗೊಳ್ಳಲು ನಾವು ಸಹ ಸಂಸ್ಕಾರವಂತಾರಬೇಕು. ಅದು ಸಿಗಬೇಕಾದರೆ ಇಂತಹ ಕಾರ್ಯಗಳು ಜರುಗಬೇಕು ಎಂದು ಅಭಿಪ್ರಾಯಪಟ್ಟರು.
    ಇಲ್ಲಿ ದಶರಥ, ಜನಕರಾಜರ ಮನಸ್ಥಿತಿ ಹೃದಯದೊಳಗೆ ಬಂದರೆ ಮನೆಯಲ್ಲಿ ನಮ್ಮ ಮಕ್ಕಳು ರಾಮಲ-ಲಕ್ಷ್ಮಣರಾಗುತ್ತಾರೆ,. ನಾವೇ ಸಿದ್ಧರಾಗದಿದ್ದರೆ ಮುಂದಿನ ಪೀಳಿಗೆಯಲ್ಲಿ ಸಂಸ್ಕಾರ, ಸದ್ಗುಣ ಸಂಪನ್ನತೆಯನ್ನು ನಿರೀಕ್ಷಿಸಲು ಹೇಗೆ ಸಾಧ್ಯ. ಅದು ಸಾಧ್ಯವಾಗಿಸಲು ಹಿರಿಯವರಾದ ನಾವು ಶುದ್ಧ ಮನಸ್ಸಿನಿಂದ ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
    ಶ್ರೀರಾಮ ಪಟ್ಟಾಭಿಷೇಕ ಧಾರ್ಮಿಕ ಕಾರ್ಯಕ್ರಮ ರುಕ್ಷಾವತಿ ರಾಮಚಂದ್ರ ಸೇವಾಭಾಗಿತ್ವದಲ್ಲಿ ಜರುಗಿತು. ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ನಡೆದ ಅಖಂಡ ಭಜನೆಯ ಸಮಾಪ್ತಿಯಲ್ಲಿ ವಿದುಷಿ ವಸುಧಾ ಶರ್ಮ ತಂಡದ ಗಾಯನ ನಡೆಯಿತು.
    ಭಾರತೀ ಪ್ರಕಾಶನ ಹೊರತಂದಿರುವ ಕೆ.ಎಸ್.ಕಣ್ಣನ್ ಅವರ ರಾಮನೇನು ದೇವನೇ? ಹಾಗೂ ವಿಶ್ವೇಶ್ವರ ಭಟ್ ಉಂಡೇಮನೆ ಅವರ ರಾಮಾಯಣ ಹಕ್ಕಿನೋಟ ಪುಸ್ತಕವನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಲೇಖಕ ಕೆ.ಎಸ್.ಕಣ್ಣನ್, ವಿಷ್ಣುಭಟ್ ಪಾದೇಕಲ್ಲು ಮಾತನಾಡಿದರು. ಲೇಖಕ ವಿಶ್ವೇಶ್ವರ ಭಟ್ ಉಂಡೇಮನೆ , ಆಚಾರ-ವಿಚಾರ ಗಜಾನನ ಭಟ್, ನಿರ್ವಹಣಾ ಸಮಿತಿ ಅಧ್ಯಕ್ಷ ಸೀತಾರಾಮ, ಕಾರ್ಯದರ್ಶಿ ಪ್ರಸನ್ನ ಉಡುಚೆ, ಪ್ರಧಾನ ಮಠದ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ, ಸುಧನ್ವ ಶಾಸ್ತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts